For Quick Alerts
ALLOW NOTIFICATIONS  
For Daily Alerts

ನಂದಿನ ಹಾಲಿನ ಬೆಲೆ ಏರಿಕೆ ಸದ್ಯಕ್ಕೆ ಇಲ್ಲ; ನ. 20ರ ಬಳಿಕ ಅಂತಿಮ ನಿರ್ಧಾರ

|

ಬೆಂಗಳೂರು, ನ. 14: ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡುವ ಕೆಎಂಎಫ್ ನಿರ್ಧಾರಕ್ಕೆ ಸರ್ಕಾರ ತಡೆ ನೀಡಿದೆ. ಸದ್ಯಕ್ಕೆ ಬೆಲೆ ಏರಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.

 

ನವೆಂಬರ್ 15, ನಾಳೆ ಮಂಗಳವಾರದಿಂದಲೇ ಹಾಲು ಮತ್ತು ಮೊಸರು ದರವನ್ನು 3 ರೂಗಳಷ್ಟು ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಹಲವು ತಿಂಗಳುಗಳ ಹಿಂದೆಯೇ ಈ ನಿಟ್ಟಿನಲ್ಲಿ ಸರ್ಕಾರದ ಮುಂದೆ ಕೆಎಂಎಫ್ ಪ್ರಸ್ತಾವ ಇಟ್ಟಿತ್ತು. ಇಂದು ಸೋಮವಾರ ಸರ್ಕಾರ ಕೂಡ ಇದಕ್ಕೆ ಅನುಮೋದನೆ ಕೊಟ್ಟಿದೆ ಎಂಬಂತಹ ಸುದ್ದಿ ದಟ್ಟವಾಗಿ ಕೇಳಿಬಂದಿತ್ತು. ಕೆಎಂಎಫ್ ಬೆಲೆ ಏರಿಕೆ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿಯೂ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸರ್ಕಾರ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆದಿದೆ.

ವಿಶ್ವದ ಅತೀ ದುಬಾರಿ ಬಿಯರ್ 4.05 ಕೋಟಿ ರೂಪಾಯಿಗೆ ಮಾರಾಟ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಹಾಲು ಮತ್ತು ಮೊಸರು ದರ ಏರಿಕೆ ಘೋಷಣೆಯನ್ನು ತಡೆಯಲಾಗಿದೆ. ನವೆಂಬರ್ 20ರ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ. ನವೆಂಬರ್ 20ರ ನಂತರ ಸರ್ಕಾರ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಹಾಲಿನ ಬೆಲೆ ಏರಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಸರ್ಕಾರದ ನಿರ್ಧಾರಕ್ಕೆ ಏನು ಕಾರಣ?

ಸರ್ಕಾರದ ನಿರ್ಧಾರಕ್ಕೆ ಏನು ಕಾರಣ?

ಹಾಲು ಮತ್ತು ಮೊಸರು ಬೆಲೆ ಏರಿಕೆ ಮಾಡುವ ಕೆಎಂಎಫ್ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿರುವುದು ರೈತರಿಗೆ ಸಹಾಯಧನ ಹೆಚ್ಚಿಸುವ ಉದ್ದೇಶ. ಆದರೆ, ಬೆಲೆ ಏರಿಕೆ ಮಾಡಿದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾದ ಉಭಯ ಸಂಕಟ ಸರ್ಕಾರದ್ದು. ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿರುವ ಅಸಹನೆಯಲ್ಲಿರುವ ಜನರಿಗೆ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳವಾದರೆ ಸಹನೆಯ ಕಟ್ಟೆ ಒಡೆಯಬಹುದು ಎಂಬ ಭೀತಿ ಸರ್ಕಾರಕ್ಕೆ ಇದೆ. ಹೀಗಾಗಿ, ಸಮಯ ಸಂದರ್ಭ ನೋಡಿಕೊಂಡು ನಿರ್ಧಾರ ಕೈಗೊಳ್ಳುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ.

ಕೆಎಂಎಫ್ ಒತ್ತಡ
 

ಕೆಎಂಎಫ್ ಒತ್ತಡ

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಬೆಲೆ ತುಸು ಕಡಿಮೆ ಇದೆ. ಜೊತೆಗೆ ಹೈನುಗಾರಿಕೆಯ ವೆಚ್ಚ ಈಗೀಗ ಹೆಚ್ಚುತ್ತಿದೆ. ಹೀಗಾಗಿ, ರಾಜ್ಯದಲ್ಲೂ ಹಾಲು ದರ ಹೆಚ್ಚಿಸಬೇಕು ಎಂದು ಹಾಲು ಉತ್ಪಾದಕ ರೈತರು ಬಹಳ ದಿನಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದಾರೆ.

ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಕೆಎಂಎಫ್‌ನ ಎಲ್ಲಾ 16 ಜಿಲ್ಲಾ ಹಾಲು ಒಕ್ಕೂಟಗಳು ಸೇರಿ ಪ್ರತೀ ಲೀಟರ್ ಹಾಲಿಗೆ 3 ರೂ ದರ ಏರಿಕೆ ಮಾಡಬೇಕೆಂದು ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ಮನವಿ ಮಾಡಿದ್ದವು. ಇತ್ತೀಚೆಗೆ ನಡೆದ ಕೆಎಂಎಫ್ ಸರ್ವಸದಸ್ಯರ ಸಭೆಯಲ್ಲಿ ಬೆಲೆ ಏರಿಕೆ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು ಸರ್ವಾನುಮತದಿಂದ ಬೆಂಬಲ ನೀಡಿದ್ದವು. ಹಾಲಿನ ದರ ಲೀಟರ್‌ಗೆ 3 ರೂ ಏರಿಕೆ ಮಾಡುವುದು, ಮತ್ತು ಆ ಏರಿಕೆ ಹಣವನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸುವುದು ಎಂಬುದು ತೀರ್ಮಾನವಾಗಿತ್ತು. ಮಂಡ್ಯ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಾಲು ಉತ್ಪಾದಕ ರೈತರು ಹಾಲಿನ ದರವನ್ನು ಐದು ರೂನಷ್ಟು ಹೆಚ್ಚಳ ಮಾಡಬೇಕೆಂದು ಇತ್ತೀಚೆಗೆ ಒತ್ತಾಯಿಸಿದ್ದರು.

ಈ ಹಿಂದೆ ಕೆಲವು ಬಾರಿ ಕೆಎಂಎಫ್ ಹಾಲಿನ ದರ ಹೆಚ್ಚಿಸಲು ಮುಂದಾಗಿದ್ದುಂಟು. ಹಾಗೆಲ್ಲಾ ಸರ್ಕಾರ ಬೆಲೆ ಏರಿಕೆಗೆ ಅವಕಾಶ ನಿರಾಕರಿಸುತ್ತಾ ಬಂದಿತ್ತು. ಈಗಲೂ ಕೆಎಂಎಫ್‌ನ ಇವತ್ತಿನ ನಿರ್ಧಾರಕ್ಕೆ ಸರ್ಕಾರ ತಡೆ ನೀಡಿರುವುದರಲ್ಲಿ ಅಚ್ಚರಿ ಏನಿಲ್ಲ.

ಈಗೆಷ್ಟಿದೆ ಹಾಲಿನ ದರ?

ಈಗೆಷ್ಟಿದೆ ಹಾಲಿನ ದರ?

(ಲೀಟರ್ ಲೆಕ್ಕದಲ್ಲಿ)
ಟೋನ್ಡ್ ಹಾಲು: 37 ರೂ
ಹೋಮೋಜಿನೈಸ್ಡ್ ಹಾಲು: 38
ಹೋಮೋಜಿನೈಸ್ಡ್ ಹಸು ಹಾಲು: 42
ಸ್ಪೆಷಲ್ ಹಾಲು: 43 ರೂ
ಶುಭಂ ಹಾಲು: 43 ರೂ
ಹೋಮೋಜಿನೈಸ್ಡ್ ಸ್ಟ್ಯಾಂಡರ್ಡೈಸ್ಡ್ ಹಾಲು: 44 ರೂ
ಸಮೃದ್ಧಿ ಹಾಲು: 48 ರೂ
ಸಂತೃಪ್ತಿ ಹಾಲು: 50 ರೂ
ಡಬಲ್ ಟೋನ್ಡ್ ಹಾಲು: 36 ರೂ
ಮೊಸರು: 45 ರೂ

ಬೇರೆ ಬೇರೆ ರಾಜ್ಯಗಳಲ್ಲಿ ಹೇಗಿದೆ ರೇಟು?
ಸಾಮಾನ್ಯ ಹಾಲಿನ ಬೆಲೆ
ಕರ್ನಾಟಕ: 37 ರೂ
ತಮಿಳುನಾಡು: 40 ರೂ
ಕೇರಳ: 46 ರೂ
ಗುಜರಾತ್: 50 ರೂ
ಮಹಾರಾಷ್ಟ್ರ: 51 ರೂ
ದೆಹಲಿ: 51 ರೂ
ಆಂಧ್ರಪ್ರದೇಶ: 55 ರೂ

English summary

KMF Milk Rate Hike: CM Basavaraj Bommai Order to Put on Hold

Karnataka government has put a stay on the decision of KMF to hike milk price by Rs 3 per liter. CM Basavaraja Bommai himself has withheld the KMF decision, it is reported.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X