For Quick Alerts
ALLOW NOTIFICATIONS  
For Daily Alerts

ಬಿಪಿಸಿಎಲ್ ಖಾಸಗೀಕರಣದ ನಂತರವೂ ಭಾರತ್ ಗ್ಯಾಸ್ ಗ್ರಾಹಕರಿಗೆ ಸಿಗಲಿದೆ ಸಬ್ಸಿಡಿ

|

ಖಾಸಗೀಕರಣದ ನಂತರವೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಗ್ರಾಹಕರಿಗೆ (ಭಾರತ್ ಗ್ಯಾಸ್ ಮೂಲಕ ಸಿಲಿಂಡರ್ ಖರೀದಿಸುವವರು) ಎಲ್ ಪಿಜಿ ಸಬ್ಸಿಡಿ ಮುಂದುವರಿಯಲಿದೆ ಎಂದು ತೈಲ ಖಾತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ಹೇಳಿದ್ದಾರೆ.

"ಎಲ್ ಪಿಜಿ ಮೇಲಿನ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ನೇರವಾಗಿ ಪಾವತಿಸಲಾಗುತ್ತದೆ ಹಾಗೂ ಯಾವುದೇ ಕಂಪೆನಿಗಲ್ಲ. ಆದ್ದರಿಂದ ಎಲ್ ಪಿಜಿ ಮಾರಾಟ ಮಾಡುವ ಕಂಪೆನಿಯ ಮಾಲೀಕತ್ವ ಏನೇ ಆದರೂ ಯಾವ ಬದಲಾವಣೆಯೂ ಆಗಲ್ಲ," ಎಂದು ಪ್ರಧಾನ್ ಪಿಟಿಐಗೆ ತಿಳಿಸಿದ್ದಾರೆ.

ಎಲ್ ಪಿಜಿ ಸ್ಫೋಟ ಸಂಭವಿಸಿದಲ್ಲಿ ಆಗಲಿದೆ ಇನ್ಷೂರೆನ್ಸ್ ಕವರ್: ಈ ಬಗ್ಗೆ ಎಷ್ಟು ಗೊತ್ತು?

 

ಭಾರತದಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ ಹನ್ನೆರಡು ಎಲ್ ಪಿಜಿ ಸಿಲಿಂಡರ್ ಗಳು (14.2 Kg) ಸಬ್ಸಿಡಿ ದರದಲ್ಲಿ ಖರೀದಿಸಬಹುದು. ಅಂದ ಹಾಗೆ ಖರೀದಿ ಮಾಡುವಾಗ ಪೂರ್ತಿ ಹಣವನ್ನು ನೀಡಬೇಕು. ಆ ನಂತರ ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಬಿಪಿಸಿಎಲ್ ಖಾಸಗೀಕರಣದ ನಂತರವೂ ಗ್ರಾಹಕರಿಗೆ ಸಿಗಲಿದೆ ಸಬ್ಸಿಡಿ

ಬಿಪಿಸಿಎಲ್ ನಲ್ಲಿನ ಸರ್ಕಾರದ ಪಾಲನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಖರೀದಿ ಮಾಡುವ ಕಂಪೆನಿಗೆ ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯದ 15.33% ಮತ್ತು ತೈಲ ಮಾರ್ಕೆಟಿಂಗ್ ನಲ್ಲಿ 22% ಪಾಲು ದೊರೆಯಲಿದೆ.

ಪ್ರಧಾನ್ ಮಾತನಾಡಿ, ಎಲ್ ಪಿಜಿ ಸಬ್ಸಿಡಿ ಪಾವತಿಯನ್ನು ಎಲ್ಲ ಗ್ರಾಹಕರಿಗೆ ಡಿಜಿಟಲ್ ಆಗಿ ಪಾವತಿಸಲಾಗುತ್ತದೆ ಎಂದಿದ್ದಾರೆ. "ಸಬ್ಸಿಡಿಯನ್ನು ನೇರವಾಗಿ ಗ್ರಾಹಕರಿಗೆ ಪಾವತಿಸುತ್ತದೆ. ಆದ್ದರಿಂದ ಅದನ್ನು ನಡೆಸುವುದು ಸರ್ಕಾರಿ ಸಂಸ್ಥೆಯೋ ಅಥವಾ ಖಾಸಗಿ ಸಂಸ್ಥೆಯೋ ಎಂಬುದು ಮುಖ್ಯವಲ್ಲ," ಎಂದು ಪ್ರಧಾನ್ ತಿಳಿಸಿದ್ದಾರೆ. ಬಂಡವಾಳ ಹಿಂತೆಗೆತದ ಮುಂಚೆ ಹೇಗೆ ಸಬ್ಸಿಡಿ ಬರುತ್ತಿತ್ತೋ ಅದೇ ರೀತಿಯಲ್ಲೇ ನಂತರವೂ ದೊರೆಯುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

English summary

LPG Customers Continue To Get Subsidy After BPCL Privatisation

After privatisation BPCL customers to continue to get subsidy, said union minister Dharmendra Pradhan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X