For Quick Alerts
ALLOW NOTIFICATIONS  
For Daily Alerts

3 ವಾರಗಳ ಲಾಕ್ ಡೌನ್ ಸಹಿಸುವ ಸಾಮರ್ಥ್ಯ ಎಷ್ಟು ಮಂದಿಗಿದೆ? ಇಲ್ಲಿದೆ ಸಮೀಕ್ಷೆ

|

ಲಾಕ್ ಡೌನ್ ನಂಥ ಸಂಕಷ್ಟದ ಸಮಯದಲ್ಲಿ ದೇಶದ ಜನರ ಸ್ಥಿತಿ ಹೇಗಿದೆ ಎಂಬುದನ್ನು ತೆರೆದಿಡುವಂಥ ಆತಂಕಕಾರಿ ಅಂಕಿ- ಅಂಶವೊಂದು ಸಮೀಕ್ಷೆಯಲ್ಲಿ ಹೊರಬಿದ್ದಿದೆ. ವಿವಿಧ ಸಾಮಾಜಿಕ ಸ್ತರದ, ಆದಾಯದ, ವಯಸ್ಸಿನ, ಶೈಕ್ಷಣಿಕ ಹಿನ್ನೆಲೆ, ಧರ್ಮ ಹಾಗೂ ಲಿಂಗದವರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅವರ ಪೈಕಿ ಶೇಕಡಾ 62.5ರಷ್ಟು ಜನರು ಹೇಳುವಂತೆ, ದಿನಸಿ/ಔಷಧಗಳು ಅಥವಾ ಅವರ ಬಳಿ ಇರುವ ಹಣದಿಂದ ಮೂರು ವಾರಕ್ಕಿಂತ ಹೆಚ್ಚು ಸಮಯ ದಿನ ದೂಡುವುದು ಕಷ್ಟ.

IANS C- ವೋಟರ್ ಭಯದ ಸೂಚ್ಯಂಕವು ಈ ಅಂಶವನ್ನು ಬಯಲಿಗಿಟ್ಟಿದೆ. 37.5ರಷ್ಟು ಜನರು, ಮೂರು ವಾರಕ್ಕಿಂತ ಹೆಚ್ಚು ಸಮಯಕ್ಕೆ ತಮ್ಮ ಬಳಿ ಇರುವ ಅಗತ್ಯ ವಸ್ತುಗಳು ಸಾಕಾಗುತ್ತದೆ ಎಂದಿದ್ದಾರೆ. ಇನ್ನೇನು 21 ದಿನಗಳ ಲಾಕ್ ಡೌನ್ ದೇಶದಲ್ಲಿ ಕೊನೆಯಾಗುವ ಹಂತಕ್ಕೆ ಬಂದಿರುವಾಗ ಈ ಸಮೀಕ್ಷೆ ಪ್ರಾಮುಖ್ಯ ಪಡೆದುಕೊಂಡಿದೆ.

ಕೊರೊನಾ ಹೋರಾಟಕ್ಕೆ ಬೇಡಿಕೆಗಿಂತ ಹೆಚ್ಚಿನ ಔ‍ಷಧಿ ಸಾಮರ್ಥ್ಯ ಇದೆಕೊರೊನಾ ಹೋರಾಟಕ್ಕೆ ಬೇಡಿಕೆಗಿಂತ ಹೆಚ್ಚಿನ ಔ‍ಷಧಿ ಸಾಮರ್ಥ್ಯ ಇದೆ

ಇನ್ನು ರಾಜ್ಯ ಸರ್ಕಾರಗಳು, ಇನ್ನೆರಡು ವಾರ ಲಾಕ್ ಡೌನ್ ವಿಸ್ತರಣೆ ಕಡೆಗೆ ಒಲವು ತೋರಿವೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಘೋಷಣೆಯೂ ಮಾಡಿಯಾಗಿದೆ. ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಕಡಿಮೆ ಆದಾಯ ಮತ್ತು ಶಿಕ್ಷಣದ ಹಿನ್ನೆಲೆಯವರೇ ಬಹುತೇಕ ಬಾಧಿತರಾಗಿದ್ದಾರೆ. 70:30ರ ಅನುಪಾತದಲ್ಲಿ, ಇಂಥವರ ಬಳಿ ಮೂರು ವಾರಗಳಿಗಿಂತ ಹೆಚ್ಚಿನ ಅವಧಿಗೆ ಸಾಕಾಗುವಷ್ಟು ಸಂಪನ್ಮೂಲಗಳಿಗಿಲ್ಲ.

3 ವಾರಗಳ ಲಾಕ್ ಡೌನ್ ಸಹಿಸುವ ಸಾಮರ್ಥ್ಯ ಎಷ್ಟು ಮಂದಿಗಿದೆ? : ಸಮೀಕ್ಷೆ

ಸಮಾಜದ ತಳಮಟ್ಟದಲ್ಲಿ ಇರುವಂಥ ಕಡಿಮೆ ಆದಾಯದ ಜನರಿಗೆ ತಮ್ಮ ಕುಟುಂಬವನ್ನು ಪೋಷಿಸುವುದು ಅಸಾಧ್ಯವಾಗಿದೆ. ಮಧ್ಯಮ ಮಟ್ಟದ ಆದಾಯ ಇರುವವರಿಗೆ ಮೂರು ವಾರಗಳಷ್ಟು ಕುಟುಂಬ ಪೋಷಿಸುವ ಚೈತನ್ಯ ಇದೆ. ಇನ್ನು ಹೆಚ್ಚು ಆದಾಯ ಇರುವವರಿಗೆ ಮೂರು ವಾರಗಳ ನಂತರವೂ ಲಾಕ್ ಡೌನ್ ಭರಿಸುವುದು ಸಾಧ್ಯವಿದೆ.

ನಗರ ಪ್ರದೇಶದಲ್ಲಿ ವಾಸಿಸುವ ಶೇಕಡಾ 55ರಷ್ಟು ಮಂದಿ ಅಗತ್ಯ ವಸ್ತುಗಳು ಮತ್ತು ಹಣದೊಂದಿಗೆ ಮೂರು ವಾರಗಳಷ್ಟು ಇರಬಹುದು. ಇನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ 65ರಷ್ಟು ಮಂದಿ ಹೇಳುವಂತೆ, ಮೂರು ವಾರಗಳ ಲಾಕ್ ಡೌನ್ ಗೆ ಸಾಕಾಗುವಷ್ಟು ಸಂಪನ್ಮೂಲ ಅವರ ಬಳಿ ಇದೆ.

English summary

Lockdown: How Many People In India Have Money To Survive Beyond 3 Weeks?

Lokdown: According to the survey, people in the lower-income and education groups are most vulnerable.
Story first published: Sunday, April 12, 2020, 14:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X