ಮುಂಬೈ ಹಾಗೂ ಅಹಮದಾಬಾದ್ ಮಧ್ಯದ ಹೈಸ್ಪೀಡ್ ರೈಲು ಮಾರ್ಗದ ಅತಿ ದೊಡ್ಡ ಭಾಗದ ನಿರ್ಮಾಣಕ್ಕೆ ಲಾರ್ಸನ್ ಅಂಡ್ ಟೂಬ್ರೋ (L&T) ಅತಿ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದೆ. 237.1 ಕಿ.ಮೀ. ವ್ಯಾಪ್ತಿಯ ಮಾರ್ಗಕ್ಕೆ 24,985 ಕೋಟಿ ರುಪಾಯಿ ಬಿಡ್ ಮಾಡಿದೆ. ಆ ಮೂಲಕ ಟಾಟಾ ಪ್ರಾಜೆಕ್ಟ್ಸ್ ಹಾಗೂ ಅಫ್ಕಾನ್ಸ್ ಇನ್ ಫ್ರಾಸ್ಟ್ರಕ್ಚರ್ ಗಿಂತ ಮುಂದಿದೆ.
ಸೋಮವಾರದಂದು ನ್ಯಾಷನಲ್ ಹೈ- ಸ್ಪೀಡ್ ರೈಲ್ ಕಾರ್ಪೊರೇಷನ್ (NHSRCL) ನಿಂದ ಈ ಬಿಡ್ ತೆರೆಯಲಾಯಿತು. C4 ಪ್ಯಾಕೇಜ್ ಗೆ ಮೂರು ಮೂಲಸೌಕರ್ಯ ಅಭಿವೃದ್ಧಿ ಕಂಪೆನಿಗಳು ಬಿಡ್ ಮಾಡಿದ್ದವು. ಒಟ್ಟು 508.17 ಕಿ.ಮೀ. ಉದ್ದದ ಮಾರ್ಗದಲ್ಲಿ ಇದು ಅತಿ ದೊಡ್ಡ, ಅಂದರೆ 47%ನಷ್ಟು ಪಾಲು ಹೊಂದಿದೆ.
ಎಲ್ ಅಂಡ್ ಟಿ ಸೆಗ್ಮೆಂಟ್ ಮಹಾರಾಷ್ಟ್ರ- ಗುಜರಾತ್ ಗಡಿಯಲ್ಲಿ ಶುರುವಾಗುತ್ತದೆ ಮತ್ತು ವಡೋದರಾ ನಿಲ್ದಾಣದ ತನಕ ಇದೆ. ಈ ಮಧ್ಯೆ ವಾಪಿ, ಬಿಲಿಮೊರಾ, ಸೂರತ್ ಮತ್ತು ಭರೂಚಾ ಮೂಲಕ ಸಾಗುತ್ತದೆ. ಇವೆಲ್ಲ ಗುಜರಾತ್ ನಲ್ಲಿ ಇವೆ. ಅಂದ ಹಾಗೆ ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಯೋಜನೆಯನ್ನು 1.08 ಲಕ್ಷ ಕೋಟಿ ರುಪಾಯಿಯಲ್ಲಿ ನಿರ್ಮಿಸುವ ಯೋಜನೆ ಇದೆ. ಇದಕ್ಕಾಗಿ ಜಪಾನ್ ಅಂತರರಾಷ್ಟ್ರೀಯ ಕಾರ್ಪೊರೇಷನ್ ಏಜೆನ್ಸಿಯಿಂದ ಸಾಲ ಪಡೆಯಲಾಗುತ್ತಿದೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಯೋಜನೆ ತಡವಾಗಿದೆ ಎಂದು NHSRCL ಈಗಾಗಲೇ ತಿಳಿಸಿದೆ. ಮುಂಬೈ- ಅಹಮದಾಬಾದ್ ಹೈಸ್ಪೀಡ್ ರೈಲ್ ಗೆ ಮಾರ್ಚ್ 15, 2019ರಲ್ಲಿ ಬಿಡ್ ಆಹ್ವಾನಿಸಲಾಗಿತ್ತು. ತಾಂತ್ರಿಕ ಬಿಡ್ ಅನ್ನು ಸೆಪ್ಟೆಂಬರ್ 23ಕ್ಕೆ ತೆರೆಯಲಾಯಿತು. ಅದರಲ್ಲಿ ಮೂವರು ಬಿಡ್ಡರ್ ಅರ್ಹರಾದರು.
ಈ ಬಿಡ್ ನಲ್ಲಿ ಡಿಸೈನ್, ಸಿವಿಲ್ ವರ್ಕ್ಸ್ ನಿರ್ಮಾಣ, ಪರೀಕ್ಷೆ, ಹೈಸ್ಪೀಡ್ ರೈಲ್ವೆ ಜೋಡಿ ಹಳಿ ನಿರ್ಮಾಣ, ನಿರ್ವಹಣೆ ಡಿಪೋಗಳು, ಸುರಂಗ, ಸೇತುವೆ, ನಿಲ್ದಾಣಗಳ ನಿರ್ಮಾಣ ಮತ್ತಿತರ ಕೆಲಗಳು ಒಳಗೊಂಡಿವೆ.


Click it and Unblock the Notifications