ಭಾರತದ ಷೇರು ಮಾರುಕಟ್ಟೆ ಒತ್ತಡದಲ್ಲಿದ್ದು, ಸತತ ನಾಲ್ಕನೇ ದಿನವಾದ ಬುಧವಾರ ಕೂಡ ಇಳಿಕೆ ದಾಖಲಿಸಿದೆ. ಜಾಗತಿಕ ಮಟ್ಟದಲ್ಲಿ ಈಕ್ವಿಟಿ ಮಾರ್ಕೆಟ್ ಸಾಗುತ್ತಿರುವ ಹಾದಿಯನ್ನೇ ಭಾರತವೂ ಅನುಸರಿಸುತ್ತಿದೆ. ಬುಧವಾರದಂದು ಬೆಳಗ್ಗೆ ಸೆಷನ್ ನಲ್ಲಿ ಸೆನ್ಸೆಕ್ಸ್ 400 ಪಾಯಿಂಟ್ ಗಳ ಕುಸಿತ ಕಂಡಿತು. 40 ಸಾವಿರ ಪಾಯಿಂಟ್ ಗಳಿಂದ ಕೆಳಗೆ ಇಳಿಯಿತು.
ಕೇವಲ ನಾಲ್ಕು ದಿನದಲ್ಲಿ ಸೆನ್ಸೆಕ್ಸ್ ಸೂಚ್ಯಂಕ 1400 ಪಾಯಿಂಟ್ ಗಳ ಇಳಿಕೆ ಕಂಡಿದ್ದು, 5 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹೂಡಿಕೆದಾರರ ಸಂಪತ್ತು ಕೊಚ್ಚಿಹೋಗಿದೆ. ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ಮಂಗಳವಾರ ರಾತ್ರಿ ಮಾರಾಟದ ಒತ್ತಡ ಕಂಡುಬಂದಿದ್ದು, ಬುಧವಾರ ಬೆಳಗ್ಗೆ ಏಷ್ಯಾದ ಹಲವು ಮಾರ್ಕೆಟ್ ಗಳು ಇಳಿಕೆ ಕಂಡವು.
ಚೀನಾದಲ್ಲಿ ಕೊರೊನಾದ ಹೊಸ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಚೀನಾದ ಹೊರಗೆ ಹಲವು ದೇಶಗಳಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಆ ಕಾರಣಕ್ಕೆ ಹೂಡಿಕೆದಾರರು ಚಿನ್ನ, ಸರ್ಕಾರಿ ಬಾಂಡ್ ಗಳಂಥ ಸುರಕ್ಷಿತ ಹೂಡಿಕೆಗಳ ಕಡೆಗೆ ಮನಸ್ಸು ಮಾಡುತ್ತಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮುಂದುವರಿಸಿದ್ದಾರೆ. ಸದ್ಯಕ್ಕೆ ದೊರೆತಿರುವ ಮಾಹಿತಿ ಪ್ರಕಾರ, ಫೆಬ್ರವರಿ 25ರಂದು 2,315.07 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications