For Quick Alerts
ALLOW NOTIFICATIONS  
For Daily Alerts

'ಫಾರ್ಚೂನ್' 40 ವರ್ಷದೊಳಗಿನ ಪ್ರಭಾವಿಗಳ ಪಟ್ಟಿಯಲ್ಲಿ ಇಶಾ, ಆಕಾಶ್, ರವೀಂದ್ರನ್

|

ಫಾರ್ಚೂನ್ ನಿಯತಕಾಲಿಕೆಯಿಂದ ಜಾಗತಿಕ ಮಟ್ಟದಲ್ಲಿ ಪ್ರಭಾವಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದ್ದು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಂದಿ ಪ್ರಭಾವಿ ವ್ಯಕ್ತಿಗಳನ್ನು ಆರಿಸಲಾಗಿದೆ. ಈ ಆಯ್ಕೆಯನ್ನು 40ರ ಒಳಗಿನ 40 (40ರ Under 40) ಎಂದು ಕರೆಯಲಾಗಿದ್ದು, ಇದೇ ಮೊದಲ ಬಾರಿಗೆ ಆಕಾಶ್ ಮತ್ತು ಇಶಾ ಅಂಬಾನಿ ಹಾಗೂ ರವೀಂದ್ರನ್ ಸ್ಥಾನ ಪಡೆದಿದ್ದಾರೆ.

ಸಿಬ್ಬಂದಿಗೆ ನೀಡುವ ಬೆಂಬಲ, ಹೊಸ ಬಗೆಯ ವ್ಯವಹಾರ ನಿರ್ವಹಣೆ ವಿಧಾನ ಇತ್ಯಾದಿಯನ್ನು 'ಫಾರ್ಚೂನ್' ಗಮನಿಸಿದೆ. ಹಣಕಾಸು, ತಂತ್ರಜ್ಞಾನ, ಹೆಲ್ತ್ ಕೇರ್, ಸರ್ಕಾರ ಮತ್ತು ರಾಜಕೀಯ ಹಾಗೂ ಮಾಧ್ಯಮ ಮತ್ತು ಮನರಂಜನೆ- ಈ ಐದು ವಿಭಾಗಗಳಲ್ಲಿ ಜಾಗತಿಕ ಮಟ್ಟದ ಪ್ರಭಾವಿಗಳನ್ನು ಆಯ್ಕೆ ಮಾಡಲಾಗಿದೆ.

ಆಕಾಶ್, ಇಶಾ ಹಾಗೂ ರವೀಂದ್ರನ್

ಆಕಾಶ್, ಇಶಾ ಹಾಗೂ ರವೀಂದ್ರನ್

ಇದರಲ್ಲಿ ತಂತ್ರಜ್ಞಾನ ವಿಭಾಗದಿಂದ ಇಶಾ ಹಾಗೂ ಆಕಾಶ್ ಅಂಬಾನಿ ಮತ್ತು ಬೈಜೂಸ್ ಎಡ್ ಟೆಕ್ ಸ್ಟಾರ್ಟ್ ಅಪ್ ಕಂಪೆನಿ ಸ್ಥಾಪಕ ರವೀಂದ್ರನ್ ಆಯ್ಕೆಯಾಗಿದ್ದಾರೆ. ಭಾರತದ ಅತಿ ದೊಡ್ಡ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ ಮಕ್ಕಳು ಆಕಾಶ್ ಮತ್ತು ಇಶಾ. ರಿಲಯನ್ಸ್ ಒಂದು ಕೌಟುಂಬಿಕ ಉದ್ಯಮವಾಗಿ ನಡೆದುಕೊಂಡು ಬರುತ್ತಿದೆ. ಆಕಾಶ್ ಕಂಪೆನಿಗೆ ಸೇರಿದ್ದು 2014ರಲ್ಲಿ. ಬ್ರೌನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಪದವಿ ಪಡೆದ ನಂತರ ಕಂಪೆನಿಗೆ ಸೇರ್ಪಡೆಯಾದರು. ಇನ್ನು ಇಶಾ ಅವರು ಸೇರ್ಪಡೆ ಆಗಿದ್ದು ಒಂದು ವರ್ಷದ ನಂತರ. ಅದಕ್ಕೂ ಮುನ್ನ ಯೇಲ್, ಸ್ಟ್ಯಾನ್ ಫೋರ್ಡ್ ಮತ್ತು ಮೆಕ್ ಕಿನ್ಸಿಯಲ್ಲಿ ವ್ಯಾಸಂಗ ಮಾಡಿದ್ದರು.

ಜಿಯೋಮಾರ್ಟ್ ಮೂಲಕ ಸವಾಲು

ಜಿಯೋಮಾರ್ಟ್ ಮೂಲಕ ಸವಾಲು

ಜಿಯೋಮಾರ್ಟ್ ಈಚೆಗೆ ಆರಂಭ ಮಾಡುವುದರಲ್ಲಿ ಆಕಾಶ್ ಮತ್ತು ಇಶಾ ನೆರವು ಇದೆ. ಅಮೆಜಾನ್ ಹಾಗೂ ವಾಲ್ ಮಾರ್ಟ್ ಗೆ ಸೇರಿದ ಫ್ಲಿಪ್ ಕಾರ್ಟ್ ಗೆ ಸವಾಲೊಡ್ಡಲು ಜಿಯೋಮಾರ್ಟ್ ಗುರಿ ಇರಿಸಿಕೊಂಡಿದೆ. ಈಚೆಗೆ ಜಿಯೋ ಇನ್ಫೋಕಾಮ್ ನಲ್ಲಿ ಫೇಸ್ ಬುಕ್ ಹೂಡಿಕೆ ಮಾಡುವಲ್ಲಿ ಇಶಾ ಹಾಗೂ ಆಕಾಶ್ ಪಾತ್ರ ಪ್ರಮುಖವಾಗಿತ್ತು. ಸದ್ಯಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಮುನ್ನಡೆಸುವಲ್ಲಿ ಇಶಾ ಅಂಬಾನಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಈಚೆಗೆ ನೆಟ್ ಮೆಡ್ಸ್ ಮತ್ತು ಫಾರ್ಚೂನ್ ಸಮೂಹ ಖರೀದಿಯ ವ್ಯವಹಾರ ಒಪ್ಪಂದ ಯಶಸ್ವಿಯಾಗಿ ಆಗಿದೆ.

65 ಬಿಲಿಯನ್ USD ಖಾಸಗಿ ಹೂಡಿಕೆ

65 ಬಿಲಿಯನ್ USD ಖಾಸಗಿ ಹೂಡಿಕೆ

ಫೇಸ್ ಬುಕ್ ನಿಂದ ಜಿಯೋ ಇನ್ಫೋಕಾಮ್ ನಲ್ಲಿ 9.99% ಷೇರಿನ ಪಾಲನ್ನು 5.7 ಬಿಲಿಯನ್ USDಗೆ ಖರೀದಿ ಮಾಡುವಲ್ಲಿ ಜಿಯೋ ಮಂಡಳಿ ಸದಸ್ಯರಾಗಿರುವ ಇಶಾ ಹಾಗೂ ಆಕಾಶ್ ಮುಖ್ಯ ಪಾತ್ರ ವಹಿಸಿದರು. ಅಷ್ಟೇ ಅಲ್ಲ, ಆ ನಂತರ ಗೂಗಲ್, ಕ್ವಾಲ್ ಕಾಮ್ ಮತ್ತು ಇಂಟೆಲ್ ನಿಂದ ಜಿಯೋ ಇನ್ಫೋಕಾಮ್ ನಲ್ಲಿ ಹೂಡಿಕೆ ಆಗುವಂತೆ ಮಾಡುವಲ್ಲಿಯೂ ಇವರಿಬ್ಬರ ಪರಿಶ್ರಮವೂ ಇದೆ. ಈ ಎಲ್ಲದರಿಂದ ಸೇರಿ 65 ಬಿಲಿಯನ್ USD ಖಾಸಗಿ ಹೂಡಿಕೆ ಹರಿದುಬಂದಿದೆ.

ಭಾರತದಲ್ಲೇ ಅತಿ ದೊಡ್ಡ ಎಡ್ ಟೆಕ್ ಕಂಪೆನಿ

ಭಾರತದಲ್ಲೇ ಅತಿ ದೊಡ್ಡ ಎಡ್ ಟೆಕ್ ಕಂಪೆನಿ

ಇನ್ನು ವಿಶ್ವದಲ್ಲೇ ಅತ್ಯಂತ ಯಶಸ್ವಿ ಎಡ್ ಟೆಕ್ ಕಂಪೆನಿ ಬೈಜೂಸ್ ಸ್ಥಾಪಿಸಿದ ಶ್ರೇಯ ರವೀಂದ್ರನ್ ಅವರದು. ಇದು ಭಾರತದಲ್ಲೇ ಅತ್ಯಂತ ದೊಡ್ಡ ಎಜುಕೇಷನ್ ಟೆಕ್ನಾಲಜಿ ಕಂಪೆನಿ. ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಇದರಿಂದ ನೆರವಾಗುತ್ತಿದೆ. ಆಗಸ್ಟ್ ನಲ್ಲಿ ಬೈಜೂಸ್ ನಿಂದ WhiteHat Jr ಅನ್ನು 300 ಮಿಲಿಯನ್ USDಗೆ ಖರೀದಿ ಮಾಡಲಾಗಿದೆ.

English summary

Isha, Akash Ambani And Raveendran In Fortune 40 Under 40 List

This is the first time, Akash, Isha Ambani and Raveendran in the Fortune 40 Under 40 most influential persons global list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X