For Quick Alerts
ALLOW NOTIFICATIONS  
For Daily Alerts

ಕಿಶೋರ್ ಬಿಯಾನಿಗೆ ಷೇರು ಮಾರ್ಕೆಟ್ ವಹಿವಾಟಿನಿಂದ ಸೆಬಿ ನಿರ್ಬಂಧ

By ಅನಿಲ್ ಆಚಾರ್
|

ಭಾರತದ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಫ್ಯೂಚರ್ ಗ್ರೂಪ್ ಸಿಇಒ ಕಿಶೋರ್ ಬಿಯಾನಿ ಅವರಿಗೆ ಒಂದು ವರ್ಷಗಳ ಕಾಲ ಸೆಕ್ಯೂರಿಟೀಸ್ ಮಾರ್ಕೆಟ್ ನಲ್ಲಿ ವಹಿವಾಟು ನಡೆಸದಂತೆ ನಿರ್ಬಂಧ ಹೇರಲಾಗಿದೆ. 2017ರಲ್ಲಿ ರೀಟೇಲ್ ಘಟಕದ ಆಂತರಿಕ ಷೇರು ವಹಿವಾಟಿನಲ್ಲಿ ಪಾಲ್ಗೊಂಡಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತಿಳಿಸಿರುವ ಪ್ರಕಾರ, ಬಿಯಾನಿ ಮತ್ತು ಅವರ ಸೋದರ ಅನಿಲ್ ಅವರನ್ನು ಕೂಡ ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ. ಮತ್ತೊಂದು ಘಟಕದ ಮೂಲಕ ಪ್ರಕಟವಾಗದ ದರದ ಸೂಕ್ಷ್ಮ ಮಾಹಿತಿಯನ್ನು ಬಳಸಿಕೊಂಡು ಫ್ಯೂಚರ್ ರೀಟೇಲ್ ಲಿಮಿಟೆಡ್ (FRL) ಷೇರಿನಲ್ಲಿ ವಹಿವಾಟು ನಡೆಸಿದ್ದಾರೆ.

SEIL ಷೇರುಗಳಲ್ಲಿ ಮೋಸದ ವಹಿವಾಟು: 2.38 ಕೋಟಿ ರು. ದಂಡ ಹಾಕಿದ ಸೆಬಿSEIL ಷೇರುಗಳಲ್ಲಿ ಮೋಸದ ವಹಿವಾಟು: 2.38 ಕೋಟಿ ರು. ದಂಡ ಹಾಕಿದ ಸೆಬಿ

ಮಾರ್ಚ್ 10, 2017ರಿಂದ ಏಪ್ರಿಲ್ 20, 2017ರ ಮಧ್ಯೆ ಈ ವಹಿವಾಟು ನಡೆದಿದೆ. ಯಾವಾಗ FRLನ ಕೆಲವು ವ್ಯವಹಾರವನ್ನು ಮರು ಹೊಂದಾಣಿಕೆ ಮಾಡಲಾಯಿತೋ ಆ ವೇಳೆ ಈ ವಹಿವಾಟು ನಡೆದಿದ್ದು, ಷೇರಿನ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಸೆಬಿ ಹೇಳಿದೆ.

ಕಿಶೋರ್ ಬಿಯಾನಿಗೆ ಷೇರು ಮಾರ್ಕೆಟ್ ವಹಿವಾಟಿನಿಂದ ಸೆಬಿ ನಿರ್ಬಂಧ

ಸೆಬಿಗೆ ಗೊತ್ತಾಗಿರುವ ಸಂಗತಿ ಏನೆಂದರೆ, ಫ್ಯೂಚರ್ ಕಾರ್ಪೊರೇಟ್ ರಿಸೋರ್ಸ್ ಪ್ರೈವೇಟ್ ಲಿಮಿಟೆಡ್ (FCRPL) ಹೆಸರಲ್ಲಿ ಟ್ರೇಡಿಂಗ್ ಖಾತೆ ತೆರೆದಿದ್ದಾರೆ. ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾರವನ್ನು ಸಾರ್ವಜನಿಕವಾಗಿ ಘೋಷಣೆ ಮಾಡುವ ಮುನ್ನವೇ FRL ಷೇರುಗಳ ವಹಿವಾಟು ನಡೆಸಿದ್ದಾರೆ ಎಂಬುದನ್ನು ಸೆಬಿ ಪತ್ತೆ ಹಚ್ಚಿದೆ.

ಸೆಬಿಯ ಆದೇಶವನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿಕೆಯಲ್ಲಿ ಫ್ಯೂಚರ್ ತಿಳಿಸಿದೆ. ಇತ್ತ ಸೆಬಿಯಿಂದ ಬಿಯಾನಿ ಅವರನ್ನು ಸಂಬಂಧಪಟ್ಟ ಕೆಲವು ಸಂಸ್ಥೆಗಳ ಮತ್ತು ಫ್ಯೂಚರ್ ರೀಟೇಲ್ ಷೇರಿನ ವಹಿವಾಟನ್ನು ಎರಡು ವರ್ಷ ಮಾಡುವಂತಿಲ್ಲ ಎಂದು ನಿರ್ಬಂಧ ಹಾಕಲಾಗಿದೆ.

English summary

Kishore Biyani Barred By SEBI For A Year Alleged Insider Trading

Future Group CEO Kishore Biyani barred from securities market for a year by SEBI on alleged insider trading.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X