For Quick Alerts
ALLOW NOTIFICATIONS  
For Daily Alerts

ಕಡಿಮೆ ರಿಸ್ಕ್, ಹೆಚ್ಚಿನ ರಿಟರ್ನ್ಸ್ ಗಾಗಿ ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಉತ್ತಮ

|

ಈಕ್ವಿಟಿ ಷೇರುಗಳ ಮೇಲೆ ಹಣ ಹೂಡಿಕೆ ಮಾಡುವುದೆಂದರೆ ದರದಲ್ಲಿ ಏರಿಳಿತ ಸಾಮಾನ್ಯವಾದ ಸಂಗತಿ. ಯಾವ ಕಂಪೆನಿಯ ಷೇರು ಖರೀದಿ ಮಾಡುತ್ತಿರುವಿರೋ ಅದರ ಪೂರ್ವಾಪರ ವಿಶ್ಲೇಷಣೆ ಮಾಡಬೇಕು. ಆಗಿಂದಾಗ ಕಂಪೆನಿಯ ಬೆಳವಣಿಗೆ ಮೇಲೂ ಕಣ್ಣಿಟ್ಟಿರಬೇಕು. ಆ ಕಾರಣಕ್ಕೆ ಹೆಚ್ಚಿನ ಅಪಾಯ ಮೈಮೇಲೆ ಎಳೆದುಕೊಳ್ಳುವ ಹಾಗೂ ಹೆಚ್ಚಿನ ಶ್ರಮ ಹಾಕುವವರಿಗೆ ಈಕ್ವಿಟಿ ಹೂಡಿಕೆ ಎಂಬಂತೆ ಆಗಿದೆ.

ಇದನ್ನೊಮ್ಮೆ ಓದಿ: ಮ್ಯೂಚುವಲ್ ಫಂಡ್ ಅರ್ಥ ಮಾಡ್ಕೊಳ್ಳೋದು ಸುಲಭಇದನ್ನೊಮ್ಮೆ ಓದಿ: ಮ್ಯೂಚುವಲ್ ಫಂಡ್ ಅರ್ಥ ಮಾಡ್ಕೊಳ್ಳೋದು ಸುಲಭ

ಆದರೆ, ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡುವುದಾದರೆ ಆ ಎರಡೂ ಸಮಸ್ಯೆ ನಿವಾರಣೆ ಆಗುತ್ತದೆ. ಜತೆಗೆ ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದು, ಅದು ಕೂಡ ಕಡಿಮೆ ವೆಚ್ಚದಲ್ಲೂ ಆಗುತ್ತದೆ. ಇದು ಹೇಗೆ ಸಾಧ್ಯ ಎಂಬುದರ ವಿವರಣೆ ಈ ಲೇಖನದಲ್ಲಿ ಇದೆ.

ಇಂಡೆಕ್ಸ್ ಫಂಡ್ ಅಂದರೇನು?

ಇಂಡೆಕ್ಸ್ ಫಂಡ್ ಅಂದರೇನು?

ಷೇರು ಮಾರುಕಟ್ಟೆ ಕಾಲಕಾಲಕ್ಕೆ ಹೇಗೆ ವರ್ತಿಸುತ್ತಿದೆ ವೇಯ್ಟೆಡ್ ಸರಾಸರಿ ತೆಗೆದುಕೊಂಡು ಸಮಗ್ರವಾಗಿ ಒಂದು ಸೂಚ್ಯಂಕ ಎಂದು ಮಾಡಲಾಗಿರುತ್ತದೆ. ಆಯ್ದ ಷೇರುಗಳ ದರವನ್ನು ಮಾರುಕಟ್ಟೆಯ ಪ್ರಾತಿನಿಧಿಕವಾಗಿ ಪರಿಗಣಿಸಲಾಗುತ್ತದೆ. ಈಗ ಉದಾಹರಣೆ ಅಂದರೆ, ಬಿಎಸ್ ಇ ಸೆನ್ಸೆಕ್ಸ್ ಮತ್ತು ಎನ್ ಎಸ್ ಇ ನಿಫ್ಟಿ. ಇಂಡೆಕ್ಸ್ ಮ್ಯೂಚುವಲ್ ಫಂಡ್ಸ್ ಅಥವಾ ಇಂಡೆಕ್ಸ್ ಫಂಡ್ಸ್ ಅನ್ನು ಪ್ಯಾಸಿವ್ ಫಂಡ್ಸ್ ಅಂತಲೂ ಕರೆಯಲಾಗುತ್ತದೆ. ಫಂಡ್ ಮ್ಯಾನೇಜರ್ ಯಾವ ಸೂಚ್ಯಂಕವನ್ನು (ಇಂಡೆಕ್ಸ್) ಅನುಸರಿಸುತ್ತಾರೋ ಅದು ಒಳಗೊಂಡಿರುವ ಸೆಕ್ಯೂರಿಟೀಸ್ ಗಳ ಮೇಲೆ ಹೂಡಿಕೆ ಮಾಡುತ್ತಾರೆ. ಆ ಕಾರಣಕ್ಕೆ ಇವನ್ನು ಪ್ಯಾಸಿವ್ ಫಂಡ್ ಎನ್ನಲಾಗುತ್ತದೆ. ಅದರಲ್ಲಿ ಮತ್ತ್ಯಾವ ಸ್ಟ್ರಾಟೆಜಿಯೂ ಇರುವುದಿಲ್ಲ. ಆದರೆ ಒಂದು ಉದ್ದೇಶ ಏನೆಂದರೆ, ಯಾವ ಇಂಡೆಕ್ಸ್ ಅನುಸರಿಸಲಾಗುತ್ತದೆಯೋ ಅದು ಒಳಗೊಂಡಿರುವ ಶೇಕಡಾ ತೊಂಬತ್ತೈದರಷ್ಟು ಸೆಕ್ಯೂರಿಟೀಸ್ ಗಳಲ್ಲೇ ಹೂಡಿಕೆ ಮಾಡಬೇಕು.

ಇಂಡೆಕ್ಸ್ ಫಂಡ್ಸ್ ಗಳ ಗುಣ ಲಕ್ಷಣಗಳೇನು?

ಇಂಡೆಕ್ಸ್ ಫಂಡ್ಸ್ ಗಳ ಗುಣ ಲಕ್ಷಣಗಳೇನು?

ಉಳಿದ ಫಂಡ್ ಗಳಲ್ಲಿ ತುಂಬ ಸಕ್ರಿಯವಾದ ಪಾಲ್ಗೊಳ್ಳುವಿಕೆ ಇರಬೇಕು. ಹೂಡಿಕೆ ಸ್ಟ್ರಾಟೆಜಿ ಇರಬೇಕು. ಮಾರ್ಕೆಟ್ ಗಿಂತ ಪ್ರದರ್ಶನ ಉತ್ತಮವಾಗಿ ನೀಡಬೇಕು. ಆ ಕಾರಣಕ್ಕೆ ಪೋರ್ಟ್ ಫೋಲಿಯೋದಲ್ಲಿ ಅಪಾಯ ಹೆಚ್ಚಿರುತ್ತದೆ. ಆದರೆ ಇಂಡೆಕ್ಸ್ ಫಂಡ್ ನಲ್ಲಿ ಅಪಾಯ ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಇನ್ನು ರಿಟರ್ನ್ಸ್ ಯಾವ ಇಂಡೆಕ್ಸ್ ನಲ್ಲಿ ಹೂಡಲಾಗಿದೆಯೋ ಅದರ ಫಲಿತವನ್ನು ಅನುಸರಿಸುತ್ತದೆ. ಈ ಫಂಡ್ ನಲ್ಲಿ ಮ್ಯಾನೇಜರ್ ಷೇರುಗಳನ್ನು ನಿರ್ಧಾರ ಮಾಡಲು ಹೆಚ್ಚಿನ ಶ್ರಮ ಹಾಕುವುದಿಲ್ಲ. ಆ ಕಾರಣಕ್ಕೆ ಇಂಡೆಕ್ಸ್ ಫಂಡ್ ಮ್ಯಾನೇಜ್ ಮೆಂಟ್ ವೆಚ್ಚ ಕಡಿಮೆ ಇರುತ್ತದೆ. ಇದನ್ನು ವೆಚ್ಚ ಅನುಪಾತ ಎನ್ನಲಾಗುತ್ತದೆ. ಇತರ ಸಕ್ರಿಯ ನಿರ್ವಹಣಾ ಫಂಡ್ ಗಳಿಗಿಂತ ಇದು ಕಡಿಮೆ ದುಬಾರಿ. ಸೆಬಿ ಮ್ಯೂಚುವಲ್ ಫಂಡ್ ನಿಯಮಾವಳಿ ಪ್ರಕಾರ, ಡೇಲಿ ನೆಟ್ ಅಸೆಟ್ಸ್ ನ ಒಂದು ಪರ್ಸೆಂಟ್ ಗಿಂತ ಹೆಚ್ಚಿಗೆ ವೆಚ್ಚದ ಅನುಪಾತ ಆಗಲ್ಲ.

ಇಂಡೆಕ್ಸ್ ಫಂಡ್ ಗಳು ಎಕ್ಸ್ ಚೇಂಜ್ ಗಳಲ್ಲಿ ವಹಿವಾಟು ನಡೆಸಲ್ಲ. ಆ ಕಾರಣಕ್ಕೆ ಇಂಡೆಕ್ಸ್ ಫಂಡ್ ಗಳು ಮಾಮೂಲಿ ಫಂಡ್ ಗಳಿಗಿಂತ ನಗದು ಪ್ರಮಾಣ ಕಡಿಮೆ. ಆದರೆ ಇದು ಓಪನ್ ಎಂಡೆಡ್ ಸ್ಕೀಮ್ ಗಳು. ಇದರರ್ಥ ಯಾವಾಗ ಬೇಕಾದರೂ ಮ್ಯೂಚುವಲ್ ಫಂಡ್ ಗಳ ಯೂನಿಟ್ ಮಾರಿ, ಹಣವನ್ನು ಪಡೆದುಕೊಳ್ಳಬಹುದು.

ಇನ್ನು ತೆರಿಗೆ ವಿಚಾರಕ್ಕೆ ಬಂದರೆ, ಇಂಡೆಕ್ಸ್ ಫಂಡ್ ಗಳನ್ನು ಈಕ್ವಿಟಿ ಆಧಾರಿತ ಫಂಡ್ ಗಳು ಎಂದು ಆದಾಯ ತೆರಿಗೆ ಕಾಯ್ದೆ ಅಡಿ ಪರಿಗಣಿಸಲಾಗುತ್ತದೆ. ಒಂದು ವೇಳೆ ಫಂಡ್ ಅನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಇಟ್ಟುಕೊಂಡಲ್ಲಿ ರಿಟರ್ನ್ಸ್ ಅನ್ನು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಎಂದು ಪರಿಗಣಿಸಲಾಗುತ್ತದೆ. ಹದಿನೈದು ಪರ್ಸೆಂಟ್ ತೆರಿಗೆ ಬೀಳುತ್ತದೆ.

ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಇರಿಸಿಕೊಂಡು, ಒಂದು ಲಕ್ಷಕ್ಕೂ ಹೆಚ್ಚು ಹಣ ಬಂದಲ್ಲಿ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಎಂದು ಪರಿಗಣಿಸಲಾಗುತ್ತದೆ. ಹತ್ತು ಪರ್ಸೆಂಟ್ ತೆರಿಗೆ ಬೀಳುತ್ತದೆ. ಇದಕ್ಕಾಗಿ ಖರೀದಿ ದರ ಅಥವಾ ಜನವರಿ 31, 2018ರ ದರ ಇವೆರಡರಲ್ಲಿ ಯಾವುದು ಹೆಚ್ಚೋ ಅದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇಂಡೆಕ್ಸ್ ಫಂಡ್ ಗಳಲ್ಲಿ ಯಾರು ಹೂಡಿಕೆ ಮಾಡಬೇಕು?

ಇಂಡೆಕ್ಸ್ ಫಂಡ್ ಗಳಲ್ಲಿ ಯಾರು ಹೂಡಿಕೆ ಮಾಡಬೇಕು?

ಈಕ್ವಿಟಿಯಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ಬರುವ ಮಾಮೂಲಿ ಲಾಭಕ್ಕಿಂತ ಹೆಚ್ಚಿನ ರಿಟರ್ನ್ಸ್ ಬಯಸುವವರು ಹಾಗೂ ಹೆಚ್ಚಿನ ಅಪಾಯ ತೆಗೆದುಕೊಳ್ಳಲು ಬಯಸದವರು ಇಂಡೆಕ್ಸ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಹಾಗಂತ ಇಂಡೆಕ್ಸ್ ಫಂಡ್ ಗಳಲ್ಲಿ ಅಪಾಯ ಇಲ್ಲ ಎಂದಲ್ಲ. ಒಂದು ವೇಳೆ ಮಾರ್ಕೆಟ್ ಕೆಳಗೆ ಇಳಿದಲ್ಲಿ ಎನ್ ಎವಿ ಕೂಡ ಕುಸಿತ ಕಾಣುತ್ತದೆ. ಅಂಥ ಸಂದರ್ಭದಲ್ಲಿ ಮಾರ್ಕೆಟ್ ಕುಸಿತದ ಶುರುವಿನ ಮುನ್ಸೂಚನೆ ಸಿಗುತ್ತಿರುವಂತೆ ನಗದು ಮಾಡಿಕೊಂಡು ಬಿಡಬೇಕು. ಆ ಹಣವನ್ನು ಡೆಟ್ ಫಂಡ್ ಗಳು ಅಥವಾ ಚಿನ್ನ ಅಥವಾ ಠೇವಣಿಗಳ ಮೇಲೆ ಹಾಕಬೇಕು. ಇಂಡೆಕ್ಸ್ ಫಂಡ್ ಗಳ ಮೇಲೆ ಹೂಡಿಕೆ ಮಾಡುವ ಮುನ್ನ ಟ್ರ್ಯಾಕಿಂಗ್ ಎರರ್ ಅಂದರೆ ಏನು ಅನ್ನೋದನ್ನು ತಿಳಿಯಬೇಕು. ಇಂಡೆಕ್ಸ್ ಫಂಡ್ ಗಳಾ ರಿಟರ್ನ್ಸ್ ಮತ್ತು ಮಾರ್ಕೆಟ್ ರಿಟರ್ನ್ ಮಧ್ಯದ ವ್ಯತ್ಯಾಸವನ್ನು ಹೀಗೆ ಕರೆಯಲಾಗುತ್ತದೆ. ಇದು ಅತ್ಯಂತ ಕಡಿಮೆ ಇರಬೇಕು. ಇನ್ನು ವೆಚ್ಚ ಅನುಪಾತ ಒಂದು ಪರ್ಸೆಂಟ್ ಗೂ ಕಡಿಮೆ ಇರಬೇಕು. ಮ್ಯಾನೇಜ್ ಮೆಂಟ್ ವೆಚ್ಚ ಹೆಚ್ಚಿದ್ದಲ್ಲಿ ಅದು ರೆಡ್ ಫ್ಲ್ಯಾಗ್.

ಕಡಿಮೆ ವೆಚ್ಚದ ಹೂಡಿಕೆ ಆಯ್ಕೆಯನ್ನು ಎದುರು ನೋಡುತ್ತಿದ್ದಲ್ಲಿ ಇಂಡೆಕ್ಸ್ ಫಂಡ್ ಗಳು ಉತ್ತಮ. ಅದು ಬೆಳೆಯಲು ಸಮಯ ನೀಡಬೇಕು. ಆರ್ಥಿಕತೆ ಬೆಳೆದಂತೆ ನಿಮ್ಮ ಹೂಡಿಕೆ ಕೂಡ ಬೆಳವಣಿಗೆ ಕಾಣುತ್ತದೆ.

English summary

Lower Risk, Higher Returns Index Funds Are Better Choice For Investments

Index funds are better option for investors who are ready take moderate risk. Here are the details about fund.
Story first published: Wednesday, November 18, 2020, 15:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X