For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಎಫೆಕ್ಟ್‌: 20 ಪರ್ಸೆಂಟ್ ಉದ್ಯೋಗಿಗಳನ್ನು ವಜಾಗೊಳಿಸಿದ ವೀವರ್ಕ್ ಇಂಡಿಯಾ

|

ಕೊರೊನಾವೈರಸ್‌ ಸೋಂಕು ತಡೆಗಟ್ಟಲು ದೀರ್ಘಕಾಲದ ಲಾಕ್‌ಡೌನ್‌ದಿಂದಾಗಿ ವೆಚ್ಚವನ್ನು ತಗ್ಗಿಸಲು ಮತ್ತು ಕಾರ್ಯಾಚರಣೆಯನ್ನು ಪುನರುಜ್ಜೀವನಗೊಳಿಸುವ ಹಿನ್ನೆಲೆಯಲ್ಲಿ ತನ್ನ 20 ಪರ್ಸೆಂಟ್ ಉದ್ಯೋಗಿಗಳನ್ನು ಅಥವಾ 100 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವೀವರ್ಕ್‌ನ ಇಂಡಿಯಾ ಫ್ರ್ಯಾಂಚೈಸ್ ಮಂಗಳವಾರ ಹೇಳಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ವ್ಯವಹಾರದ ನಷ್ಟವನ್ನು ತಗ್ಗಿಸಲು ರೆಸ್ಟೋರೆಂಟ್ ಅಗ್ರಿಗೇಟರ್ ಜೊಮಾಟೊ ಮತ್ತು ಆಹಾರ ವಿತರಣಾ ಸೇವೆ ಸ್ವಿಗ್ಗಿ ಸೇರಿದಂತೆ ಹಲವಾರು ಭಾರತೀಯ ಉದ್ಯಮಗಳು ತಮ್ಮ ಉದ್ಯೋಗಿಗಳನ್ನು ಕಡಿತಗೊಳಿಸಿವೆ. ಇದರ ಜೊತೆಗೆ ವೀವರ್ಕ್‌ ಕೂಡ ಸೇರಿದೆ.

20 ಪರ್ಸೆಂಟ್ ಉದ್ಯೋಗಿಗಳನ್ನು ವಜಾಗೊಳಿಸಿದ ವೀವರ್ಕ್ ಇಂಡಿಯಾ

"ನಾವು ಭಾರತದಲ್ಲಿ ನಮ್ಮ ದೀರ್ಘಕಾಲೀನ ವ್ಯವಹಾರ ಕಾರ್ಯತಂತ್ರವನ್ನು ಕಾರ್ಯಗತಗೊಳಿಸುತ್ತಿದ್ದೇವೆ ಮತ್ತು 2021 ರ ಆರಂಭದ ವೇಳೆಗೆ ಲಾಭದಾಯಕವಾಗಬೇಕೆಂಬ ಗುರಿಯನ್ನು ಹೊಂದಿದ್ದರಿಂದ ನಾವು ಪ್ರಮುಖ ವ್ಯವಹಾರದ ಆಧಾರದ ಮೇಲೆ ನಮ್ಮ ತಂಡದ ಸಾಮರ್ಥ್ಯವನ್ನು ಉತ್ತಮಗೊಳಿಸಿದ್ದೇವೆ ಮತ್ತು ಯೋಜಿಸಿದ್ದೇವೆ" ಎಂದು ವೀವರ್ಕ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಕರಣ್ ವಿರ್ವಾನಿ ಹೇಳಿದ್ದಾರೆ,

ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ವೀವರ್ಕ್ ಇಂಡಿಯಾದ ಮುಖ್ಯ ಷೇರುದಾರ ಜಿತು ವಿರ್ವಾನಿ ಅವರು 2020 ರ ಅಂತ್ಯದ ವೇಳೆಗೆ ಕಂಪನಿಯು ಲಾಭದಾಯಕವಾಗಲಿದೆ ಎಂದು ಹೇಳಿದ್ದರು.ಆದರೆ ಕೊರೊನಾ ಎಲ್ಲವನ್ನು ತಲೆಕೆಳಗಾಗಿ ಮಾಡಿದೆ.

English summary

Lockdown Impact Wework India Lays Off 20 Percent Employees

WeWork's India franchise said on Tuesday it laid off 100 employees, or 20% of its workforce, as the office-sharing startup joins a slew of firms that are cutting costs
Story first published: Tuesday, May 19, 2020, 18:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X