For Quick Alerts
ALLOW NOTIFICATIONS  
For Daily Alerts

ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಸಿಗುವ ಪರಿಹಾರ ಎಷ್ಟು?

|

ವಿಶ್ವಾದ್ಯಂತ ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸುದ್ದಿ ನಿತ್ಯ ಕೇಳಿಬರುತ್ತಿದೆ. ಟ್ವಿಟ್ಟರ್, ಮೆಟಾ, ಅಮೇಜಾನ್, ಗೂಗಲ್ ಮೊದಲಾದ ದೊಡ್ಡ ಟೆಕ್ ಕಂಪನಿಗಳು ಉದ್ಯೋಗಕಡಿತ ಮಾಡುತ್ತಿವೆ. ಹಲವು ವರ್ಷಗಳ ಕಾಲ ಕಂಪನಿಯಲ್ಲಿ ಸೇವೆ ಸಲ್ಲಿಸಿದವರು ಅಚಾನಕ್ಕಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ. ಹಲವು ಭಾರತೀಯ ಕಂಪನಿಗಳೂ ಉದ್ಯೋಗಕಡಿತದ ನಿರ್ಧಾರ ಮಾಡಿವೆ. ಟ್ವಿಟ್ಟರ್‌ನ ಭಾರತೀಯ ವಿಭಾಗದಲ್ಲಿ ಕೆಲಸ ಉಳಿಸಿಕೊಂಡವರು ಕೇವಲ 10 ಮಂದಿ ಮಾತ್ರ. ಬೈಜೂಸ್ ಮೊದಲಾದ ಹಲವು ಸ್ಟಾರ್ಟಪ್‌ಗಳಿಂದ ಲೆಕ್ಕವಿಲ್ಲದಷ್ಟು ಉದ್ಯೋಗಿಗಳು ಪಿಂಕ್ ಸ್ಲಿಪ್ ಪಡೆದಿದ್ದಾರೆ.

ಕೆಲ ಮಾಧ್ಯಮ ವರದಿಗಳನ್ನು ನಂಬುವುದಾದರೆ ಹಲವು ಟೆಕ್ ಕಂಪನಿಗಳು ಕೆಲಸದಿಂದ ವಜಾ ಮಾಡಿದ ಉದ್ಯೋಗಿಗಳಿಗೆ ನೀಡುವ ಪರಿಹಾರ ಪ್ಯಾಕೇಜ್‌ಗಳ ಮೊತ್ತ ಬಹಳ ಕಡಿಮೆ ಇತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಟೀಕಾ ಪ್ರಹಾರ ವೈರಲ್ ಆಗುತ್ತಿದ್ದಂತೆಯೇ ಕೆಲ ಕಂಪನಿಗಳು ಪರಿಹಾರ ಮೊತ್ತವನ್ನು ಹೆಚ್ಚಿಸಿವೆ. ಆದರೂ ಕೂಡ ಮಾಮೂಲಿಯಷ್ಟು ಕೊಡಬೇಕಿದ್ದ ಪರಿಹಾರ ಪ್ಯಾಕೇಜ್‌ಗಳು ಕೆಲಸ ಕಳೆದುಕೊಂಡವರ ಕೈ ಸೇರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಟ್ವಿಟ್ಟರ್, ಮೆಟಾ ಹಾದಿಯಲ್ಲಿ ಗೂಗಲ್: 10,000 ಉದ್ಯೋಗಿಗಳ ವಜಾಗೊಳಿಸಲು ಸಜ್ಜುಟ್ವಿಟ್ಟರ್, ಮೆಟಾ ಹಾದಿಯಲ್ಲಿ ಗೂಗಲ್: 10,000 ಉದ್ಯೋಗಿಗಳ ವಜಾಗೊಳಿಸಲು ಸಜ್ಜು

ಮರು ನೇಮಕದ ಭರವಸೆ

ಮರು ನೇಮಕದ ಭರವಸೆ

ಈಗ ಆರ್ಥಿಕ ಹಿನ್ನಡೆ ಕಾರಣದಿಂದ ಬಹಳಷ್ಟು ಕಂಪನಿಗಳು ನಷ್ಟದಲ್ಲಿವೆ, ಅಥವಾ ಲಾಭ ಕಡಿಮೆ ಹೊಂದಿವೆ. ಈ ಕಾರಣಕ್ಕೆ ಲೇ ಆಫ್ ಆಗುತ್ತಿದೆ. ಸಂಸ್ಥೆಯ ಕಾರ್ಯಾಚರಣೆ ವೆಚ್ಚ ತಗ್ಗಿಸಲು ವಿವಿಧ ಮಾರ್ಗೋಪಾಯ ಅನುಸರಿಸಿ ಕೊನೆಯ ಮಾರ್ಗವಾಗಿ ಸಿಬ್ಬಂದಿ ವರ್ಗ ಕಡಿತ ಮಾಡುತ್ತಿರುವುದಾಗಿ ಬಹುತೇಕ ಎಲ್ಲಾ ಕಂಪನಿಗಳೂ ಸಬೂಬು ಹೇಳಿವೆ.

ಇನ್ನು ಕೆಲ ಕಂಪನಿಗಳು ಮುಂದಿನ ದಿನಗಳಲ್ಲಿ ಮರು ನೇಮಕ ಮಾಡಿಕೊಳ್ಳುವುದಾಗಿ ಕೆಲಸ ಕಳೆದುಕೊಂಡವರಿಗೆ ಆಶ್ವಾಸನೆ ನೀಡಿವೆಯಂತೆ. ಆರ್ಥಿಕತೆ ಸುಧಾರಿಸಿ ಸಂಸ್ಥೆ ಮತ್ತೆ ಲಾಭದ ಹಳಿಗೆ ಬಂದ ಬಳಿಕ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ತಮಗೆ ಮೊದಲ ಆದ್ಯತೆ ಕೊಡುವುದಾಗಿ ಹೇಳಿವೆ.

 

ಮೆಟಾದಲ್ಲಿ ಭರ್ಜರಿ ಪರಿಹಾರ

ಮೆಟಾದಲ್ಲಿ ಭರ್ಜರಿ ಪರಿಹಾರ

ಸಾಮಾನ್ಯವಾಗಿ ಹಲವು ದೊಡ್ಡ ಸಂಸ್ಥೆಗಳಲ್ಲಿ, ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೆ ಕೆಲ ತಿಂಗಳ ವೇತನವನ್ನು ಪರಿಹಾರವಾಗಿ ಕೊಟ್ಟು ಕಳುಹಿಸಲಾಗುತ್ತದೆ. ಇದು ಉದ್ಯೋಗಿಯ ಅಧಿಕಾರ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಎಕ್ಸಿಕ್ಯೂಟಿವ್ ದರ್ಜೆಯ ಉದ್ಯೋಗಿಯಾದರೆ ಒಂದು ವರ್ಷದವರೆಗೂ ವೇತನವನ್ನು ಪರಿಹಾರವಾಗಿ ನೀಡಲಾಗುತ್ತದೆ. ಮ್ಯಾನೇಜರ್ ಹಂತದವರಿಗೆ 3 ತಿಂಗಳವರೆಗೆ ವೇತನ ಕೊಡಲಾಗುತ್ತದೆ. ಆದರೆ, ಈಗ ಹಲವು ಕಂಪನಿಗಳು ಎರಡು ತಿಂಗಳ ವೇತನದ ಹಣವನ್ನು ಉದ್ಯೋಗಿಗಳಿಗೆ ಪರಿಹಾರವಾಗಿ ಕೊಟ್ಟಿದೆ.

ಮೆಟಾ ಸಂಸ್ಥೆ ಪ್ರತಿಯೊಬ್ಬ ಉದ್ಯೋಗಿಗೂ ವರ್ಷಕ್ಕೆ 18 ವಾರಗಳ ವೇತನದಂತೆ ಹಣವನ್ನು ಪರಿಹಾರವಾಗಿ ನೀಡುತ್ತಿದೆ. ಅಂದರೆ, ಒಬ್ಬ ಉದ್ಯೋಗಿ 6 ವರ್ಷ ಕೆಲಸ ಮಾಡಿದ್ದರೆ ಆತನಿಗೆ 108 ವಾರಗಳ ವೇತನವು ಪರಿಹಾರವಾಗಿ ಸಿಗುತ್ತದೆ. ಅಂದರೆ 2 ವರ್ಷಗಳಿಗೂ ಹೆಚ್ಚು ಅವಧಿಯ ವೇತನವು ಪರಿಹಾರವಾಗಿ ಸಿಗುತ್ತದೆ. ಎರಡು ವರ್ಷ ಕೆಲಸ ಮಾಡಿದ್ದರೆ ಸುಮಾರು 9-10 ತಿಂಗಳ ವೇತನವನ್ನು ಪರಿಹಾರವಾಗಿ ಪಡೆಯಬಹುದು. ಈ ಸೂತ್ರ ಬಹುಶಃ ಒಪ್ಪುವಂಥದ್ದು ಎಂಬುದು ಜಾಬ್ ಕನ್ಸಲ್ಟೆನ್ಸಿಗಳ ಅನಿಸಿಕೆ.

 

ಸಿಎಕ್ಸ್‌ಒಗಳಿಗೆ ಅನ್ಯಾಯ?

ಸಿಎಕ್ಸ್‌ಒಗಳಿಗೆ ಅನ್ಯಾಯ?

ಆದರೆ, ಈ ಬಾರಿ ಸಿಎಕ್ಸ್‌ಒಗಳಿಗೆ ಸರಿಯಾದ ಪರಿಹಾರ ಕೊಡದೇ ಅನ್ಯಾಯ ಮಾಡಲಾಗುತ್ತಿದೆ ಎಂಬ ಮಾತಿದೆ. ಸಿಎಕ್ಸ್‌ಒ ಎಂದರೆ ಚೀಫ್ ಎಕ್ಸ್‌ಪೀರಿಯನ್ಸ್ ಆಫೀಸರ್. ಇವರು ಸಿಇಒ, ಸಿಒಒ ಮುಂತಾದ ಟಾಪ್ ಎಕ್ಸಿಕ್ಯೂಟಿವ್‌ಗಳ ಅಡಿಯಲ್ಲಿ ಬರುತ್ತಾರೆ. ಕಂಪನಿಯಲ್ಲಿ ಇವರ ಸ್ಥಾನ 3 ಅಥವಾ 4ನೇ ಕ್ರಮಾಂಕದ್ದಾಗಿರುತ್ತದೆ. ಇವರು ಕೆಲಸ ಬಿಡುವಾಗ ಸಾಮಾನ್ಯವಾಗಿ 12-16 ತಿಂಗಳ ವೇತನವನ್ನು ಕೊಟ್ಟು ಕಳುಹಿಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಕೇವಲ 6 ತಿಂಗಳ ವೇತನ ಮಾತ್ರ ಪರಿಹಾರವಾಗಿ ಕೊಡಲಾಗುತ್ತಿದೆಯಂತೆ.

ಮೆಡಿಕಲ್ ಇನ್ಷೂರೆನ್ಸ್

ಮೆಡಿಕಲ್ ಇನ್ಷೂರೆನ್ಸ್

ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳಲ್ಲಿ ಬಹುತೇಕರಿಗೆ ಸಾಮಾನ್ಯವಾಗಿ ಸಿಗುತ್ತಿರುವ ಪರಿಹಾರವೆಂದರೆ ಮೆಡಿಕಲ್ ಇನ್ಷೂರೆನ್ಸ್. ಸಾಮಾನ್ಯವಾಗಿ ಒಬ್ಬ ಉದ್ಯೋಗಿ ಬಿಟ್ಟ ಕೂಡಲೇ ಕಂಪನಿಯಿಂದ ಆತನಿಗೆ ಮಾಡಿಸಲಾಗಿದ್ದ ಮೆಡಿಕಲ್ ಇನ್ಷೂರೆನ್ಸ್ ರದ್ದಾಗಿ ಹೋಗುತ್ತದೆ.

ಆದರೆ ಈಗ ಬಹುತೇಕ ಎಲ್ಲಾ ಕಂಪನಿಗಳೂ ಕೆಲಸ ಬಿಡುವ ಉದ್ಯೋಗಿಗಳಿಗೆ ಇಡೀ ವರ್ಷದ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯವನ್ನು ಮುಂದುವರಿಸಲು ನಿರ್ಧರಿಸಿವೆ. ಇನ್ನೂ ಕೆಲ ಕಂಪನಿಗಳು ಆರು ತಿಂಗಳವರೆಗೆ ಉದ್ಯೋಗಿಯ ಕುಟಂಬದ ಯಾವುದೇ ವೈದ್ಯಕೀಯ ವೆಚ್ಚವನ್ನು ಭರಿಸುತ್ತಿವೆ.

 

English summary

Know How Much Compensation Are Laid-off Employees Getting From The Companies

Amazon, Meta, Google and many more companies have laid-off thousands of employees as a cost cutting measures. Few companies are providing good compensation, but many more are cutting the package too.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X