For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆ ಮತ್ತೆ ಕುಸಿತ, ಹೂಡಿಕೆದಾರರ 6.47 ಲಕ್ಷ ಕೋಟಿ ರು ನಷ್ಟ

|

ಭಾರತದ ಷೇರುಪೇಟೆಯಲ್ಲಿ ಹೂಡಿಕೆದಾರರು ಸತತವಾಗಿ ನ‍ಷ್ಟ ಅನುಭವಿಸುತ್ತಿದ್ದಾರೆ. ಮಂಗಳವಾರ(ಜೂನ್ 7)ದಂದು ಸರಿ ಸುಮಾರು 6.47 ಲಕ್ಷ ಕೋಟಿ ರು ನಷ್ಟ ದಾಖಲಾಗಿದೆ. ದಿನದ ವಹಿವಾಟು ಅಂತ್ಯಕ್ಕೆ ಬಿಎಸ್‌ಸಿ ಸೆನ್ಸೆಕ್ಸ್ 568 ಅಂಕ ಅಥವಾ ಶೇಕಡ 1.02 ಇಳಿಕೆ ಕಂಡು 55,107.34ಕ್ಕೆ ತಲುಪಿದೆ. ಎನ್‌ಎಸ್‌ಸಿ ನಿಫ್ಟಿ 153 ಅಂಕ ಅಥವಾ ಶೇಕಡ 0.92 ಕುಸಿದು 16,416ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ಮಿಡ್, ಸ್ಮಾಲ್ ಕ್ಯಾಪ್ ಷೇರುಗಳು ಕ್ರಮವಾಗಿ ಶೇಕಡ 0.67, ಶೇಕಡ 0.59 ಕುಸಿದಿದೆ

ಟೈಟಾನ್ ಷೇರುಗಳು ಭಾರೀ ನಷ್ಟವನ್ನು ಅನುಭವಿಸಿದೆ. ಶೇಕಡ 4.48ರಷ್ಟು ಕುಸಿದು ರೂಪಾಯಿ 2,100.05ಕ್ಕೆ ತಲುಪಿದೆ. ಇನ್ನು ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಯುಪಿಎಲ್‌, ಡಾ. ರೆಡ್ಡೀಸ್, ಬ್ರಿಟಾನಿಯಾ ಹಾಗೂ ಎಲ್‌&ಟಿ ಕೂಡಾ ಕೆಳಕ್ಕಿಳಿದಿದೆ. ಇನ್ನು ಬಿಎಸ್‌ಇಯಲ್ಲಿ 1,290 ಷೇರುಗಳು ಮುನ್ನಡೆ ಸಾಧಿಸಿದ್ದರೆ, 2,003 ಷೇರುಗಳು ಕುಸಿದಿದೆ.

ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ: ಟೈಟಾನ್ ಷೇರಿಗೆ ಭಾರೀ ನಷ್ಟಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ: ಟೈಟಾನ್ ಷೇರಿಗೆ ಭಾರೀ ನಷ್ಟ

ಬಿಎಸ್ಇಯಲ್ಲಿ ನೋಂದಾಯಿತ ಪ್ರಮುಖ ಕಂಪನಿಗಳು 2,08,291.75 ಕೋಟಿ ರು ನಷ್ಟ ಅನುಭವಿಸಿ 2,54,33,013.63 ಕೋಟಿ ರು ಮೌಲ್ಯಕ್ಕೆ ತಲುಪಿವೆ.

ಮಾರುಕಟ್ಟೆ ಕುಸಿತ, ಹೂಡಿಕೆದಾರರಿಗೆ 6.47 ಲಕ್ಷ ಕೋಟಿ ರು ನಷ್ಟ

"ಬುಧವಾರದಂದು ಆರ್‌ಬಿಐನ ಕ್ರೆಡಿಟ್ ನೀತಿ ಘೋಷಣೆ ಸಾಧ್ಯತೆಯಿದ್ದು, ಇದಕ್ಕೂ ಮುನ್ನ ಹೂಡಿಕೆದಾರರು ಕಾಯ್ದು ನೋಡುವ ಮನಸ್ಥಿತಿಯಲ್ಲಿದ್ದಾರೆ. ರೂಪಾಯಿ ಮೌಲ್ಯ ಕುಸಿತ ಮತ್ತು ಡಾಲರ್‌ನ ಬಲವರ್ಧನೆಯ ಮಧ್ಯೆ ಭಾರತೀಯ ಷೇರುಗಳನ್ನು ಕೇಳುವವರಿಲ್ಲ, ನಿರಂತರ ಎಫ್‌ಐಐ ಮಾರಾಟದ ಹೊರೆಯನ್ನು ಮಾರುಕಟ್ಟೆಯು ಸರಳವಾಗಿ ಭರಿಸಿದೆ" ಎಂದು ಕೋಟಕ್ ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಸಂಶೋಧನೆ (ರೀಟೈಲ್) ಈಕ್ವಿಟಿ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.
ಇದೇ ವೇಳೆ ಎನ್ ಟಿ ಪಿ ಸಿ, ಮಾರುತಿ, ಎಂ ಅಂಡ್ ಎಂ, ಭಾರ್ತಿ ಏರ್ ಟೆಲ್, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಪವರ್ ಗ್ರಿಡ್ ಉತ್ತಮ ಕಾರ್ಯ ನಿರ್ವಹಣೆ ತೋರಿ ಲಾಭದತ್ತ ಮುಖ ಮಾಡಿದ್ದವು.

ಮತ್ತೆ ದಾಖಲೆ ಕನಿಷ್ಠ ಮಟ್ಟಕ್ಕೆ ಕುಸಿದ ಎಲ್‌ಐಸಿ ಷೇರುಮತ್ತೆ ದಾಖಲೆ ಕನಿಷ್ಠ ಮಟ್ಟಕ್ಕೆ ಕುಸಿದ ಎಲ್‌ಐಸಿ ಷೇರು

''ಬುಧವಾರ ನಡೆಯಲಿರುವ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ಫಲಿತಾಂಶದ ಮೇಲೆ ಎಲ್ಲರ ಗಮನ ನೆಟ್ಟಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಏರಿಳಿತ, ಬ್ಯಾಂಕಿಂಗ್, ಎಫ್‌ಎಂಸಿಜಿ ಮತ್ತು ಐಟಿ ಪ್ರಮುಖ ಸಂಸ್ಥೆಗಳ ಮಾರಾಟ ಮುಂದುವರೆದಿದೆ''ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ವಿಪಿ - ರಿಸರ್ಚ್ ಅಜಿತ್ ಮಿಶ್ರಾ ಹೇಳಿದ್ದಾರೆ.

ಮಾರುಕಟ್ಟೆ ಕುಸಿತ, ಹೂಡಿಕೆದಾರರಿಗೆ 6.47 ಲಕ್ಷ ಕೋಟಿ ರು ನಷ್ಟ

ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಗೇಜ್ ಶೇಕಡಾ 0.77 ರಷ್ಟು ಕುಸಿದಿದೆ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.67 ರಷ್ಟು ಕುಸಿದಿದೆ.

ಬಿಎಸ್‌ಇ ವಲಯದ ಸೂಚ್ಯಂಕಗಳಲ್ಲಿ, Consumer durable ಸೂಚ್ಯಂಕಗಳು ಶೇಕಡಾ 2.71 ರಷ್ಟು ಕುಸಿದವು, ನಂತರ ರಿಯಾಲ್ಟಿ (ಶೇ 1.57), ಕ್ಯಾಪಿಟಲ್ ಗೂಡ್ಸ್ (ಶೇ 1.53), ಎಫ್‌ಎಂಸಿಜಿ (ಶೇ 1.42), ಐಟಿ (ಶೇ 1.42), ಟೆಕ್ (ಶೇ 1.32) ಮತ್ತು ಮೂಲ ಸಾಮಗ್ರಿಗಳು (ಶೇ 1.17). ಇದಕ್ಕೆ ವ್ಯತಿರಿಕ್ತವಾಗಿ, ತೈಲ ಮತ್ತು ಅನಿಲ, ಇಂಧನ, ಟೆಲಿಕಾಂ, ಉಪಯುಕ್ತತೆಗಳು, ಆಟೋ ಮತ್ತು ವಿದ್ಯುತ್ ಲಾಭದೊಂದಿಗೆ ಕೊನೆಗೊಂಡಿದೆ.

English summary

Investors Lose More Than ₹ 6.47 Lakh Crore As Markets Fall

Investors' wealth on Tuesday tumbled over ₹ 2 lakh crore amid heavy selling pressure in domestic equities.
Story first published: Tuesday, June 7, 2022, 21:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X