For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಇಂಧನ ಬೇಡಿಕೆ ಸಹಜ ಸ್ಥಿತಿಗೆ 6ರಿಂದ 9 ತಿಂಗಳು: ಐಒಸಿ

|

ಭಾರತದಲ್ಲಿ ಮೊದಲಿನಂತೆ ಇಂಧನದ ಬೇಡಿಕೆ ಸಹಜ ಸ್ಥಿತಿಗೆ ಮರಳಲು 6ರಿಂದ 9 ತಿಂಗಳು ಬೇಕಾಗಬಹುದು. ಏಕೆಂದರೆ ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಈಗಲೂ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಇದೆ. ಆದ್ದರಿಂದ ಬೇಡಿಕೆ ಮತ್ತೆ ಸಹಜ ಸ್ಥಿತಿಗೆ ಮರಳುವುದಕ್ಕೆ ಸಮಯ ಬೇಕಾಗುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹಣಕಾಸು ವಿಭಾಗದ ನಿರ್ದೇಶಕ ಎಸ್.ಕೆ. ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲೆ ನೀವು ಸರ್ಕಾರಕ್ಕೆ ಪಾವತಿಸುವ ತೆರಿಗೆ ಎಷ್ಟು?

ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಇದ್ದ ಏಪ್ರಿಲ್ ನಲ್ಲಿ ತೈಲ ಮಾರಾಟದಲ್ಲಿ 45.8% ಕಡಿಮೆ ಆಗಿತ್ತು. ಆದರೆ ಮೇ ತಿಂಗಳಲ್ಲಿ ನಿರ್ಬಂಧ ತೆರವಾಗುತ್ತಾ ಬಂದರೂ ಈಗಲೂ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಇದೆ. ಸಹಜ ಸ್ಥಿತಿಗೆ ಬರಲು ಆರರಿಂದ ಒಂಬತ್ತು ತಿಂಗಳು ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

ಜುಲೈನಲ್ಲಿ ಡೀಸೆಲ್ ಬೇಡಿಕೆ 13% ಕುಸಿತ
 

ಜುಲೈನಲ್ಲಿ ಡೀಸೆಲ್ ಬೇಡಿಕೆ 13% ಕುಸಿತ

ಮೇ ತಿಂಗಳಲ್ಲಿ ಚೇತರಿಕೆ ಕಾಣಿಸಿಕೊಂಡಿತ್ತು. ಆದರೆ ಜೂನ್ ತಿಂಗಳ ದ್ವಿತೀಯಾರ್ಧದಿಂದ ತೈಲ ಮಾರಾಟ ಕಡಿಮೆ ಆಗಿದೆ. ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಡೀಸೆಲ್ ಗೆ ಒಟ್ಟು ಬೇಡಿಕೆಯ ಐದನೇ ಎರಡು ಭಾಗದಷ್ಟು ಇದೆ. ಜೂನ್ ಗೆ ಹೋಲಿಸಿದರೆ ಜುಲೈನಲ್ಲಿ ಬೇಡಿಕೆ 13% ಕುಸಿದಿದ್ದು, 4.85 ಮಿಲಿಯನ್ ಟನ್ ಗೆ ಇಳಿಕೆ ಆಗಿದೆ. ಇನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ 21% ಕಡಿಮೆ ಇದೆ.

ಪೆಟ್ರೋಲ್ ಮಾರಾಟ 11.5% ಕಡಿಮೆ

ಪೆಟ್ರೋಲ್ ಮಾರಾಟ 11.5% ಕಡಿಮೆ

ಪೆಟ್ರೋಲ್ ಮಾರಾಟವು ಜೂನ್ ಗೆ ಹೋಲಿಸಿದಲ್ಲಿ ಜುಲೈನಲ್ಲಿ 1% ಇಳಿಕೆಯಾಗಿದ್ದು, 2.03 ಮಿಲಿಯನ್ ಟನ್ ತಲುಪಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದಲ್ಲಿ 11.5% ಕಡಿಮೆ ಆಗಿದೆ. ಜೆಟ್ ಇಂಧನವು ಜೂನ್ ಗಿಂತ ಜುಲೈನಲ್ಲಿ 4% ಜಾಸ್ತಿ ಆಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 65% ಇಳಿಕೆ ಆಗಿದೆ.

ಅಡುಗೆ ಅನಿಲ ಎಲ್ ಪಿಜಿ ಬೇಡಿಕೆಯಲ್ಲಿ ನಿರಂತರ ಏರಿಕೆ

ಅಡುಗೆ ಅನಿಲ ಎಲ್ ಪಿಜಿ ಬೇಡಿಕೆಯಲ್ಲಿ ನಿರಂತರ ಏರಿಕೆ

ಆದರೆ, ನಿರಂತರವಾಗಿ ಬೇಡಿಕೆ ಹೆಚ್ಚುತ್ತಾ ಹೋದದ್ದು ಅಡುಗೆ ಅನಿಲ ಎಲ್ ಪಿಜಿಗೆ ಮಾತ್ರ. ಜೂನ್ ಗಿಂತ ಜುಲೈನಲ್ಲಿ 10% ಹೆಚ್ಚಾಗಿ, 2.27 ಮಿಲಿಯನ್ ಟನ್ ಮುಟ್ಟಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಮಾರಾಟ ಪ್ರಮಾಣ 3.5% ಜಾಸ್ತಿ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಐಒಸಿ ನಿವ್ವಳ ಲಾಭದಲ್ಲಿ 47% ಕಡಿಮೆ ಆಗಿದೆ. ಆದರೆ ಎರಡನೇ ತ್ರೈಮಾಸಿಕದಲ್ಲಿ ಲಾಭ ಆಗಬಹುದು.

English summary

IOC Predicts, India's Fuel Demand May Take 6 To 9 Months To Reach Normal Levels

Oil marketing company predicts, fuel demand in India to come back to normal level may take 6 to 9 month time.
Company Search
COVID-19