ಐಆರ್ ಸಿಟಿಸಿ ಷೇರುಗಳು ಗುರುವಾರ 52 ವಾರಗಳ ಗರಿಷ್ಠ ಮಟ್ಟ, ಪ್ರತಿ ಷೇರಿನ ಬೆಲೆ 1976 ರುಪಾಯಿಯನ್ನು ತಲುಪಿತ್ತು. ಐಪಿಒನಲ್ಲಿ ಈ ಷೇರು ಖರೀದಿ ಮಾಡಿದವರಿಗೆ ಲಿಸ್ಟಿಂಗ್ ಆದ ನಂತರ 500 ಪರ್ಸೆಂಟ್ ರಿಟರ್ನ್ಸ್ ಕೊಟ್ಟಿದೆ. ಬಿಎಸ್ ಇ ಸೂಚ್ಯಂಕದಲ್ಲಿ ಗುರುವಾರ 5.30 ಪರ್ಸೆಂಟ್ ಏರಿಕೆ ಕಂಡು ದಿನಾಂತ್ಯಕ್ಕೆ ರು. 1927.75ಗೆ ವಹಿವಾಟು ಮುಗಿಸಿದೆ.
ಕಳೆದ ವರ್ಷದ ಅಕ್ಟೋಬರ್ 14ನೇ ತಾರೀಕು ಐಆರ್ ಸಿಟಿಸಿ ಷೇರು ಲಿಸ್ಟಿಂಗ್ ಆಗಿತ್ತು. 320 ರುಪಾಯಿ ಐಪಿಒ ಬೆಲೆಗೆ ವಿತರಣೆ ಆಗಿದ್ದು, ಲಿಸ್ಟಿಂಗ್ ಆದ ದಿನ 101.25% ಪ್ರೀಮಿಯಂ 644 ರುಪಾಯಿಗೆ ವಹಿವಾಟು ನಡೆಸಿತ್ತು. ಮೂರನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಐಆರ್ ಸಿಟಿಸಿ ನಿವ್ವಳ ಲಾಭ 179.6 ಪರ್ಸೆಂಟ್ ಏರಿಕೆ ಆಗಿದೆ.

ಐಆರ್ ಸಿಟಿಸಿಯಿಂದ ಗುರುವಾರ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ನ ವಾಣಿಜ್ಯ ಕಾರ್ಯಚಟುವಟಿಕೆ ಆರಂಭವಾಯಿತು. ಈ ರೈಲು ವಾರಾಣಸಿ ಮತ್ತು ಇಂದೋರ್ ಮಧ್ಯೆ ಸಂಚರಿಸುತ್ತದೆ. ಜ್ಯೋತಿರ್ಲಿಂಗಗಳಿರುವ ಮೂರು ಪವಿತ್ರ ಸ್ಥಳಗಳನ್ನು ಈ ರೈಲು ಸಂಪರ್ಕಿಸುತ್ತದೆ. ಇನ್ನು ಐಆರ್ ಸಿಟಿಸಿಯಿಂದ 10 ರುಪಾಯಿ ಮಧ್ಯಂತರ ಲಾಭಾಂಶ ಘೋಷಣೆ ಮಾಡಿದ್ದು, ಅದಕ್ಕೆ ಫೆಬ್ರವರಿ 25, 2020ರ ದಿನಾಂಕ ನಿಗದಿ ಮಾಡಲಾಗಿದೆ.
More From GoodReturns

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications