For Quick Alerts
ALLOW NOTIFICATIONS  
For Daily Alerts

LIC Q2 Results: ಎಲ್‌ಐಸಿ Q2 ವರದಿ: 15,952 ಕೋಟಿ ರೂ ನಿವ್ವಳ ಲಾಭ

|

ಭಾರತದ ಅತಿ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಎರಡನೇ ತ್ರೈಮಾಸಿಕ ನಿವ್ವಳ ಲಾಭ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಕೊನೆಯಾದ ಎರಡನೇ ತ್ರೈಮಾಸಿಕದಲ್ಲಿ (Q2) ಎಲ್‌ಐಸಿ 15,952 ಕೋಟಿ ರೂಪಾಯಿ ನಿವ್ವಳ ಲಾಭ ವರದಿ ಮಾಡಿದೆ.

ಕಳೆದ ವರ್ಷ ಈ ತ್ರೈಮಾಸಿಕದಲ್ಲಿಯೇ ಎಲ್‌ಐಸಿ 1433 ಕೋಟಿ ರೂಪಾಯಿ ನಿವ್ವಳ ಲಾಭವನ್ನು ವರದಿ ಮಾಡಿತ್ತು. ಜೂನ್‌ನಲ್ಲಿ ಕೊನೆಯಾದ ಮೊದಲ ತ್ರೈಮಾಸಿಕದಲ್ಲಿ ಎಲ್‌ಐಸಿ ಒಟ್ಟು ಕೇವಲ 682.9 ಕೋಟಿ ರೂಪಾಯಿ ನಿವ್ವಳ ಲಾಭವನ್ನಷ್ಟೇ ವರದಿ ಮಾಡಿತ್ತು.

ಎಲ್ಐಸಿ Q1ರಲ್ಲಿ ಡೆತ್ ಕ್ಲೇಮ್ ದರ ಶೇ 10ರಷ್ಟು ಕುಸಿತ!ಎಲ್ಐಸಿ Q1ರಲ್ಲಿ ಡೆತ್ ಕ್ಲೇಮ್ ದರ ಶೇ 10ರಷ್ಟು ಕುಸಿತ!

ಮೊದಲ ವರ್ಷದ ಪ್ರೀಮಿಯಂ ಪ್ರಮಾಣ ಅಧಿಕವಾಗಿದೆ. ಕಳೆದ ವರ್ಷ 8198.30 ಕೋಟಿ ರೂಪಾಯಿಯಷ್ಟಿದ್ದ ಮೊದಲ ವರ್ಷದ ಪ್ರೀಮಿಯಂ ಪ್ರಮಾಣ ಈ ವರ್ಷ 9,124.7 ಕೋಟಿ ರೂಪಾಯಿಗೆ ಏರಿದೆ. ನಿವ್ವಳ ಪ್ರೀಮಿಯಂ ಆದಾಯ 1.32 ಲಕ್ಷ ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿವ್ವಳ ಪ್ರೀಮಿಯಂ ಆದಾಯ 1.04 ಲಕ್ಷ ಕೋಟಿ ರೂಪಾಯಿ ಆಗಿತ್ತು.

 ಎಲ್‌ಐಸಿ Q2 ವರದಿ: 15,952 ಕೋಟಿ ರೂ ನಿವ್ವಳ ಲಾಭ

ಸ್ಟಾಕ್ ಮಾರುಕಟ್ಟೆಯಲ್ಲಿ ಎಲ್‌ಐಸಿ ಸ್ಥಿತಿಗತಿ

ಅಕ್ಟೋಬರ್ 31ರಂದು ಷೇರು ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಸುಮಾರು ಶೇಕಡ 2.5ರಷ್ಟು ಏರಿಕೆ ಕಾಣುವ ಮೂಲಕ ಭಾರೀ ಸುದ್ದಿಯಾಗಿತ್ತು. ಅದಕ್ಕೂ ಮೊದಲು ಎಲ್‌ಐಸಿ ಷೇರು ಇಷ್ಟು ಪ್ರಮಾಣದಲ್ಲಿ ಹೆಚ್ಚಳ ಕಂಡಿರಲಿಲ್ಲ. ನವೆಂಬರ್ 11ರಂದು ಎಲ್‌ಐಸಿ ಷೇರು ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ ಸುಮಾರು ಶೇಕಡ 1.17ರಷ್ಟು ಏರಿಕೆಯಾಗಿ 628 ರೂಪಾಯಿಗೆ ಸ್ಥಿರವಾಗಿದೆ.

6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ

ಕಳೆದ ಕೆಲವು ದಿನಗಳಿಂದ ಎಲ್‌ಐಸಿ ಷೇರುಗಳು ಹೆಚ್ಚಳವಾಗುತ್ತಿದೆ. ಆದರೂ ಐಪಿಒ ವೇಳೆ ಲೀಸ್ಟಿಂಗ್ ಆದ ಮೊತ್ತಕ್ಕಿಂತ ಈ ಷೇರು ಬೆಲೆ ಭಾರೀ ಕುಸಿದಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಷೇರು ಪೇಟೆಗೆ ಎಲ್‌ಐಸಿ ಎಂಟ್ರಿ ನೀಡಿದ್ದು ಅಂದಿನಿಂದ ಇಂದಿನವರೆಗೆ ಷೇರು ಮೌಲ್ಯ ಸುಮಾರು ಶೇಕಡ 30ರಷ್ಟು ಕುಗ್ಗಿದೆ.

ಮೊದಲ ತ್ರೈಮಾಸಿಕದಲ್ಲಿ ಜೀವ ವಿಮಾನಿಗಮ ಪಾಲಿಸಿಗಳ ಡೆತ್ ಕ್ಲೇಮ್ ದರ ಶೇ 20ರಷ್ಟು ಕುಸಿತವನ್ನು ಕಂಡಿತ್ತು. ಆದರೂ ಮೊತ್ತವು 2020 ಕ್ಕಿಂತ ಹಿಂದಿನ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ವಿಮಾ ಸಂಸ್ಥೆ ವರದಿ ನೀಡಿತ್ತು. Q1 FY23 ಗೆ, ದಾಖಲೆಯ ಪ್ರೀಮಿಯಂ ಆದಾಯದ ಹಿನ್ನೆಲೆಯಲ್ಲಿ LICಯ ನಿವ್ವಳ ಲಾಭವು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 2.94 ಕೋಟಿ ರೂ.ಗಳಿಂದ 682.88 ಕೋಟಿ ರೂ.ಗೆ ಜಿಗಿದಿದೆ.

English summary

LIC Q2 Results: Net Profit Up to Rs 15,952 Crore

Life Insurance Corporation (LIC) Q2FY23 Results: lic reported a net profit of Rs 15,952 crore for the quarter ended September (Q2FY23).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X