For Quick Alerts
ALLOW NOTIFICATIONS  
For Daily Alerts

ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಐದು ಕಂಪನಿಗಳು ಹೆಚ್ಚಿನ ಏರಿಳಿತ ಕಂಡಿವೆ. ಒಟ್ಟಾರೆ, ಮೂರು ಕಂಪನಿಗಳು 1,78,650.71 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿವೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಆರ್ ಬಿಐ ರೆಪೋ ದರ ಏರಿಕೆ, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ಎರಡು ವಾರದಿಂದ ರಿಲಯನ್ಸ್ ಭಾರಿ ಲಾಭ ಗಳಿಸಿದೆ.

ಜಾಗತಿಕ ವಿದ್ಯಮಾನ, ವಿದೇಶಿ ಫಂಡ್ ಹರಿವು, ಎಲ್ಐಸಿ ಐಪಿಒ, ಆರ್ ಬಿಐ ರೆಪೋ ದರ ಏರಿಕೆ ನಂತರದ ಬದಲಾವಣೆಗಳು ಹೆಚ್ಚಿನ ವಹಿವಾಟು ಕಾಣದಂತೆ ಮಾಡಿವೆ. ಕಳೆದ ವಾರ ಟಿಸಿಎಸ್, ಇನ್ಫೋಸಿಸ್ ಭಾರಿ ಲಾಭ ಗಳಿಸಿದರೆ, ಐಸಿಐಸಿಸಿ ಮಾತ್ರ ನಷ್ಟ ಅನುಭವಿಸಿದೆ.

ಕಳೆದ ವಾರ, ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್ 1,532.77 ಪಾಯಿಂಟ್‌ಗಳು ಅಥವಾ 2.90 ಶೇಕಡಾ ಏರಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆಯನ್ನು ಶನಿವಾರ ಘೋಷಿಸಿದ್ದರಿಂದ ಇದರ ಪರಿಣಾಮ ಮುಂದಿನ ವಾರದಂದು ಷೇರುಪೇಟೆಯಲ್ಲಿ ಕಾಣಬಹುದು..

ಕಳೆದ ವಾರ ರಿಲಯನ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಭಾರಿ ಲಾಭ ಗಳಿಸಿದ್ದರೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹಾಗೂ ಇನ್ಫೋಸಿಸ್ ಭಾರಿ ನಷ್ಟ ಅನುಭವಿಸಿದೆ. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ರಿಲಯನ್ಸ್ ಮೌಲ್ಯ ಕುಸಿತ

ರಿಲಯನ್ಸ್ ಮೌಲ್ಯ ಕುಸಿತ

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 1,31,320.8 ಕೋಟಿ ರು ಏರಿಕೆಕೊಂಡು 17,73,889.78 ಕೋಟಿ ರು ಮೌಲ್ಯ ತಲುಪಿದೆ. ಟಾಪ್ 10 ಮೌಲ್ಯಯುತ ಕಂಪನಿಗಳ ಪೈಕಿ ರಿಲಯನ್ಸ್ ಅತಿ ಹೆಚ್ಚು ಲಾಭ ಗಳಿಸಿದೆ.

ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 7,153.45 ಕೋಟಿ ರು ಕಳೆದುಕೊಂಡು 12,48,998.89 ಕೋಟಿ ರು ಮೌಲ್ಯಕ್ಕೆ ಕುಸಿದಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಕುಸಿತ

ಎಚ್ ಡಿ ಎಫ್ ಸಿ ಬ್ಯಾಂಕ್ ಕುಸಿತ

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 30,814.89 ಕೋಟಿ ರು ಏರಿಕೆ ಕಂಡು 5,46,397.45 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.

ಇದೇ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ 16,515.02 ಕೋಟಿ ರು ಮೌಲ್ಯ ಇಳಿಕೆ ಕಂಡು 7,33,156.15 ಕೋಟಿ ರು ತಲುಪಿದೆ.

ಇನ್ಫೋಸಿಸ್ ಮೌಲ್ಯ

ಇನ್ಫೋಸಿಸ್ ಮೌಲ್ಯ

ದೇಶದ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 43,743.96 ಕೋಟಿ ರು ಕಳೆದುಕೊಂಡು 12,05,254.93 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.

ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 20,129.66 ಕೋಟಿ ರು ಕುಸಿತ ಕಂಡು 6,12,303.26 ಕೋಟಿ ರು ತಲುಪಿದೆ.

ಎಲ್ಐಸಿ

ಎಲ್ಐಸಿ

ಕಳೆದ ವಾರ ಷೇರುಪೇಟೆಗೆ ಎಂಟ್ರಿಕೊಟ್ಟ ಎಲ್ಐಸಿ ಹೆಚ್ಚಿನ ಸದ್ದು ಮಾಡದೆ ನಷ್ಟ ಅನುಭವಿಸಿದರೂ ಟಾಪ್ 10 ಪಟ್ಟಿಯಲ್ಲಿ 6ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯ 5,22,602.94 ಕೋಟಿ ರು ಗಳಿಸಿದೆ.

ಟಾಪ್ 10 ಕಂಪನಿಗಳು:

ಟಾಪ್ 10 ಕಂಪನಿಗಳು:

ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಲ್ಐಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಎಚ್‌ಡಿಎಫ್‌ಸಿ, ಭಾರ್ತಿ ಏರ್ ಟೆಲ್.

English summary

M-cap of 3 of top-five firms jumps Rs 1.78 lakh cr; Reliance lead gainer

Three of the top five valued firms together added Rs 1,78,650.71 crore to their market valuation last week, led by Reliance Industries
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X