For Quick Alerts
ALLOW NOTIFICATIONS  
For Daily Alerts

Sharechat: ಗೂಗಲ್ ನೇತೃತ್ವದ ಶೇರ್‌ಚಾಟ್‌ನಲ್ಲಿ ಶೇ.20ರಷ್ಟು ಉದ್ಯೋಗ ಕಡಿತ!

|

ಸಣ್ಣ ವಿಡಿಯೋವನ್ನು ಶೇರ್ ಮಾಡುವ ಪ್ಲಾಟ್‌ಫಾರ್ಮ್ ಆದ ಶೇರ್‌ಚಾಟ್ ಈಗ ಸಂಸ್ಥೆಯಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಗೂಗಲ್ ಹಾಗೂ ಟೆಮಸೆಕ್ ನೇತೃತ್ವದಲ್ಲಿ ನಡೆಸಲಾಗುವ ಈ ಆಪ್‌ನಲ್ಲಿ ಕಾರ್ಯನಿರ್ವಹಣೆ ಮಾಡುವ ಸುಮಾರು ಶೇಕಡ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.

ಶೇರ್‌ಚಾಟ್‌ ಸ್ಟಾರ್ಟ್‌ಅಪ್ ಸಂಸ್ಥೆಯಾಗಿದ್ದು, ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿದೆ. ಹೂಡಿಕೆದಾರರು ಸಂಸ್ಥೆಯಲ್ಲಿನ ವೆಚ್ಚವನ್ನು ಕಡಿತ ಮಾಡಬೇಕು ಎಂದು ಒತ್ತಡವನ್ನು ಹೇರುತ್ತಿದ್ದಾರೆ. ಈ ಕಾರಣದಿಂದಾಗಿ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗುತ್ತಿದೆ. ಈ ಹಿಂದೆ ಹಲವಾರು ಸಂಸ್ಥೆಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ.

ಮುಂದುವರಿದ ಉದ್ಯೋಗ ನಷ್ಟ: ಓಲಾ, ಕ್ರಿಪ್ಟೋ ಡಾಟ್‌ ಕಾಮ್‌ನಲ್ಲಿ ಉದ್ಯೋಗ ಕಡಿತಮುಂದುವರಿದ ಉದ್ಯೋಗ ನಷ್ಟ: ಓಲಾ, ಕ್ರಿಪ್ಟೋ ಡಾಟ್‌ ಕಾಮ್‌ನಲ್ಲಿ ಉದ್ಯೋಗ ಕಡಿತ

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶೇರ್‌ಚಾಟ್ ಸಿಇಒ ಅಂಕುಶ್ ಸಚ್‌ದೇವ, "ಪ್ರಸ್ತುತ ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಕುಸಿತವು ದೀರ್ಘ ಸಮಯದವರೆಗೆ ಉಳಿಯುವಂತದ್ದು ಎಂದು ಹಲವಾರು ತಜ್ಞರುಗಳ ಅಭಿಪ್ರಾಯವಾಗಿದೆ. ಅದರಿಂದಾಗಿ ನಾವು ಸಂಸ್ಥೆಯಲ್ಲಿ ಉಳಿತಾಯ ಹೆಚ್ಚಿಸಿ, ವೆಚ್ಚವನ್ನು ಕಡಿತ ಮಾಡಬೇಕಾಗುತ್ತದೆ. ಅದಕ್ಕಾಗಿ ಉದ್ಯೋಗ ಕಡಿತವನ್ನು ಮಾಡಲಾಗುತ್ತಿದೆ," ಎಂದು ತಿಳಿಸಿದ್ದಾರೆ.

 ಗೂಗಲ್ ನೇತೃತ್ವದ ಶೇರ್‌ಚಾಟ್‌ನಲ್ಲಿ ಶೇ.20ರಷ್ಟು ಉದ್ಯೋಗ ಕಡಿತ!

ಸಂಸ್ಥೆಯ ಮೌಲ್ಯ ಎಷ್ಟಿದೆ, ಉದ್ಯೋಗಳ ಸಂಖ್ಯೆ ಎಷ್ಟಿದೆ?

ಸಂಸ್ಥೆಯ ವೆಬ್‌ಸೈಟ್ ಪ್ರಕಾರ ಬೆಂಗಳೂರು ಮೂಲದ ಶೇರ್‌ಚಾಟ್‌ 40,676 ಕೋಟಿ ರೂಪಾಯಿ (5 ಬಿಲಿಯನ್) ಮೌಲ್ಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಭಾರತ, ಯುಎಸ್‌ಎ ಮತ್ತು ಯುರೋಪ್ ಜಾಗತಿಕವಾಗಿ ತನ್ನ ತಂಡವನ್ನು ಹೊಂದಿದೆ. ಸಂಸ್ಥೆಯಲ್ಲಿ ಸುಮಾರು 2,200ರಷ್ಟು ಉದ್ಯೋಗಿಗಳು ಇದ್ದಾರೆ.

Goldman Sachs Layoffs: ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಈ ವಾರದಲ್ಲೇ 3,200 ಉದ್ಯೋಗ ಕಡಿತGoldman Sachs Layoffs: ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಈ ವಾರದಲ್ಲೇ 3,200 ಉದ್ಯೋಗ ಕಡಿತ

ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವ ನಿರ್ಧಾರವನ್ನು ಕೈಗೊಂಡ ಬಳಿಕ ಸಂಸ್ಥೆಯು ವೆಬ್‌ಸೈಟ್ ಅಲ್ಲಿ ಅಪ್‌ಡೇಟ್ ಮಾಡಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಕಳೆದ ವರ್ಷ ಭಾರತದ ಸ್ಟಾರ್ಟ್‌ಅಪ್‌ಗಳು 24 ಬಿಲಿಯನ್ ಡಾಲರ್ ಆದಾಯ ಹೆಚ್ಚಿಸಿದೆ.

ಬೇರೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ

ಈಗಾಗಲೇ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಇತ್ತೀಚೆಗೆ ಓಲಾ, ಕ್ರಿಪ್ಟೋ ಡಾಟ್‌ ಕಾಮ್‌ನಲ್ಲಿ ಉದ್ಯೋಗ ಕಡಿತ ಘೋಷಿಸಲಾಗಿದೆ. ಗೋಲ್ಡ್‌ಮ್ಯಾನ್ ಸಾಚ್ಸ್‌, ಅಮೆಜಾನ್, ಟ್ವಿಟ್ಟರ್‌, ಎಚ್‌ಪಿ, ಬೈಜೂಸ್, ಮೆಟಾ, ಗೂಗಲ್‌, ಜೊಮ್ಯಾಟೊ ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಘೋಷಣೆ ಮಾಡಲಾಗಿದೆ.

English summary

Layoff Wagon: Google-backed ShareChat cuts 20 percent of workforce

Layoff Wagon: ShareChat, a short video-sharing platform backed by Google and Temasek, said on Monday it let go of around 20 per cent of its employees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X