For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ

|

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರು ಸ್ಟಾಕ್ ಮಾರುಕಟ್ಟೆಗೆ ಎಂಟ್ರಿ ನೀಡಿದ ಮೊದಲ ದಿನವೇ ರಿಯಾಯಿತಿ ದರದಲ್ಲಿ ವಹಿವಾಟು ಆರಂಭಿಸಿದೆ. ಆ ಬಳಿಕ ನಿರಂತರವಾಗಿ ಇಳಿಕೆ ಕಂಡಿದೆ. ಕಳೆದ ಎರಡು ಸೆಷನ್‌ಗಳಲ್ಲಿ ಕೊಂಚ ಏರಿಕೆ ಕಂಡಿದೆ. ಈ ನಡುವೆ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಎಲ್‌ಐಸಿ ಷೇರು ಖರೀದಿ ಮಾಡಲು ಸಲಹೆ ನೀಡಿದೆ.

 

ಎಲ್‌ಐಸಿ ಷೇರು ಮೌಲ್ಯವು ಚೇತರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಿರುವ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಎಲ್‌ಐಸಿ ಷೇರುಗಳು ರೂಪಾಯಿ 830ಕ್ಕೆ ಎಲ್‌ಐಸಿ ಷೇರು ಏರಿಕೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದೆ. ಹಣಕಾಸು ವರ್ಷ 22-24ರಲ್ಲಿ ಎಲ್‌ಐಸಿ ಷೇರು ಸುಮಾರು ಶೇಕಡ 10ರಷ್ಟು ವಾರ್ಷಿಕವಾಗಿ ಬೆಳವಣಿಗೆ ಹೊಂದುವ ನಿರೀಕ್ಷೆ ವ್ಯಕ್ತಪಡಿಸಿದೆ.

ಷೇರು ಪೇಟೆ ಶುಭಾರಂಭ: ಮತ್ತೆ ಎಲ್‌ಐಸಿ ಸ್ಟಾಕ್ ಜಿಗಿತ

ಆದರೂ ಎಂಬೆಡೆಡ್ ಮೌಲ್ಯದ ಮೇಲೆ ಬರುವ ರಿಟರ್ನ್ ಸುಮಾರು ಶೇಕಡ 9.7ರಷ್ಟು ಕುಸಿಯುವ ಬಗ್ಗೆಯೂ ಉಲ್ಲೇಖ ಮಾಡಿದೆ. ಈ ಷೇರಿನಲ್ಲಿ ಹೂಡಿಕೆ ಅಪಾಯಕಾರಿ ಎಂಬುವುದನ್ನು ಕೂಡಾ ಈ ಮೂಲಕ ತಿಳಿಸಿದೆ.

 ಎಲ್‌ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ

ಷೇರು ಪೇಟೆಗೆ ರಿಯಾಯಿತಿ ದರದಲ್ಲಿ ಎಂಟ್ರಿ ನೀಡಿದ್ದ ಎಲ್‌ಐಸಿ

2022ರ ಮೇ 17ರಂದು ಷೇರು ಪೇಟೆಗೆ ಎಂಟ್ರಿ ನೀಡಿದ ದಿನದಿಂದ ಎಲ್‌ಐಸಿ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ. ಎಲ್‌ಐಸಿ ಷೇರು ವಿತರಣಾ ಬೆಲೆಯು ರೂಪಾಯಿ 949ರಷ್ಟು ಆಗಿದ್ದು, ರಿಯಾಯಿತಿ ದರದಲ್ಲಿ ಷೇರು ಪೇಟೆಗೆ ಇಳಿದಿದೆ.

ಶೇಕಡ 7.75ರಷ್ಟು ರಿಯಾಯಿತಿ ದರದಲ್ಲಿ ಅಂದರೆ 875.45ರೂ.ನಲ್ಲಿ ಬಿಎಸ್‌ಇನಲ್ಲಿ ಪಟ್ಟಿ ಮಾಡಲ್ಪಟ್ಟಿದೆ. ಎನ್‌ಎಸ್‌ಇಯಲ್ಲಿ ಎಲ್‌ಐಸಿ ಷೇರು ಶೇ. 8.01ರಷ್ಟು ರಿಯಾಯಿತಿ ದರದಲ್ಲಿ ಅಂದರೆ 873 ರೂಪಾಯಿಗೆ ಪಟ್ಟಿ ಮಾಡಲ್ಪಟ್ಟಿತ್ತು. ಮೇ 4 ರಿಂದ ಮೇ 9 ರ ನಡುವೆ ಚಂದಾದಾರಿಕೆಗೆ ಐಪಿಒ ತೆರೆದಿತ್ತು. ಉದ್ಯೋಗಿಗಳು ಮತ್ತು ಪಾಲಿಸಿದಾರರಿಂದ ಬಲವಾದ ಬೇಡಿಕೆಯಿಂದಾಗಿ ಒಟ್ಟಾರೆಯಾಗಿ 2.95 ಪಟ್ಟು ಚಂದಾದಾರಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಷೇರು ಪೇಟೆಯಲ್ಲಿ ನಿರಂತರವಾಗಿ ಕುಸಿತವನ್ನೇ ಕಂಡಿದೆ.

 

ಸೆನ್ಸೆಕ್ಸ್, ನಿಫ್ಟಿ ಚೇತರಿಕೆ: ಎಲ್‌ಐಸಿ, ಬ್ಯಾಂಕ್ ಸ್ಟಾಕ್ ಏರಿಕೆ

2 ಸೆಷನ್‌ಗಳಲ್ಲಿ ಎಲ್‌ಐಸಿ ಸ್ಟಾಕ್ ಏರಿಕೆ

ನಿರಂತರವಾಗಿ ಕುಸಿತ ಕಂಡ ಎಲ್‌ಐಸಿ ಷೇರು ಸುಮಾರು ರೂಪಾಯಿ 650ರವರೆಗೆ ಇಳಿಕೆ ಕಂಡಿದೆ. ಆದರೆ ಸತತ ಎರಡು ಸೆಷನ್‌ಗಳಲ್ಲಿ ಎಲ್‌ಐಸಿ ಷೇರು ಏರಿಕೆ ಕಂಡಿದೆ. ಎಲ್‌ಐಸಿ ಷೇರುಗಳು ಮಂಗಳವಾರ ವಹಿವಾಟಿನ ಆರಂಭದಲ್ಲಿ ಶೇ 1.52 ರಷ್ಟು ಏರಿಕೆಯಾಗಿ ರೂಪಾಯಿ 703.05 ಕ್ಕೆ ತಲುಪಿ ವಹಿವಾಟು ಆರಂಭ ಮಾಡಿದೆ.

ಸೋಮವಾರ ಆರಂಭಿಕ ಹಾಗೂ ವಹಿವಾಟಿನ ಅಂತ್ಯದ ವೇಳೆಯಲ್ಲೂ ಎಲ್‌ಐಸಿ ಷೇರು ಏರಿಕೆ ಕಂಡಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರು ಶೇ 0.73 ರಷ್ಟು ಏರಿಕೆಯಾಗಿ ರೂಪಾಯಿ 681.70ರಲ್ಲಿ ವಹಿವಾಟು ಆರಂಭಿಸಿದೆ. ವಹಿವಾಟ ಅಂತ್ಯದಲ್ಲೂ ಏರಿದೆ. ಷೇರುಗಳು ಶೇಕಡ 2.33ರಷ್ಟು ಹೆಚ್ಚಳವಾಗಿ ರೂಪಾಯಿ 692.50ಕ್ಕೆ ತಲುಪಿದ್ದವು.

English summary

LIC Shares: Motilal Oswal Initiates Coverage With Buy, Sees 20 Percent Potential Rally

LIC shares ; Domestic brokerage house Motilal Oswal has initiated coverage with a buy rating and a target price of Rs 830 apiece, implying 20 per cent potential rally going forward. Know more.
Story first published: Tuesday, July 5, 2022, 13:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X