For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ರೀಟೇಲ್ ನಲ್ಲಿ ಕೆಕೆಆರ್ ನಿಂದ 5500 ಕೋಟಿ ರುಪಾಯಿ ಹೂಡಿಕೆ

|

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಬುಧವಾರ ಘೋಷಣೆ ಮಾಡಿರುವ ಪ್ರಕಾರ, ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್ ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿಎಲ್) ನಲ್ಲಿ 5500 ಕೋಟಿ ರುಪಾಯಿ ಹೂಡಿಕೆ ಮಾಡಲಾಗುತ್ತದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗ ಸಂಸ್ಥೆಯ ರಿಲಯನ್ಸ್ ರೀಟೇಲ್ ಮೌಲ್ಯ 4.21 ಲಕ್ಷ ಕೋಟಿಗೆ ಮಾಡಿದಂತಾಗುತ್ತದೆ.

ರಿಲಯನ್ಸ್ ರೀಟೇಲ್ ನಲ್ಲಿ ಸಿಲ್ವರ್ ಲೇಕ್ ನಿಂದ 7,500 ಕೋಟಿ ಹೂಡಿಕೆ

ಈಗ ಕೆಕೆಆರ್ ಹೂಡಿಕೆ ಮಾಡುತ್ತಿರುವ ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಕೆಕೆಆರ್ ಗೆ 1.28 ಪರ್ಸೆಂಟ್ ಪಾಲು ದೊರೆತಂತಾಗುತ್ತದೆ (ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ). ಈ ತಿಂಗಳಲ್ಲಿ ಈ ವರೆಗೆ ಮುಕೇಶ್ ಅಂಬಾನಿ ರೀಟೇಲ್ ಉದ್ಯಮಕ್ಕೆ 13,050 ಕೋಟಿ ರುಪಾಯಿ ಬಂದಿದೆ. ಅದಕ್ಕಾಗಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನಿಂದ 3.03 ಪರ್ಸೆಂಟ್ ಈಕ್ವಿಟಿ ಪಾಲು ನೀಡಬೇಕಾಗುತ್ತದೆ.

ರಿಲಯನ್ಸ್ ರೀಟೇಲ್ ನಲ್ಲಿ ಕೆಕೆಆರ್ ನಿಂದ 5500 ಕೋಟಿ ರುಪಾಯಿ ಹೂಡಿಕೆ

 

ಈ ಹಿಂದೆ ಕೆಕೆಆರ್ ನಿಂದಲೇ ರಿಲಯನ್ಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 11,367 ಕೋಟಿ ರುಪಾಯಿ ಹೂಡಿಕೆ ಮಾಡಲಾಗಿದೆ. ಇದೀಗ ರೀಟೇಲ್ ವ್ಯವಹಾರದಲ್ಲೂ ಹಣ ಹೂಡುವ ಮೂಲಕ ಎರಡನೇ ವಹಿವಾಟು ನಡೆಸಿದಂತಾಗಿದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸೈರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.

English summary

KKR To Invest 5500 Crore Rupees In Reliance Retail Ventures

Reliance Industries Wednesday announced that, KKR to invest 5500 crore rupees in it's retail arm Reliance Retail Ventures Limited.
Company Search
COVID-19