For Quick Alerts
ALLOW NOTIFICATIONS  
For Daily Alerts

ಕರ್ನಾಟಕದ ಸಾಲ ಪ್ರಮಾಣ 5 ಪಟ್ಟು ಹೆಚ್ಚು; ಇನ್ನೂ 4 ರಾಜ್ಯದ್ದು ಇದೇ ಸ್ಥಿತಿ

|

ಕೊರೊನಾದಿಂದ ಉದ್ಭವಿಸಿರುವ ಗಂಭೀರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತದ ಐದು ರಾಜ್ಯಗಳ ಸಾಲ ಪ್ರಮಾಣ ಈ ವರ್ಷ ದುಪ್ಪಟ್ಟಾಗಿದೆ. ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತಮಿಳುನಾಡು ಭಾರೀ ಪ್ರಮಾಣದಲ್ಲಿ ಸಾಲ ಮಾಡಿವೆ. ಏಪ್ರಿಲ್ 7ರಿಂದ ಆಗಸ್ಟ್ 11ರ ಮಧ್ಯೆ ಕರ್ನಾಟಕವು ಐದು ಪಟ್ಟು ಹೆಚ್ಚು ಸಾಲ ಮಾಡಿದೆ.

ಮಹಾರಾಷ್ಟ್ರವು ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಸಾಲ ಮಾಡಿದೆ ಎಂದು Care ರೇಟಿಂಗ್ಸ್ ವರದಿ ಮಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೆ ತಂದ ಲಾಕ್ ಡೌನ್ ಕಾರಣಕ್ಕೆ ರಾಜ್ಯಗಳ ಆದಾಯಕ್ಕೆ ಕತ್ತರಿ ಬಿದ್ದಿದೆ. ಎಸ್ ಡಿಎಲ್ (ಸ್ಟೇಟ್ ಡೆವಲಪ್ ಮೆಂಟ್ ಲೋನ್) ವಿತರಿಸಿ, ಮಾರುಕಟ್ಟೆಯಿಂದ ಹಣ ಸಂಗ್ರಹಿಸುತ್ತಿರುವ ರಾಜ್ಯಗಳು ಹಣದ ಅಗತ್ಯವನ್ನು ಪೂರೈಸಿಕೊಳ್ಳುತ್ತಿವೆ.

 

ಕೇಂದ್ರದಿಂದ ಜಿಎಸ್ ಟಿ ಪರಿಹಾರ ನೀಡದಿದ್ದಲ್ಲಿ ರಾಜ್ಯಗಳ ಸ್ಥಿತಿ ಏನು?

26 ರಾಜ್ಯಗಳ ಪೈಕಿ 13 ರಾಜ್ಯಗಳು ಎಸ್ ಡಿಎಲ್ ವಿತರಿಸಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ಪಡೆದಿವೆ. ಅವುಗಳ ಸಾಲದ ಪ್ರಮಾಣವನ್ನು 2019ಕ್ಕೆ ಹೋಲಿಸಿದಲ್ಲಿ ಶೇಕಡಾ 50ರಷ್ಟು ಹೆಚ್ಚಾಗಿದೆ. ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬುದನ್ನು ಅರಿತುಕೊಂಡೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಗಳ ಜಿಡಿಪಿಯ (GSDP) 5% ತನಕ ಸಾಲ ಮಾಡಲು ಅನುಮತಿ ನೀಡಿದರು. ಆ ಪ್ರಮಾಣ ಅದಕ್ಕೂ ಮುನ್ನ 3%ಗೆ ನಿಗದಿ ಆಗಿತ್ತು.

ಕರ್ನಾಟಕದ ಸಾಲ ಪ್ರಮಾಣ 5 ಪಟ್ಟು ಹೆಚ್ಚು; 4 ರಾಜ್ಯದ್ದು ಇದೇ ಸ್ಥಿತಿ

ಕೇಂದ್ರ ಸರ್ಕಾರಕ್ಕೆ ಏನೇ ಆರ್ಥಿಕ ಒತ್ತಡ ಇದ್ದರೂ ಆದಾಯ ಖೋತಾ ಅನುದಾನದ ಮೊತ್ತ 12,390 ಕೋಟಿ ರುಪಾಯಿಯನ್ನು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಮಯಕ್ಕೆ ಸರಿಯಾಗಿ ರಾಜ್ಯಗಳಿಗೆ ಪಾವತಿಸಿದೆ. ಅದೇ ರೀತಿ ಏಪ್ರಿಲ್ ಮೊದಲ ವಾರದಲ್ಲೇ ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಮೊತ್ತ 11,092 ಕೋಟಿ ರುಪಾಯಿಯನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ 4113 ಕೋಟಿ ಬಿಡುಗಡೆ ಆಗಿದೆ.

ಈ ಮಧ್ಯೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರಾಜ್ಯಗಳಿಗೆ ನೀಡುವ ಓವರ್ ಡ್ರಾಫ್ಟ್ ಅವಧಿ ಹಾಗೂ ಮೊತ್ತದ ಪ್ರಮಾಣವನ್ನು ಹೆಚ್ಚಿಸಲಾಗಿದೆ.

English summary

Karnataka Borrowed 5 Times More Funds Due To Corona Crisis

Including Karnataka and Maharashtra 5 Indian states borrowed more than double funds due to corona crisis.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X