For Quick Alerts
ALLOW NOTIFICATIONS  
For Daily Alerts

Zomato ಎಲೆಕ್ಟ್ರಿಕ್ ವಾಹನಕ್ಕೆ ಸಿಕ್ತು ಜಿಯೋ-ಬಿಪಿ ಬೆಂಬಲ

|

ಮುಂಬೈ, ಜೂನ್ 16: ಆನ್‌ಲೈನ್ ಆಹಾರ ಬುಕ್ಕಿಂಗ್ ಹಾಗೂ ಡೆಲಿವರಿ ಸೇವೆ ಒದಗಿಸುವ ಝೊಮ್ಯಾಟೋ ಮತ್ತು ಜಿಯೋ-ಬಿಪಿ ಎಲೆಕ್ಟ್ರಿಕ್‌ ವಾಹನಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿವೆ. 2030 ರ ವೇಳೆಗೆ 100% ಎಲೆಕ್ಟ್ರಿಕ್‌ ವಾಹನಗಳನ್ನು ಹೊಂದುವ ಝೊಮ್ಯಾಟೋದ ಬದ್ಧತೆಗೆ ಇದು ಪೂರಕವಾಗಿರಲಿದೆ.

ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮತ್ತು ಬಿಪಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿರುವ ಇಂಧನ ಮತ್ತು ಸಂಚಾರ ಸೌಲಭ್ಯಗಳ ಜಂಟಿ ಸಂಸ್ಥೆ ಜಿಯೋ-ಬಿಪಿ, ಝೊಮ್ಯಾಟೋಗೆ ಎಲೆಕ್ಟ್ರಿಕ್‌ ವಾಹನ ಸಂಚಾರ ಸೇವೆಯನ್ನು ಒದಗಿಸಲಿದ್ದು, ತನ್ನ ಜಿಯೋ-ಬಿಪಿ ಪಲ್ಸ್‌ ಬ್ರ್ಯಾಂಡ್‌ನ ಬ್ಯಾಟರಿ ಬದಲಾವಣೆ ಸ್ಟೇಷನ್‌ಗಳಿಗೆ ಸುಲಭ ಪ್ರವೇಶಾವಕಾಶ ಒದಗಿಸಲಿದೆ.

ಎಲೆಕ್ಟ್ರಿಕ್ ವಾಹನ ಸರಣಿಯಲ್ಲಿ ಎಲ್ಲ ಸಂಸ್ಥೆಗಳಿಗೂ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಜಿಯೋ-ಬಿಪಿ ರೂಪಿಸುತ್ತಿದೆ. ಕಳೆದ ವರ್ಷ ಜಿಯೋ-ಬಿಪಿ ಭಾರತದ ಎರಡು ಅತಿದೊಡ್ಡ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಜಂಟಿ ಸಂಸ್ಥೆಯ ಎಲೆಕ್ಟ್ರಿಕ್ ಸಂಚಾರ ವಹಿವಾಟು ತನ್ನ ಜಿಯೋ-ಬಿಪಿ ಪಲ್ಸ್‌ ಎಂಬ ಬ್ರ್ಯಾಂಡ್ ಅಡಿಯಲ್ಲಿ ಭಾರತೀಯ ಗ್ರಾಹಕರಿಗೆ ಚಾರ್ಜಿಂಗ್‌ ಮೂಲಸೌಕರ್ಯವನ್ನು ಒದಗಿಸುತ್ತಿದೆ. ಜಿಯೋ-ಬಿಪಿ ಪಲ್ಸ್‌ ಮೊಬೈಲ್ ಆಪ್ ಬಳಸಿಕೊಂಡು ಗ್ರಾಹಕರು ತಮ್ಮ ವಾಹನಗಳಿಗೆ ಸಮೀಪದಲ್ಲಿ ಎಲ್ಲಿ ಚಾರ್ಜಿಂಗ್‌ ಸ್ಟೇಷನ್‌ ಇದೆ ಎಂದು ಹುಡುಕಬಹುದಾಗಿದೆ.

ಎಲೆಕ್ಟ್ರಿಕ್ ವಾಹನ ಖರೀದಿಸುವುದರಿಂದ ತೆರಿಗೆಯಲ್ಲೂ ಹಣ ಉಳಿಸಬಹುದೇ? ಹಾಗಾದ್ರೆ ಓದಿ ಎಲೆಕ್ಟ್ರಿಕ್ ವಾಹನ ಖರೀದಿಸುವುದರಿಂದ ತೆರಿಗೆಯಲ್ಲೂ ಹಣ ಉಳಿಸಬಹುದೇ? ಹಾಗಾದ್ರೆ ಓದಿ

ಝೊಮ್ಯಾಟೋ ಜೊತೆಗಿನ ಈ ಒಪ್ಪಂದ

ಝೊಮ್ಯಾಟೋ ಜೊತೆಗಿನ ಈ ಒಪ್ಪಂದ

ಝೊಮ್ಯಾಟೋ ಜೊತೆಗಿನ ಈ ಒಪ್ಪಂದದಿಂದ ಎಲೆಕ್ಟ್ರಿಕ್‌ ವಾಹನವನ್ನು ಬಳಸುವವರ ಸಂಖ್ಯೆ ಇನ್ನಷ್ಟು ವೇಗದಲ್ಲಿ ಹೆಚ್ಚಳವಾಗಲಿದೆ. ಉತ್ತಮ ರೇಂಜ್‌ ನೀಡುವ ಉತ್ತಮ ಗುಣಮಟ್ಟದ ಬ್ಯಾಟರಿಗಳು ಮತ್ತು ಕೆಲವೇ ನಿಮಿಷಗಳಲ್ಲಿ ಮುಗಿಯುವ ಬ್ಯಾಟರಿ ಬದಲಾವಣೆ ಪ್ರಕ್ರಿಯೆಯಿಂದಾಗಿ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ಬದಲಾವಣೆ ಅತ್ಯಂತ ಸೂಕ್ತವಾದ ವಿಧಾನವಾಗಿದೆ. ಅದರಲ್ಲೂ, ಡೆಲಿವರಿ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಇದು ಅತ್ಯಂತ ಅನುಕೂಲಕರ ವಿಧಾನವಾಗಿದೆ. ಹೀಗಾಗಿ, ಡೆಲಿವರಿ ಮತ್ತು ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಬ್ಯಾಟರಿ ಬದಲಾವಣೆ ಮಹತ್ವದ ಕೆಲಸ ಮಾಡಲಿದೆ.

ಇಂಧನ ಮತ್ತು ಮೊಬಿಲಿಟಿ ಕ್ಷೇತ್ರ

ಇಂಧನ ಮತ್ತು ಮೊಬಿಲಿಟಿ ಕ್ಷೇತ್ರ

ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದಲ್ಲಿ ಭಾರತದ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ 20 ವರ್ಷಗಳಲ್ಲಿ ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಯೊ-ಬಿಪಿ ಮೊಬಿಲಿಟಿ ಸ್ಟೇಷನ್ ಗಳನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲೆಂದೇ ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ

ಸಂಯೋಜಿತ ಇಂಧನಗಳು, ಇವಿ ಚಾರ್ಜಿಂಗ್, ರಿಫ್ರೆಶ್ ಮೆಂಟ್ ಗಳು ಮತ್ತು ಆಹಾರ(ಹೊಟೇಲ್) ಸೇರಿದಂತೆ - ಸಂಚಾರ ನಡೆಸುವ ಗ್ರಾಹಕರಿಗೆ ನೆರವಾಗುವಂತೆ ಹಲವು ಸೇವೆಗಳನ್ನು ಜೊತೆಯಾಗಿ ನೀಡಲಿದೆ.

ಸಂಯೋಜಿತ ಇಂಧನವನ್ನು ನೀಡುತ್ತವೆ

ಸಂಯೋಜಿತ ಇಂಧನವನ್ನು ನೀಡುತ್ತವೆ

ಸಾಮಾನ್ಯ ಇಂಧನಗಳ ಬದಲಿಗೆ, ದೇಶಾದ್ಯಂತ ಜಿಯೊ-ಬಿಪಿ ಮೊಬಿಲಿಟಿ ಕೇಂದ್ರಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಯೋಜಿತ ಇಂಧನವನ್ನು ನೀಡುತ್ತವೆ. ಇಂಧನದ ಕೊಡುಗೆಯು ಅಂತರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ 'ACTIVE' ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ, ಇದು ಇಂಜಿನ್ ಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಎಂಜಿನ್ ಭಾಗಗಳ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ.

ಭಾರತದಲ್ಲಿ ಪ್ರಮುಖ ಇವಿ (EV )ಚಾರ್ಜಿಂಗ್ ಮೂಲಸೌಕರ್ಯ

ಭಾರತದಲ್ಲಿ ಪ್ರಮುಖ ಇವಿ (EV )ಚಾರ್ಜಿಂಗ್ ಮೂಲಸೌಕರ್ಯ

ಜಿಯೊ-ಬಿಪಿ ತನ್ನ ಮೊಬಿಲಿಟಿ ಕೇಂದ್ರಗಳು ಮತ್ತು ಇತರ ಸ್ವತಂತ್ರ ಸ್ಥಳಗಳಲ್ಲಿ - ಮೊಬಿಲಿಟಿ ಪಾಯಿಂಟ್ಗಳಲ್ಲಿ ಇವಿ(EV) ಚಾರ್ಜಿಂಗ್ ಸ್ಟೇಷನ್ ಗಳು ಮತ್ತು ಬ್ಯಾಟರಿ ಸ್ವಾಪ್ ಸ್ಟೇಷನ್ ಗಳ ನೆಟ್ವರ್ಕ್ ಅನ್ನು ಸ್ಥಾಪಿಸುತ್ತದೆ. ಜಂಟಿ ಉದ್ಯಮವು ಭಾರತದಲ್ಲಿ ಪ್ರಮುಖ ಇವಿ (EV )ಚಾರ್ಜಿಂಗ್ ಮೂಲಸೌಕರ್ಯ ಕ್ಷೇತ್ರದಲ್ಲಿ ಮೊದಲಿಗನಾಗುವ ಗುರಿಯನ್ನು ಹೊಂದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬಿಪಿ ನಡುವಿನ ಇಂಧನ ಹಾಗೂ ಸಾರಿಗೆ ಜಂಟಿ ಉದ್ಯಮವಾದ ʻಜಿಯೋ-ಬಿಪಿʼಯು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ʻಇವಿʼ) ಚಾರ್ಜಿಂಗ್ ಕೇಂದ್ರಗಳ ಜಾಲವನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಭಾರತದ ಮೊದಲ ಮತ್ತು ಅತಿದೊಡ್ಡ ಸಂಪೂರ್ಣ ವಿದ್ಯುತ್‌ಚಾಲಿತ ಬಾಡಿಗೆ ವಾಹನಗಳ (ಆಲ್‌ ಎಲೆಕ್ಟ್ರಿಕ್‌ ರೈಡ್-ಹೇಲಿಂಗ್) ವೇದಿಕೆಯಾದ ʻಬ್ಲೂಸ್ಮಾರ್ಟ್ʼನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ

English summary

Jio-BP to Power Zomato’s Electric Vehicle Journey

Jio-bp, a fuels and mobility joint venture between Reliance Industries Limited and bp, on Wednesday said it has entered into an agreement to support Zomato in fulfilling its commitment to have 100 per cent electric vehicle fleet by 2030.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X