For Quick Alerts
ALLOW NOTIFICATIONS  
For Daily Alerts

ಸಾಲದ ಸುಳಿಯಲ್ಲಿ VIL: ಸರ್ಕಾರಕ್ಕೆ ಷೇರು ವರ್ಗಾವಣೆ ಮಾಡಲು ಮುಂದಾದ ಬಿರ್ಲಾ

|

ಸಾವಿರಾರು ಕೋಟಿ ರೂಪಾಯಿಯ ಸಾಲದ ಬೇಗೆಯಲ್ಲಿ ಬೇಯುತ್ತಿರುವ ವೊಡಾಫೋನ್ ಐಡಿಯಾ ಲಿಮಿಟೆಡ್‌ (ವಿಐಎಲ್‌) ಕಂಪನಿಯ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಆಫರ್ ನೀಡಿದ್ದಾರೆ.

ಕೇಂದ್ರ ಸರ್ಕಾರ ಅಷ್ಟೇ ಅಲ್ಲದೆ ವಿಐಎಲ್‌ ಕಂಪನಿಯನ್ನು ಮುನ್ನೆಡೆಸುವ ಶಕ್ತಿ ಇದೆ ಎಂದು ಸರ್ಕಾರ ಗುರುತಿಸುವ ಯಾವುದೇ ಕಂಪನಿಗೆ ಷೇರು ವರ್ಗಾವಣೆ ಮಾಡಲು ಅವರು ಮುಂದಾಗಿದ್ದಾರೆ.

ಜೂನ್‌ 7ರಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಗೆ ಬರೆದ ಪತ್ರದಲ್ಲಿ ಬಿರ್ಲಾ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ವಿಐಎಲ್‌ ಕಂಪನಿಯು ಹೊಂದಾಣಿಕೆಯ ಮಾಡಿದ ಒಟ್ಟು ಆದಾಯ (AGR) ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ 7,854.37 ಕೋಟಿ ರೂಪಾಯಿ ಪಾವತಿಸಿದ್ದು, ಇನ್ನೂ 50,399.63 ಕೋಟಿ ಬಾಕಿ ಇದೆ.

ಸರ್ಕಾರಕ್ಕೆ ಷೇರು ವರ್ಗಾವಣೆ ಮಾಡಲು ಮುಂದಾದ ಬಿರ್ಲಾ

ಹೀಗಾಗಿ ವಿಐಎಲ್ ಸೇರಿದಂತೆ ಭಾರ್ತಿ ಏರ್‌ಟೆಲ್ ಜೊತೆಗೂಡಿ ಎಜಿಆರ್ ಲೆಕ್ಕವನ್ನು ಮರು ಪರಿಶೀಲನೆ ಮಾಡಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇವರ ಮನವಿಯನ್ನು ಸುಪ್ರೀಂ ತಿರಸ್ಕರಿಸಿತು.

ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಗೆ ಬರೆದ ಪತ್ರದಲ್ಲಿ ಬಿರ್ಲಾ ತಿಳಿಸಿರುವಂತೆ ಕಂಪನಿಯಲ್ಲಿ ಶೇಕಡಾ 27ರಷ್ಟು ಷೇರುಗಳನ್ನು ಹೊಂದಿದ್ದಾರೆ. ಎಜಿಆರ್‌ ಬಾಕಿ , ತರಂಗಾತರಕ್ಕೆ ಸಂಬಂಧಸಿದ ಪಾವತಿಗೆ ಸಾಕಷ್ಟು ಕಾಲವಕಾಶ ಸೇರಿದಂತೆ, ಸೇವಾ ವೆಚ್ಚಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಶುಲ್ಕ ನಿಗದಿ ಮಾಡುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದಿರುವಾಗ ಹೂಡಿಕೆದಾರರು ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ಸಿದ್ಧರಿಲ್ಲ ಎಂದು ಬಿರ್ಲಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಜುಲೈ ವೇಳೆಗೆ ಈ ಮೂರು ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ತಕ್ಷಣವೇ ಸಹಾಯಕ್ಕೆ ಬರದಿದ್ದರೆ ವಿಐಎಲ್ ಆರ್ಥಿಕ ಸ್ಥಿತಿಯು 'ಚೇತರಿಸಲಾಗದ ಕುಸಿತದ ಹಂತಕ್ಕೆ' ತಲುಪಲಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

''ವಿಐಎಲ್ ನಿಂದ ಸಂಪರ್ಕ ಹೊಂದಿದ 27 ಕೋಟಿ ಭಾರತೀಯರ ಕಡೆಗೆ ಕರ್ತವ್ಯ ಪ್ರಜ್ಞೆಯೊಂದಿಗೆ, ಕಂಪನಿಯಲ್ಲಿನ ನನ್ನ ಷೇರನ್ನು ಯಾವುದೇ ಸಂಸ್ಥೆಗೆ ಹಸ್ತಾಂತರಿಸಲು ನಾನು ಸಿದ್ಧನಾಗಿದ್ದೇನೆ. ಅದು ಸಾರ್ವಜನಿಕ ವಲಯ /ಸರ್ಕಾರ /ದೇಶೀಯ ಹಣಕಾಸು ಸಂಸ್ಥೆ ಅಥವಾ ಕಂಪನಿಯನ್ನು ಮುಂದುವರೆಸಲು ಯೋಗ್ಯವಾಗಿದೆ ಎಂದು ಸರ್ಕಾರವು ಪರಿಗಣಿಸಬಹುದಾದ ಯಾವುದೇ ಇತರೆ ಕಂಪನಿಗೆ ಷೇರನ್ನು ವರ್ಗಾಯಿಸುವುದಾಗಿ'' ಬಿರ್ಲಾ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಈ ಬೆಳವಣಿಗೆ ಕುರಿತಾಗಿ ಆದಿತ್ಯ ಬಿರ್ಲಾ ಗ್ರೂಪ್ ಅಥವಾ ವಿಐಎಲ್‌ನಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆಗಳಿಲ್ಲ. ಅಲ್ಲದೆ ಜೂನ್ 7ಕ್ಕೆ ಸರ್ಕಾರಕ್ಕೆ ಪತ್ರ ಬರೆದ ನಂತರ ಎರಡು ಕಡೆ ಸಂವಹನ ನಡೆದಿರುವ ಕುರಿತು ಖಚಿತತೆ ಇಲ್ಲ.

ಸರ್ಕಾರಕ್ಕೆ ಷೇರು ವರ್ಗಾವಣೆ ಮಾಡಲು ಮುಂದಾದ ಬಿರ್ಲಾ

ಸೆಪ್ಟೆಂಬರ್ 2020 ರಲ್ಲಿ, ವಿಐಎಲ್ ತನ್ನ ಮಂಡಳಿಯಿಂದ 25,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸಮ್ಮತಿ ನೀಡಿತ್ತು. ಆದರೆ ಇನ್ನೂ ಕಂಪನಿಯು ಹಣವನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.

ಬಿರ್ಲಾ ಪತ್ರದ ಪ್ರಕಾರ ಹೂಡಿಕೆ ವಿಚಾರವಾಗಿ ಸ್ಪಷ್ಟತೆ ಇಲ್ಲದಿರುವುದರಿಂದ ವಿದೇಶಿ ಹೂಡಿಕೆದಾರರು ಕಂಪನಿಯಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಮಾರ್ಚ್ 31, 2021 ರ ವೇಳೆಗೆ ವಿಐಎಲ್‌ನ ಒಟ್ಟು ಸಾಲ 1,80,310 ಕೋಟಿಯಷ್ಟಿತ್ತು. ಈ ಮೊತ್ತವು ಎಜಿಆರ್ ಹೊಣೆಗಾರಿಕೆಯ ಹೊರತಾಗಿ 96,270 ಕೋಟಿಗಳಷ್ಟು ಮತ್ತು ಹಣಕಾಸು ಸಂಸ್ಥೆಗಳಿಂದ 23,080 ಕೋಟಿಗಳ ಸಾಲವನ್ನು ಒಳಗೊಂಡಿದೆ.

ಹೊಂದಾಣಿಕೆಯ ಒಟ್ಟು ಆದಾಯ (AGR) ಕುರಿತಾಗಿ ವೊಡಾಫೋನ್ , ಐಡಿಯಾ ಭಾರ್ತಿ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು.

English summary

Kumar Mangalam Birla offered to transfer his Vodafone Idea stake to the government

Aditya Birla group Chairman Kumar Mangalam Birla has offered to hand over his stake in debt-laden Vodafone Idea Ltd (VIL) to the government
Story first published: Tuesday, August 3, 2021, 13:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X