For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಎಲ್‌ಐಸಿ ಮಿಂಚು; ಈಗ ಕೊಂಡರೆ ಲಾಭವಾ?

|

ನವದೆಹಲಿ, ನ. 14: ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ಸಂಸ್ಥೆ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಲಾಭದ ವರದಿ ತೋರಿಸಿದ ಬೆನ್ನಲ್ಲೇ ಇಂದು ಸೋಮವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರಿಗೆ ಒಳ್ಳೆಯ ಬೇಡಿಕೆ ಬಂದಿದೆ. ಸೋಮವಾರ ಬೆಳಗಿನ ವಹಿವಾಟಿನಲ್ಲಿ ಎಲ್‌ಐಸಿ ಶೇ. 9ರಷ್ಟು ಏರಿಕೆಯಾಗಿದೆ. ಕಳೆದ ವಾರಾಂತ್ಯದಲ್ಲಿ ಪ್ರತೀ ಷೇರಿಗೆ 627.7 ರೂ ಬೆಲೆ ಹೊಂದಿದ್ದ ಎಲ್‌ಐಸಿ ಇಂದು ಬೆಳಗ್ಗೆ 684.90 ರೂವರೆಗೂ ಹೋಗಿತ್ತು. ಮಧ್ಯಾಹ್ನದ ವೇಳೆಗೆ ಎಲ್‌ಐಸಿ ಷೇರು 664.20 ರೂನಲ್ಲಿ ವಹಿವಾಟಾಗುತ್ತಿದೆ.

ಆರು ತಿಂಗಳ ಹಿಂದಷ್ಟೇ ಐಪಿಒ ಮೂಲಕ ಷೇರುಪೇಟೆಗೆ ಪ್ರವೇಶ ಪಡೆದಿರುವ ಎಲ್‌ಐಸಿಯ ಹೂಡಿಕೆದಾರರಿಗೆ ತುಸು ನಗೆ ಬಂದಂತಾಗಿದೆ. ಯಾಕೆಂದರೆ ಐಪಿಒ ಆಫರ್‌ನಲ್ಲಿ ಎಲ್‌ಐಸಿ ಷೇರನ್ನು ಜನರು ರೂ 902ರಿಂದ ರೂ 949 ಬೆಲೆಗೆ ಖರೀದಿ ಮಾಡಿದ್ದರು. ಭಾರತದ ಅತಿದೊಡ್ಡ ವಿಮಾ ಕಂಪನಿ ಎನಿಸಿದ ಎಲ್‌ಐಸಿಯ ಮೇಲೆ ಬಹಳ ಮಂದಿ ಮುಗಿಬಿದ್ದು ಹೂಡಿಕೆ ಮಾಡಿದ್ದರು. ಆದರೆ, ಒಂದು ಹಂತದಲ್ಲಿ ಷೇರು ಬೆಲೆ 560 ರೂಗಿಂತಲೂ ಕೆಳಗೆ ಕುಸಿದುಹೋಗಿತ್ತು.

LIC Q2 Results: ಎಲ್‌ಐಸಿ Q2 ವರದಿ: 15,952 ಕೋಟಿ ರೂ ನಿವ್ವಳ ಲಾಭLIC Q2 Results: ಎಲ್‌ಐಸಿ Q2 ವರದಿ: 15,952 ಕೋಟಿ ರೂ ನಿವ್ವಳ ಲಾಭ

ಎಲ್‌ಐಸಿಗೆ ಹಣ ಹಾಕಿದ್ದವರು ತಲೆ ಮೇಲೆ ಕೈಹೊತ್ತಿಕೊಳ್ಳುವುದು ಬಿಟ್ಟರೆ ಬೇರೆ ಮಾರ್ಗ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯ ಲಾಭ ನಷ್ಟದ ವರದಿಯನ್ನು ಎಲ್‌ಐಸಿ ಶುಕ್ರವಾರ ಬಿಡುಗಡೆ ಮಾಡಿ ಷೇರುದಾರರ ಉತ್ಸಾಹ ಹೆಚ್ಚುವಂತೆ ಆಗಿದೆ.

ಭರ್ಜರಿ ಲಾಭ

ಭರ್ಜರಿ ಲಾಭ

ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಎಲ್‌ಐಸಿ ಬರೋಬ್ಬರಿ 15,952 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಿಕ್ಕ ನಿವ್ವಳ ಲಾಭ 1,433 ಕೋಟಿ ರೂ ಮಾತ್ರ. ಹಿಂದಿನ ಜೂನ್ ಅಂತ್ಯದ ಕ್ವಾರ್ಟರ್‌ನಲ್ಲಿ, ಅಂದರೆ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಎಲ್‌ಐಸಿಗೆ ಸಿಕ್ಕ ನಿವ್ವಳ ಲಾಭ ಕೇವಲ 682.9 ರೂ ಅಗಿತ್ತು. ಲಾಭ ಕಡಿಮೆಗೊಂಡಿದ್ದು ಎಲ್‌ಐಸಿ ಷೇರುದಾರರಿಗೆ ಭಯ ತಂದಿತ್ತು. ಹೀಗಾಗಿ ಷೇರು ಮೌಲ್ಯ ತೀವ್ರವಾಗಿ ಕಡಿಮೆಯಾಗಿ ಹೋಗಿತ್ತು.

ಈಗ ಈ ಎರಡು ತ್ರೈಮಾಸಿಕ ಅವಧಿಯಲ್ಲಿ ಗಳಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ನಿವ್ವಳ ಲಾಭವನ್ನು ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಎಲ್‌ಐಸಿ ಕಂಡಿದೆ. ಇದರಿಂದ ಎಲ್‌ಐಸಿ ಷೇರುಗಳು ಮತ್ತೆ ಮೂಲಬೆಲೆಗೆ ಏರುವ ಸಾಧ್ಯತೆ ಇಲ್ಲದಿಲ್ಲ.

ಇನ್ನು, ಎಲ್‌ಐಸಿಯ ನೆಟ್ ಪ್ರೀಮಿಯಂ ಇನ್ಕಂ 1.32 ಲಕ್ಷ ಕೋಟಿ ಇದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಈ ಆದಾಯದಲ್ಲಿ ಶೇ. 26.6ರಷ್ಟು ಹೆಚ್ಚಾಗಿದೆ. ಹೂಡಿಕೆಗಳಿಂದ ಬಂದಿರುವ ನಿವ್ವಳ ಆದಾಯ 84,104 ಕೋಟಿ ರೂ ಇದೆ. ಇದೂ ಕೂಡ ಹಿಂದಿನ ವರ್ಷದಕ್ಕಿಂತ ಶೇ. 10ರಷ್ಟು ಹೆಚ್ಚಾಗಿದೆ. ಇಲ್ಲಿ ನೆಟ್ ಪ್ರೀಮಿಯಂ ಇನ್ಕಂ ಎಂದರೆ ಎಲ್‌ಐಸಿ ಪಾಲಿಸಿಗಳಿಗೆ ಕಟ್ಟಲಾಗಿರುವ ಪ್ರೀಮಿಯಂಗಳು.

ಫಸ್ಟ್ ಇಯರ್ ಪ್ರೀಮಿಯಮ್ ಇನ್ಕಂ ಈ ತ್ರೈಮಾಸಿಕ ಅವಧಿಯಲ್ಲಿ 9,125 ಕೋಟಿ ರೂ ಇದೆ. ಇದರಲ್ಲೂ ಶೇ. 11.3ರಷ್ಟು ಹೆಚ್ಚಾಗಿದೆ. ಇಲ್ಲಿ ಫಸ್ಟ್ ಇಯರ್ ಪ್ರೀಮಿಯಮ್ ಎಂದರೆ ಹೊಸ ಪಾಲಿಸಿದಾರರು ಮೊದಲು ವರ್ಷ ಕಟ್ಟಿದ ಪ್ರೀಮಿಯಂ ಹಣವಾಗಿದೆ. ಇನ್ನು ಸಿಂಗಲ್ ಪ್ರೀಮಿಯಂಗಳಿಂದ ಬಂದ ಆದಾಯದಲ್ಲಿ ಶೇ. 62ರಷ್ಟು ಹೆಚ್ಚಳವಾಗಿ 66,901 ಕೋಟಿ ರೂ ತಲುಪಿದೆ.

 

ಎಲ್‌ಐಸಿ ಐಪಿಒ

ಎಲ್‌ಐಸಿ ಐಪಿಒ

2022 ಮೇ 4ರಿಂದ 9ರವರೆಗೆ ಎಲ್‌ಐಸಿ ಐಪಿಒಗೆ ತೆರೆದುಕೊಂಡಿತು. ಆರಂಭಿಕ ಸಾರ್ವಜನಿಕ ಕೊಡುಗೆಯ ಆಫರ್‌ನಲ್ಲಿ ಎಲ್‌ಐಸಿ 22 ಕೋಟಿಗೂ ಹೆಚ್ಚು ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಬಿಟ್ಟಿತು. ಪ್ರತಿಯೊಂದು ಷೇರು ಬೆಲೆ 902 ರೂನಿಂದ 949 ರೂನಂತೆ ಬಿಕರಿಯಾಯಿತು. 15 ಷೇರುಗಳ ಲಾಟ್ ಲೆಕ್ಕದಲ್ಲಿ ಎಲ್‌ಐಸಿಯ ಷೇರುಗಳನ್ನು ವಿತರಿಸಲಾಯಿತು. ಇದರಿಂದ ಎಲ್‌ಐಸಿಗೆ 21 ಸಾವಿರ ಕೋಟಿ ರೂ ಬಂಡವಾಳ ಸಿಕ್ಕಿತು.

ಈಗ ಷೇರು ಕೊಳ್ಳಬಹುದೇ?

ಈಗ ಷೇರು ಕೊಳ್ಳಬಹುದೇ?

ಅದಾದ ಬಳಿಕ ಷೇರುಪೇಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಲಿಸ್ಟ್ ಆದ ಎಲ್‌ಐಸಿಯ ಷೇರುಗಳಿಗೆ ಅಷ್ಟೇನೂ ಬೇಡಿಕೆ ಬರಲಿಲ್ಲ. ಆದರೆ, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಎಲ್‌ಐಸಿ ತೋರಿಸಿದ ಲಾಭದ ಪರಿಣಾಮ ಷೇರು ಬೆಲೆ ಹೆಚ್ಚಬಹುದು. ಬ್ರೋಕರೇಜ್ ಕಂಪನಿ ಐಸಿಐಸಿಐ ಸೆಕ್ಯೂರಿಟೀಸ್ ಎಲ್‌ಐಸಿಯ ಷೇರು ಬೆಲೆ ಸದ್ಯೋಭವಿಷ್ಯದಲ್ಲಿ 917 ರೂ ಗೆ ಏರಿಕೆ ಆಗಬಹುದು ಎಂದು ಅಂದಾಜು ಮಾಡಿದೆ. ಹೀಗಾಗಿ, ನೀವು ಎಲ್‌ಐಸಿ ಷೇರು ಖರೀದಿ ಮಾಡಬೇಕೆಂದಿದ್ದರೆ ಈಗಲೂ ಕಾಲ ಮಿಂಚಿಲ್ಲ.

Post Office PPF Scheme 2022 : ದಿನಕ್ಕೆ 417 ರೂ ವ್ಯಯಿಸಿ, 1 ಕೋಟಿ ಪಡೆಯಿರಿPost Office PPF Scheme 2022 : ದಿನಕ್ಕೆ 417 ರೂ ವ್ಯಯಿಸಿ, 1 ಕೋಟಿ ಪಡೆಯಿರಿ

English summary

LIC Share Price Jumps High; Is This Right Time To Buy Stock

Life Insurance Corporation has regained life in share market after its good showing in second quarter of this financial year. Some security analysts have suggested that LIC shares may go higher in coming days.
Story first published: Monday, November 14, 2022, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X