For Quick Alerts
ALLOW NOTIFICATIONS  
For Daily Alerts

ಗೋಲ್ಡನ್ ಚಾರಿಯೆಟ್ ಸೇವೆ 2021ರ ಜನವರಿಯಿಂದ ಆರಂಭಕ್ಕೆ ಸಿದ್ಧತೆ

By ಅನಿಲ್ ಆಚಾರ್
|

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ (ಐಆರ್ ಸಿಟಿಸಿ)ಯಿಂದ ಗೋಲ್ಡನ್ ಚಾರಿಯೆಟ್ ಸೇವೆಯನ್ನು 2021ರ ಜನವರಿಯಿಂದ ಆರಂಭಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಮಾರ್ಕೆಟಿಂಗ್ ಕಾರಣಗಳಿಗಾಗಿ 2020ರ ಜನವರಿಯಲ್ಲಿ ಗೋಲ್ಡನ್ ಚಾರಿಯೆಟ್ ವಿಲಾಸಿ ರೈಲು ಕಾರ್ಯಾಚರಣೆಯನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಐಆರ್ ಸಿಟಿಸಿಗೆ ವಹಿಸಲಾಯಿತು.

ಈ ರೈಲು ಪ್ರಯಾಣವು ಬೆಂಗಳೂರಿನಿಂದ ಆರಂಭವಾಗುತ್ತದೆ. ಬೆಂಗಳೂರಿಗೆ ವಾಪಸಾಗುವ ಮುನ್ನ ಕರ್ನಾಟಕ, ಕೇರಳ, ತಮಿಳುನಾಡಿನ ಹಲವು ಸ್ಥಳಗಳನ್ನು ಸಂಚರಿಸಿರುತ್ತದೆ. ಪ್ರವಾಸಿಗರಿಗಾಗಿ ಐಆರ್ ಸಿಟಿಸಿಯಿಂದ ಮೂರು ಪ್ಯಾಕೇಜ್ ಗಳನ್ನು ಅವುಗಳ ವಿವರ ಹೀಗಿವೆ:

ಪ್ರೈಡ್ ಆಫ್ ಕರ್ನಾಟಕ ಪ್ರವಾಸ ಪ್ಯಾಕೇಜ್
ಈ ಪ್ಯಾಕೇಜ್ ನಲ್ಲಿ 6 ರಾತ್ರಿ/ 7 ಹಗಲು ಪ್ರವಾಸ ಇರುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು, ಚಿಕ್ಕಮಗಳೂರು, ಹಂಪಿ. ಬದಾಮಿ ಗುಹೆಗಳು, ಪಟ್ಟದಕಲ್ಲು, ಹಳೇಬೀಡು ದೇವಾಲಯ, ಗೋವಾದ ಗೋಲ್ಡನ್ ಬೀಚ್ ಗಳು ಒಳಗೊಂಡಿವೆ.

11.58 ಲಕ್ಷ ರೈಲ್ವೆ ಸಿಬ್ಬಂದಿಗೆ 78 ದಿನಕ್ಕೆ ಸಮಾನವಾದ ವೇತನ ಬೋನಸ್11.58 ಲಕ್ಷ ರೈಲ್ವೆ ಸಿಬ್ಬಂದಿಗೆ 78 ದಿನಕ್ಕೆ ಸಮಾನವಾದ ವೇತನ ಬೋನಸ್

ಜ್ಯುವೆಲ್ಸ್ ಆಫ್ ಸೌತ್ ಟೂರ್ ಪ್ಯಾಕೇಜ್
ಈ ಪ್ಯಾಕೇಜ್ ನಲ್ಲಿ 6 ರಾತ್ರಿ/ 7 ಹಗಲು ಪ್ರವಾಸ ಇರುತ್ತದೆ. ಮೈಸೂರು, ಮಹಾಬಲಿಪುರಂ, ಹಂಪಿ, ಚೆಟ್ಟಿನಾಡ್, ತಂಜಾವೂರ್, ಕುಮಾರಕೊಮ್, ಕೊಚ್ಚಿ.

ಗೋಲ್ಡನ್ ಚಾರಿಯೆಟ್ ಸೇವೆ 2021ರ ಜನವರಿಯಿಂದ ಆರಂಭಕ್ಕೆ ಸಿದ್ಧತೆ

ಗ್ಲಿಮ್ಸಸ್ ಆಫ್ ಕರ್ನಾಟಕ ಟೂರ್ ಪ್ಯಾಕೇಜ್
ಈ ಪ್ಯಾಕೇಜ್ ನಲ್ಲಿ 3 ರಾತ್ರಿ/ 4 ಹಗಲು ಪ್ರವಾಸ ಇರುತ್ತದೆ. ಮೈಸೂರು, ಬಂಡೀಪುರ ಹಾಗೂ ಹಂಪಿ.

ಗೋಲ್ಡನ್ ಚಾರಿಯೆಟ್ ವಿಲಾಸಿ ರೈಲು ಕಾರ್ಯಾಚರಣೆ ಆರಂಭವಾದದ್ದು 2008ರಲ್ಲಿ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಸಹಯೋಗದಲ್ಲಿ. ಈ ರೈಲಿನಲ್ಲಿ 18 ಬೋಗಿಗಳು ಮತ್ತು 44 ಅತಿಥಿ ಕೋಣೆಗಳು ಇರುತ್ತವೆ. ಒಟ್ಟು 84 ಪ್ರಯಾಣಿಕರ ಸಾಮರ್ಥ್ಯ ಇರುತ್ತದೆ.

ಪ್ರತಿ ಕ್ಯಾಬಿನ್ ನಲ್ಲೂ ಆಧುನಿಕ ಸೌಲಭ್ಯ ಇರುತ್ತದೆ. ಸಣ್ಣ ವಾರ್ಡ್ ರೋಬ್, ಎಲ್ ಸಿಡಿ ಟಿವಿ, ವ್ಯಾನಿಟಿ ಡೆಸ್ಕ್, ಎಲೆಕ್ಟ್ರಿಕಲ್ ಸಾಕೆಟ್ ಗಳು, ಖಾಸಗಿ ವಾಷ್ ರೂಮ್ ಮುಂತಾದವು ಒಳಗೊಂಡಿರುತ್ತವೆ. ಗೋಲ್ಡನ್ ಚಾರಿಯೆಟ್ ನಿಂದ ಭಾರತೀಯರಿಗಾಗಿ ಈ ಕೆಳಕಂಡ ಆಫರ್ ಗಳನ್ನು ಪರಿಚಯಿಸಲಾಗಿದೆ.

* ಒಬ್ಬರಿಗೆ ಪಾವತಿ ಮಾಡಿ ಮತ್ತು ಇನ್ನೊಬ್ಬರು ಸಹವರ್ತಿಗೆ ಕೇವಲ 50% ಪಾವತಿಸಿ ಅಥವಾ

* ದರದ ಮೇಲೆ ಇಡೀ ಟೂರ್ ಪ್ಯಾಕೇಜ್ ಗೆ 35% ರಿಯಾಯಿತಿ ಅಥವಾ

* 2 ರಾತ್ರಿ/ 3 ಹಗಲಿಗೆ ಒಬ್ಬ ವ್ಯಕ್ತಿಗೆ ಕೇವಲ 59,999 ರುಪಾಯಿ. ಆದರೆ ಇದು ಟ್ವಿನ್ ಷೇರಿಂಗ್ ಆಧಾರದಲ್ಲಿ.

English summary

IRCTC's Golden Chariot All Set To Resume Service From 2021 January

Golden chariot from IRCTC all set to resume service from 2021, January. Here is the details of operations.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X