For Quick Alerts
ALLOW NOTIFICATIONS  
For Daily Alerts

ಇತಿಹಾಸದಲ್ಲೇ ಮೊದಲು; ಸತತ 2 ಅವಧಿಯಲ್ಲಿ ಐಒಸಿಗೆ ನಷ್ಟ; ಕಾರಣ ಏನು?

|

ನವದೆಹಲಿ, ಅ. 30: ಇಂಡೇನ್ ಗ್ಯಾಸ್, ಪೆಟ್ರೋಲ್, ಡೀಸೆಲ್ ಮಾರುವ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಸತತ ಎರಡನೇ ತ್ರೈಮಾಸಿಕ ಅವಧಿಯಲ್ಲಿ ನಷ್ಟ ಅನುಭವಿಸಿದೆ. ಆ ಸಂಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸತತ ನಷ್ಟ ಆಗುತ್ತಿರುವುದು. ಜುಲೈನಿಂದ ಸೆಪ್ಟೆಂಬರ್‌ವರೆಗಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಐಒಸಿ 272.35 ಕೋಟಿ ರೂ ನಿವ್ವಳ ನಷ್ಟ ಅನುಭವಿಸಿದೆ. ಈ ಅಂಶವನ್ನು ಸಂಸ್ಥೆ ನಿನ್ನೆ ಶನಿವಾರ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸುವ ಫೈಲಿಂಗ್‌ನಲ್ಲಿ ವರದಿ ಮಾಡಿದೆ.

 

ಹಿಂದಿನ ತ್ರೈಮಾಸಿಕವಾದ ಮತ್ತು ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಐಒಸಿ 1992.53 ಕೋಟಿ ರೂ ನಷ್ಟ ಅನುಭವಿಸಿತ್ತು. ಅದಕ್ಕೆ ಹೋಲಿಸಿದರೆ ಈ ಎರಡನೇ ಅವಧಿಯಲ್ಲಿ ಐಒಸಿಗೆ ಹೆಚ್ಚು ನಷ್ಟವಾಗಿಲ್ಲ. ಆದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಐಒಸಿ ಪಡೆದ 6,360.05 ಕೋಟಿ ರೂನಷ್ಟು ಭರ್ಜರಿ ಲಾಭಕ್ಕೆ ಹೋಲಿಸಿದರೆ ಈ ನಷ್ಟ ಗುರುತರ ಎನಿಸುತ್ತದೆ. ಅಷ್ಟೇ ಅಲ್ಲ, ಎಲ್‌ಪಿಜಿ ಸಬ್ಸಿಡಿಯ 10,801 ರೂ ಹಣವನ್ನು ಕೇಂದ್ರ ಸರ್ಕಾರ ಈ ಬಾರಿ ಐಒಸಿಗೆ ನೀಡಿತ್ತು. ಆದರೂ ಕೂಡ ಈ ತ್ರೈಮಾಸಿಕ ಲೆಕ್ಕದಲ್ಲಿ ಐಒಸಿ ನಷ್ಟ ಅನುಭವಿಸಿರುವುದು ಗಮನಾರ್ಹವಾಗಿದೆ.

ರಿಲಯನ್ಸ್ ಜಿಯೋ Q2 ಫಲಿತಾಂಶ: ನಿವ್ವಳ ಲಾಭ ಶೇ.28ರಷ್ಟು ಏರಿಕೆರಿಲಯನ್ಸ್ ಜಿಯೋ Q2 ಫಲಿತಾಂಶ: ನಿವ್ವಳ ಲಾಭ ಶೇ.28ರಷ್ಟು ಏರಿಕೆ

ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಐಒಸಿ ಒಟ್ಟಾರೆ ನಷ್ಟ 2,264.88 ರೂ ಆದಂತಾಗಿದೆ. 2021ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಐಒಸಿ 12,301.42 ಕೋಟಿ ರೂ ಲಾಭ ಮಾಡಿಕೊಂಡಿತ್ತು.

ರಿಫೈನಿಂಗ್ ಮಾರ್ಜಿನ್

ರಿಫೈನಿಂಗ್ ಮಾರ್ಜಿನ್

ಗಮನಿಸಬೇಕಾದ ಅಂಶ ಎಂದರೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅರ್ಧವಾರ್ಷಿಕ ಅವಧಿಯಲ್ಲಿ ಸಂಸ್ಕರಣಾ ಅಂತರ (ರಿಫೈನಿಂಗ್ ಮಾರ್ಜಿನ್) ಒಂದು ಬ್ಯಾರಲ್‌ಗೆ ಬರೋಬ್ಬರಿ 25.49 ಡಾಲರ್ ಇದೆ. ಹಿಂದಿನ ವರ್ಷದ ಈ ಅವಧಿಯಲ್ಲಿ ಮಾರ್ಜಿನ್ ಕೇವಲ 6.57 ಡಾಲರ್ ಇತ್ತು. ಇಲ್ಲಿ ರಿಫೈನಿಂಗ್ ಮಾರ್ಜಿನ್ ಎಂದರೆ ಕಚ್ಛಾ ತೈಲದ ಬೆಲೆ ಮತ್ತು ಕಚ್ಛಾ ತೈಲದಿಂದ ತಯಾರಿಸಲಾಗುವ ಪೆಟ್ರೋಲ್, ಡೀಸೆಲ್ ಇತ್ಯಾದಿ ಉತ್ಪನ್ನಗಳ ಮೌಲ್ಯದ ನಡುವಿನ ಅಂತರವಾಗಿದೆ. ಅಂದರೆ, ಇದು ಒಂದು ಉತ್ಪನ್ನದ ಪ್ರಾಫಿಟ್ ಮಾರ್ಜಿನ್ ಎನ್ನಬಹುದು.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಒಸಿಯ ರೀಫೈನಿಂಗ್ ಮಾರ್ಜಿನ್ ಬಹಳ ಹೆಚ್ಚೇ ಇದ್ದರೂ ಯಾಕೆ ನಷ್ಟವಾಯಿತು ಎಂಬುದು ಕುತೂಹಲ.

ಆ್ಯಪಲ್ ಕಂಪನಿಗೆ ಭರ್ಜರಿ ಆದಾಯ ತಂದುಕೊಟ್ಟ ಭಾರತಆ್ಯಪಲ್ ಕಂಪನಿಗೆ ಭರ್ಜರಿ ಆದಾಯ ತಂದುಕೊಟ್ಟ ಭಾರತ

ನಷ್ಟವಾಗಿದ್ದು ಯಾಕೆ?
 

ನಷ್ಟವಾಗಿದ್ದು ಯಾಕೆ?

ಐಒಸಿ ಮಾತ್ರವಲ್ಲ ಸರ್ಕಾರಿ ಸ್ವಾಮ್ಯದ ಇತರ ಪೆಟ್ರೋಲಿಯಂ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್‌ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಸಂಸ್ಥೆಗಳೂ ಕೂಡ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರೀ ಮೊತ್ತದ ನಷ್ಟ ಅನುಭವಿಸಿದ್ದವು. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರಗಳನ್ನು ಸಾಂದರ್ಭಿಕವಾಗಿ ಹೆಚ್ಚಿಸದೇ ಇದ್ದದ್ದು ಈ ನಷ್ಟಕ್ಕೆ ಕಾರಣ ಎನ್ನಲಾಗಿದೆ. ರಿಫೈನಿಂಗ್ ಮಾರ್ಜಿನ್ ಸಕಾರಾತ್ಮಕವಾಗಿದ್ದರೂ ಕೆಲ ಪೆಟ್ರೋಲಿಯಂ ಉತ್ಪನ್ನಗಳಿಗೆ ಮಾರ್ಕೆಟಿಂಗ್ ಮಾರ್ಜಿನ್ ಬಹಳ ತಗ್ಗಿಹೋಗಿದ್ದೂ ಇನ್ನೊಂದು ಕಾರಣ.

ಹಣದುಬ್ಬರ ಕೈಮೀರಿ ಹೋಗುವುದನ್ನು ತಪ್ಪಿಸುವ ಹತಾಶೆಯಲ್ಲಿರುವ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸಬಾರದೆಂದು ಐಒಸಿ ಮತ್ತಿತರ ಕಂಪನಿಗಳಿಗೆ ಸೂಚಿಸಿತ್ತು. ಈ ಕಾರಣಕ್ಕೆ ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ಬೆಲೆ ಪರಿಷ್ಕರಣೆ ಆಗಲಿಲ್ಲ. ಆರು ತಿಂಗಳ ಕಾಲ ಭಾರತದಲ್ಲಿ ಪೆಟ್ರೋಲ್ ಬೆಲೆ ಪರಿಷ್ಕರಣೆ ಆಗದೇ ಇದ್ದದ್ದು ಇದೇ ಮೊದಲು. ಇದು ಐಒಸಿ ಮತ್ತಿರರ ಸಂಸ್ಥೆಗಳಿಗೆ ಭಾರೀ ನಷ್ಟಕ್ಕೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ಎಲ್‌ಪಿಜಿಯಿಂದ ಈ ಪೆಟ್ರೋಲಿಯಂ ಸಂಸ್ಥೆಗಳಿಗೆ ಹೆಚ್ಚು ನಷ್ಟವಾಗಿದೆ.

ಸರ್ಕಾರದ ಸಬ್ಸಿಡಿ

ಸರ್ಕಾರದ ಸಬ್ಸಿಡಿ

ಎರಡು ತ್ರೈಮಾಸಿಕ ಅವಧಿಯಲ್ಲಿ ಈ ಸಂಸ್ಥೆಗಳಿಗೆ ಆಗುವ ನಷ್ಟವನ್ನು ತಗ್ಗಿಸಲು ಎಲ್‌ಪಿಜಿ ಸಬ್ಸಿಡಿ ರೂಪದಲ್ಲಿ ತಾನು 22 ಸಾವಿರ ಕೋಟಿ ರೂ ಕೊಡುವುದಾಗಿಯೂ ಸರ್ಕಾರ ಪ್ರಕಟಿಸಿತು. ಅದರಂತೆ ಐಒಸಿಗೆ 10,801 ರೂ ಹಾಗೂ ಉಳಿದ ಹಣವನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳಿಗೆ ಹಂಚಿದೆ. ಇಷ್ಟಾದರೂ ಪೆಟ್ರೋಲಿಂ ಸಂಸ್ಥೆಗಳಿಗೆ ನಷ್ಟ ತಪ್ಪಿಸಲು ಆಗಲಿಲ್ಲ.

ಇದೇ ವೇಳೆ, ಐಒಸಿ ಸತತ ಎರಡು ಬಾರಿ ನಷ್ಟ ಅನುಭವಿಸಿದರೂ ಷೇರುಪೇಟೆಯಲ್ಲಿ ಅದಕ್ಕೆ ಹಿನ್ನಡೆಯಾಗಿಲ್ಲ. ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಗುರುವಾರ 68.30 ರೂ ಬೆಲೆ ಹೊಂದಿದ್ದ ಐಒಸಿ ಷೇರು ಶುಕ್ರವಾರದ ಅಂತ್ಯದಲ್ಲಿ 68.45 ರೂಪಾಯಿಗೆ ಬೆಲೆ ಹೆಚ್ಚಿಸಿಕೊಂಡಿತ್ತು. ಈಗ ಸತತ ಎರಡು ಅವಧಿಯಲ್ಲಿ ನಷ್ಟ ಅನುಭವಿಸಿದರ ಪರಿಣಾಮ ಸೋಮವಾರದ ವಹಿವಾಟಿನಲ್ಲಿ ಐಒಸಿ ಷೇರು ಮೌಲ್ಯ ಕುಸಿಯುತ್ತದಾ ಇಲ್ಲವಾ ಎಂಬುದು ಕುತೂಹಲ ಎನಿಸಿದೆ.

English summary

Know Reasons Why IOC First Time In Its History Reports Successive Loss

Government owned Indian Oil Corporation has reported net loss of Rs 272.35 crore in July-September quarter. In the previous quarter it showed loss of over thousand crore.
Story first published: Sunday, October 30, 2022, 9:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X