For Quick Alerts
ALLOW NOTIFICATIONS  
For Daily Alerts

ಭಾರತದ ಅತಿದೊಡ್ಡ ಬ್ಯಾಂಕ್ ವಂಚನೆ ಜಾಲ ಬಹಿರಂಗಪಡಿಸಿದ ಸಿಬಿಐ

|

ಡಿಎಚ್ಎಫ್ಎಲ್ ಪ್ರವರ್ತಕರಾದ ಕಪಿಲ್ ಹಾಗೂ ಧೀರಜ್ ವಾಧವಾನ್ ಅವರ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕಿಂಗ್ ಸಂಸ್ಥೆಗಳಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಭಾರತದ ಅತಿದೊಡ್ಡ ಬ್ಯಾಂಕ್ ವಂಚನೆ ಜಾಲ ಬಹಿರಂಗಪಡಿಸಿದ ಸಿಬಿಐ ಬಹಿರಂಗ ಪಡಿಸಿದೆ.

 

ಎಬಿಜಿ ಶಿಪ್ ಯಾರ್ಡ್ ಮೇಲಿನ ವಂಚನೆ ಪ್ರಕರಣದ ಮೊತ್ತ ಸುಮಾರು 22, 842 ಕೋಟಿ ರು ದಾಟುತ್ತದೆ. ಮುಂಬೈ ಸೇರಿದಂತೆ 12 ಕಡೆಗಳಲ್ಲಿ ಸಿಬಿಐ ತಂಡ ದಾಳಿ ನಡೆಸಿದ್ದು, ಡಿಎಚ್ಎಫ್ಎಲ್ ಸಂಸ್ಥೆ ಪ್ರವರ್ತಕರನ್ನು ಆರೋಪಿಗಳಾಗಿ ಹೆಸರಿಸಿದೆ.

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (DHFL) ಸಂಸ್ಥೆಯ ಅಂದಿನ ಸಿಎಂಡಿ ಕಪಿಲ್ ವಾಧವಾನ್, ನಿರ್ದೇಶಕರಾದ ಧೀರಜ್ ವಾಧವನ್, ಸೇರಿದಂತೆ 6ಕ್ಕೂ ಅಧಿಕ ರಿಯಲ್ ಎಸ್ಟೇಟ್ ಸಂಸ್ಥೆಗಳ ಮೇಲೆ ಕ್ರಿಮಿನಲ್ ಸಂಚು ಆರೋಪ ಹೊರೆಸಲಾಗಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಸಂಸ್ಥೆಗೆ ಮಾಡಿರುವ ವಂಚನೆ ಮೊತ್ತ 34,165 ಕೋಟಿ ರು ಮೀರುತ್ತದೆ ಎಂದು ಸಿಬಿಐ ಮೂಲಗಳು ತಿಳಿಸಿದೆ.

ಡಿಎಚ್‍ಎಫ್‍ಎಲ್ ಸ್ವಾಧೀನ ಮತ್ತು ವಿಲೀನಕ್ಕೆ ಮುಂದಾದ ಪಿರಾಮಲ್ಡಿಎಚ್‍ಎಫ್‍ಎಲ್ ಸ್ವಾಧೀನ ಮತ್ತು ವಿಲೀನಕ್ಕೆ ಮುಂದಾದ ಪಿರಾಮಲ್

2021ರಲ್ಲಿ DHFL ನ ಪ್ರವರ್ತಕರು ಮತ್ತು ಹಿಂದಿನ ನಿರ್ವಹಣೆ ಮಾಡುವ ಸಂಸ್ಥೆಗಳ ಮೇಲೆ ತನಿಖೆ ನಡೆಸುವಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಕೋರಿತ್ತು. ಯೂನಿಯನ್ ಬ್ಯಾಂಕ್ ಆಫ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 40,623.36 ಕೋಟಿ (ಜುಲೈ 30, 2020 ರಂತೆ) ಕೋಟಿಗಳಷ್ಟು ನಷ್ಟವನ್ನು ಉಂಟುಮಾಡಿದ ಆರೋಪವನ್ನು ಹೊರೆಸಲಾಗಿತ್ತು.

17,394 ಕೋಟಿ ರುಪಾಯಿ ಮೌಲ್ಯದ ವಂಚನೆ

17,394 ಕೋಟಿ ರುಪಾಯಿ ಮೌಲ್ಯದ ವಂಚನೆ

ಯೂನಿಯನ್ ಬ್ಯಾಂಕ್ ಆಫ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 40,623.36 ಕೋಟಿ (ಜುಲೈ 30, 2020 ರಂತೆ) ಕೋಟಿಗಳಷ್ಟು ನಷ್ಟವನ್ನು ಉಂಟುಮಾಡಿದ ಆರೋಪದ ಮೇಲೆ DHFL ನ ಪ್ರವರ್ತಕರು ಮತ್ತು ಹಿಂದಿನ ನಿರ್ವಹಣೆಯನ್ನು ತನಿಖೆ ಮಾಡಲು ಸಿಬಿಐಗೆ ಪತ್ರ ಬರೆದಿತ್ತು.

ಸಾಲದ ಹೊರೆಯಲ್ಲಿ ಕುಗ್ಗಿಹೋಗಿರುವ ಡಿಎಚ್ ಎಫ್ ಎಲ್ ನಲ್ಲಿ ಆರ್ಥಿಕ ವರ್ಷ 2007ರಿಂದ 2019ರ ಮಧ್ಯೆ 17,394 ಕೋಟಿ ರುಪಾಯಿ ಮೌಲ್ಯದ ವಂಚನೆ ನಡೆದಿದೆ

ಈ ಸಂಸ್ಥೆಯಲ್ಲಿ ನಡೆದಿರುವ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಗ್ರಾಂಟ್ ಥೋರ್ ನ್ಟಾನ್ ನೆರವು ಪಡೆಯಲಾಯಿತು. ಕಳೆದ ವರ್ಷ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ (NCLT) ಮುಂಬೈ ಪೀಠವು ಕಳೆದ ವರ್ಷ ಕಂಪೆನಿಯ ದಿವಾಳಿ ನಿರ್ಣಯವನ್ನು ಒಪ್ಪಿಕೊಂಡಿತು.

14,046 ಕೋಟಿ ರುಪಾಯಿ ಮೊತ್ತ
 

14,046 ಕೋಟಿ ರುಪಾಯಿ ಮೊತ್ತ

14,046 ಕೋಟಿ ರುಪಾಯಿ ಮೊತ್ತ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಆರ್. ಸುಬ್ರಮಣಿಯಕುಮಾರ್ ಅವರನ್ನು ಕಂಪೆನಿ ಆಡಳಿತಗಾರರಾಗಿ ನೇಮಿಸಲಾಯಿತು. ಎನ್ ಸಿಎಲ್ ಟಿ ಮುಂದೆ ದಾಖಲಿಸಿರುವ ಅರ್ಜಿ ಪ್ರಕಾರ, ಹಣಕಾಸು ಪರಿಣಾಮ ಬೀರುವ ಅಂದಾಜು 14,046 ಕೋಟಿ ರುಪಾಯಿ ಮೊತ್ತವು ಜೂನ್ 30, 2019ಕ್ಕೆ ಕಂಪೆನಿ ಲೆಕ್ಕದ ಅನ್ವಯ ಬಾಕಿ ಇದೆ.

3,348 ಕೋಟಿ ರುಪಾಯಿ ನಷ್ಟ ಇನ್ನು ಕೆಲವು ಕಂಪೆನಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡಿರುವ ಸಾಲದಿಂದ ಆಗಿರುವ ನಷ್ಟದ ಪ್ರಮಾಣದ ಅಂದಾಜು 3,348 ಕೋಟಿ ರುಪಾಯಿ ಎಂದು ತಿಳಿಸಲಾಗಿದೆ. ಈ ಕುರಿತು ಬುಧವಾರ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಮಾಹಿತಿ ನೀಡಲಾಗಿದೆ. ಈ ವ್ಯವಹಾರಗಳು ಆರ್ಥಿಕ ವರ್ಷ 2006- 2007ರಿಂದ 2018- 2019ರ ಮಧ್ಯೆ ನಡೆದಿವೆ ಎಂದು ಟ್ರಾನ್ಸಾಕ್ಷನ್ ಆಡಿಟರ್ ವರದಿಯಲ್ಲಿ ತಿಳಿಸಲಾಗಿದೆ.

ತೀರುವಳಿಗಾಗಿ ಎನ್ ಸಿಎಲ್ ಟಿಗೆ ಕಳಿಸಿದ ಮೊದಲ ಹಣಕಾಸು ಸೇವಾ ಸಂಸ್ಥೆ

ತೀರುವಳಿಗಾಗಿ ಎನ್ ಸಿಎಲ್ ಟಿಗೆ ಕಳಿಸಿದ ಮೊದಲ ಹಣಕಾಸು ಸೇವಾ ಸಂಸ್ಥೆ

ಕಪಿಲ್ ವಾಧ್ವಾನ್ ಹಾಗೂ ಧೀರಜ್ ವಾಧ್ವಾನ್ ಸೇರಿದಂತೆ 87 ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಅರ್ಜಿ ಹಾಕಲಾಗಿದೆ. ಕಳೆದ ವರ್ಷ ಡಿಎಚ್ ಎಫ್ ಎಲ್ ನ ದಿವಾಳಿ ಕಲಾಪಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳಿಸಿತ್ತು. ತೀರುವಳಿಗಾಗಿ ಎನ್ ಸಿಎಲ್ ಟಿಗೆ ಕಳಿಸಿದ ಮೊದಲ ಹಣಕಾಸು ಸೇವಾ ಸಂಸ್ಥೆ ಡಿಎಚ್ ಎಫ್ ಎಲ್ ಆಯಿತು.

ಜುಲೈ 2019ರ ಹೊತ್ತಿಗೆ ಬ್ಯಾಂಕ್ ಗಳು, ನ್ಯಾಷನಲ್ ಹೌಸಿಂಗ್ ಬೋರ್ಡ್, ಮ್ಯೂಚುವಲ್ ಫಂಡ್ ಗಳು, ಬಾಂಡ್ ಹೋಲ್ಡರ್ ಗಳು/ರೀಟೇಲ್ ಬಾಂಡ್ ಹೋಲ್ಡರ್ ಗಳಿಗೆ ಡಿಎಚ್ ಎಫ್ ಎಲ್ ನಿಂದ 83,873 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ. ಅದರಲ್ಲಿ ಸೆಕ್ಯೂರ್ಡ್ ಸಾಲ ಮೊತ್ತ 74,054 ಕೋಟಿ ರುಪಾಯಿಯಾದರೆ, ಅನ್ ಸೆಕ್ಯೂರ್ಡ್ ಮೊತ್ತ 9,818 ಕೋಟಿ. ಹಲವು ಬ್ಯಾಂಕ್ ಗಳು ಡಿಎಚ್ ಎಫ್ ಎಲ್ ಖಾತೆಯನ್ನು ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಎಂದು ಘೋಷಿಸಿವೆ.

83,873 ಕೋಟಿ ಬಾಕಿ ಪಾವತಿಸಬೇಕಿದೆ

83,873 ಕೋಟಿ ಬಾಕಿ ಪಾವತಿಸಬೇಕಿದೆ

ಡಿಎಚ್ ಎಫ್ ಎಲ್ ನಿಂದ ಬ್ಯಾಂಕ್ ಗಳು, ಮ್ಯೂಚುವಲ್ ಫಂಡ್ ಗಳು ಮತ್ತು ಹೂಡಿಕೆದಾರರಿಗೂ ಸೇರಿ 83,873 ಕೋಟಿ ಬಾಕಿ ಪಾವತಿಸಬೇಕಿದೆ. ದಿವಾಳಿ ಕೋರ್ಟ್ ಮೂಲಕ ಇತ್ಯರ್ಥಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೊದಲು ಸೂಚಿಸಿದ ಎನ್ ಬಿಎಫ್ ಸಿ ದಿವಾನ್ ಹೌಸಿಂಗ್ ಫೈನಾನ್ಸ್. 2019ರ ನವೆಂಬರ್ ನಲ್ಲಿ ಆರ್ ಬಿಐ ಈ ಹೆಜ್ಜೆಗಳನ್ನು ಇಟ್ಟಿತು. ಡಿಎಚ್ ಎಫ್ ಎಲ್ ನ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ, ಮೂವರು ಸದಸ್ಯರ ಸಲಹಾ ಸಮಿತಿ ರಚಿಸಿ, ಆರ್ ಬಿಐನಿಂದ ನೇಮಿಸಿದ ಕಂಪೆನಿಯ ಆಡಳಿತಗಾರರಿಗೆ ಸಲಹೆ ನೀಡುವಂತೆ ತಿಳಿಸಿತು.

ಪಿರಾಮಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಇಂದು ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಡಿಎಚ್‍ಎಫ್‍ಎಲ್) ಸ್ವಾಧೀನಕ್ಕೆ ಪರಿಗಣನೆಯ ಪಾವತಿಯನ್ನು ಘೋಷಿಸಿದೆ. ಇದು ಹಣಕಾಸು ಸೇವೆಗಳ ವಲಯದಲ್ಲಿ ಐಬಿಸಿ ಮಾರ್ಗದಲ್ಲಿ ಮೊದಲ ಯಶಸ್ವಿ ನಿರ್ಣಯ ಎಂದು ಗುರುತಿಸಲ್ಪಡುತ್ತದೆ. ಮೌಲ್ಯದ ಪರಿಭಾಷೆಯಲ್ಲಿ, ವಹಿವಾಟು ಇಲ್ಲಿಯವರೆಗಿನ ಅತಿದೊಡ್ಡ ನಿರ್ಣಯಗಳಲ್ಲಿ ಒಂದಾಗಿದೆ, ಇದು ಈ ವಲಯದಲ್ಲಿನ ಭವಿಷ್ಯದ ನಿರ್ಣಯಗಳಿಗೆ ಹೊಸ ನಿದರ್ಶನವನ್ನು ನಿಗದಿಪಡಿಸಲಿದೆ.

English summary

Kapil and Dheeraj Wadhawan of DHFL booked in Rs 34,615-crore bank fraud case

CBI registers a fresh case against erstwhile DHFL promoters Kapil and Dheeraj Wadhawan for defrauding a consortium of banks led by Union Bank of India
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X