For Quick Alerts
ALLOW NOTIFICATIONS  
For Daily Alerts

Microsoft Layoff : ಮೈಕ್ರೋಸಾಫ್ಟ್‌ನಲ್ಲಿ ಜ.18ರಂದು ಉದ್ಯೋಗ ಕಡಿತ, ಎಷ್ಟು ಮಂದಿಗೆ ಗೇಟ್‌ಪಾಸ್?

|

ಹಣದುಬ್ಬರ ಹಾಗೂ ಜಾಗತಿಕವಾಗಿ ಆರ್ಥಿಕ ಹಿಂಜರಿತದ ಆತಂಕದ ನಡುವೆ ಹಲವಾರು ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಪ್ರತಿ ದಿನ ಒಂದಲ್ಲ ಒಂದು ಸಂಸ್ಥೆಯಲ್ಲಿ ಉದ್ಯೋಗ ಕಡಿತದ ಬಗ್ಗೆ ಸುದ್ದಿಯಾಗುತ್ತಿದೆ. ಈಗ ಮೈಕ್ರೋಸಾಫ್ಟ್ ಸಂಸ್ಥೆಯು ಇಂದು (ಬುಧವಾರ ಅಂದರೆ ಜನವರಿ 18ರಂದು) ಸಂಸ್ಥೆಯಲ್ಲಿ ಶೇಕಡ 5ರಷ್ಟು ಮಂದಿಯನ್ನು ಕೆಲಸದಿಂದ ವಜಾಗೊಳಿಸಲಿದೆ ಎಂದು ವರದಿ ಹೇಳಿದೆ.

 

ಮೈಕ್ರೋಸಾಫ್ಟ್ ಜಾಗತಿಕವಾಗಿ ಆರ್ಥಿಕ ಸ್ಥಿತಿ ಕೆಟ್ಟದಾಗಿರುವ ಕಾರಣದಿಂದಾಗಿ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ತನ್ನ ಇಂಜಿನಿಯರಿಂಗ್ ಡಿವಿಜನ್‌ನಲ್ಲಿ ಬುಧವಾರವೇ ಉದ್ಯೋಗಿಗಳ ವಜಾಗೊಳಿಸಲು ಸಂಸ್ಥೆಯು ಆರಂಭಿಸಲಿದೆ. ಈ ಹಿಂದೆಯೇ ಸಂಸ್ಥೆಯಲ್ಲಿ ಉದ್ಯೋಗ ಕಡಿತದ ಬಗ್ಗೆ ಮಾಹಿತಿ ಲಭಿಸಿತ್ತು.

 

ಆಪಲ್ ಹಿಂದಿಕ್ಕಿ ಜಗತ್ತಿನ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದ ಮೈಕ್ರೋಸಾಫ್ಟ್‌ಆಪಲ್ ಹಿಂದಿಕ್ಕಿ ಜಗತ್ತಿನ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದ ಮೈಕ್ರೋಸಾಫ್ಟ್‌

ಆದರೆ ಈ ಬಗ್ಗೆ ಸಂಸ್ಥೆಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಸುದ್ದಿ ಬರೀ ವದಂತಿ ಎಂದು ಹೇಳಿಕೊಂಡಿದೆ. ಆದರೆ ಸಂಸ್ಥೆಯಲ್ಲಿ ಕಳೆದ ವರ್ಷದಲ್ಲಿ ಎರಡು ಬಾರಿ ಸುಮಾರು 220,000ಕ್ಕೂ ಅಧಿಕ ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ ಎಂದು ವರದಿಯು ಉಲ್ಲೇಖಿಸಿದೆ. ಯುಎಸ್‌ನಲ್ಲಿ ಒಟ್ಟಾಗಿ 1,22,000 ಉದ್ಯೋಗ ಕಡಿತ ಮಾಡಿದ್ದರೆ, ಜಾಗತಿಕವಾಗಿ ಬೇರೇಡೆ 99,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

Layoff: ಮೈಕ್ರೋಸಾಫ್ಟ್‌ನಲ್ಲಿ ಜ.18ರಂದು ಉದ್ಯೋಗ ಕಡಿತ, ಎಷ್ಟು ವಜಾ?

ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳ ಮಾರಾಟ ಕುಸಿತವಾದಂತೆ, ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಈ ಕ್ರಮವನ್ನು ಕೈಗೊಂಡಿದೆ. ಈ ಹಿಂದೆ ಎಚ್‌ಪಿ ಸಂಸ್ಥೆಯ ಉತ್ಪನ್ನದ ಮಾರಾಟವು ಕಡಿಮೆಯಾದಾಗ ಸಂಸ್ಥೆಯು ಉದ್ಯೋಗ ಕಡಿತದ ಹಾದಿ ತುಳಿದಿತ್ತು.

ಜಾಗತಿಕ ಮಾರುಕಟ್ಟೆ ಟಾಪ್ 100 ಕಂಪನಿಗಳ ಮೌಲ್ಯ 31 ಟ್ರಿಲಿಯನ್ ಡಾಲರ್‌ಗೇರಿಕೆಜಾಗತಿಕ ಮಾರುಕಟ್ಟೆ ಟಾಪ್ 100 ಕಂಪನಿಗಳ ಮೌಲ್ಯ 31 ಟ್ರಿಲಿಯನ್ ಡಾಲರ್‌ಗೇರಿಕೆ

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಕೆಲವೇ ಮಂದಿಯನ್ನು ಸಂಸ್ಥೆಯಿಂದ ವಜಾಗೊಳಿಸಲಾಗುತ್ತದೆ ಎಂದು ಸಂಸ್ಥೆಯು ಹೇಳಿತ್ತು. ಅಕ್ಟೋಬರ್‌ನಲ್ಲಿ ಮೈಕ್ರೋಸಾಫ್ಟ್ ಬೇರೆ ಬೇರೆ ಡಿವಿಜನ್‌ನಲ್ಲಿ ಒಟ್ಟಾಗಿ ಒಂದು ಸಾವಿರ ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ ಎಂದು ವರದಿಯಾಗಿತ್ತು. ಇನ್ನು ಈಗ ಮೈಕ್ರೋಸಾಫ್ಟ್‌ನಲ್ಲಿ ಸುಮಾರು ಶೇಕಡ 5ರಿಂದ 10ರವರೆಗೆ ಉದ್ಯೋಗ ಕಡಿತ ನಿರೀಕ್ಷೆಯಿದೆ.

English summary

Layoff Wagon: Microsoft Likely to Layoff Thousands of Employees on January 18

Layoff Wagon: Microsoft is reportedly likely to lay off thousands of employees today, January 18, in order to reduce around 5% of its workforce.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X