For Quick Alerts
ALLOW NOTIFICATIONS  
For Daily Alerts

420 ಕೋಟಿ ಅಮೆರಿಕನ್ ಡಾಲರ್ ದೇಣಿಗೆ ನೀಡಿದ ಬೆಜೋಸ್ ಮಾಜಿ ಪತ್ನಿ ಮೆಕ್ ಕೆಂಜಿ

By ಅನಿಲ್ ಆಚಾರ್
|

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಅಮೆರಿಕದಲ್ಲಿನ 384 ಸಂಸ್ಥೆಗಳಿಗೆ ಕಳೆದ ನಾಲ್ಕು ತಿಂಗಳಲ್ಲಿ 420 ಕೋಟಿ ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ಮೆಕ್ ಕೆಂಜಿ ಸ್ಕಾಟ್ ನೀಡಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಮಂಗಳವಾರದಂದು ಪ್ರಕಟವಾದ ಬ್ಲಾಗ್ ಪೋಸ್ಟ್ ನಲ್ಲಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕ್ ಕೆಂಜಿ ಹೇಳಿದ್ದಾರೆ.

ಅದಾಗಲೇ ಕಷ್ಟದಲ್ಲಿ ಸಿಲುಕಿದ್ದ ಅಮೆರಿಕನ್ನರ ಸ್ಥಿತಿ ಕೊರೊನಾ ಬಿಕ್ಕಟ್ಟಿನಿಂದಾಗಿ ಇನಷ್ಟು ಕಷ್ಟದಲ್ಲಿ ಸಿಲುಕಿತ್ತು. ಮಹಿಳೆಯರು, ಬಡವರು ಹಾಗೂ ವಿವಿಧ ಜನಾಂಗೀಯರ ಮೇಲೆ ಆರ್ಥಿಕ ಪರಿಣಾಮ ಬಹಳ ಕೆಟ್ಟದಾಗಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. "ಈ ಮಧ್ಯೆ ಶತಕೋಟ್ಯಧಿಪತಿಗಳ ಸಂಪತ್ತಿನಲ್ಲಿ ಹೆಚ್ಚಳವಾಗಿದೆ" ಎಂದಿದ್ದಾರೆ.

ಈ 11 ಲಕ್ಷಣಗಳು ನಿಮ್ಮಲ್ಲಿವೆಯಾ? ಹಾಗಿದ್ದರೆ ಕೋಟ್ಯಧಿಪತಿಯಾಗ್ತೀರಿಈ 11 ಲಕ್ಷಣಗಳು ನಿಮ್ಮಲ್ಲಿವೆಯಾ? ಹಾಗಿದ್ದರೆ ಕೋಟ್ಯಧಿಪತಿಯಾಗ್ತೀರಿ

ಪ್ರಬಲವಾದ ನಾಯಕತ್ವದ ತಂಡಗಳು ಮತ್ತು ಫಲಿತಾಂಶವನ್ನು ಹೊಂದಿರುವ ಸಂಸ್ಥೆಗಳನ್ನು ತಮ್ಮ ತಂಡವು ಗುರುತಿಸಿದೆ. ಆಹಾರ ಕೊರತೆ, ಜನಾಂಗೀಯ ಅಸಮಾನತೆ, ಸ್ಥಳೀಯವಾಗಿ ಅತಿ ಹೆಚ್ಚಿನ ಬಡತನ ದರ ಇರುವುದನ್ನು ಆ ಸಂಸ್ಥೆಗಳು ಗುರುತಿಸಿರಬೇಕು. ಅಂಥವಕ್ಕೆ ದೇಣಿಗೆ ಕಡಿಮೆ ಇದ್ದಲ್ಲಿ ಅಂಥವನ್ನು ಸೂಚಿಸಲು ತಿಳಿಸಿದ್ದಾಗಿ ಮೆಕ್ ಕೆಂಜಿ ಹೇಳಿದ್ದಾರೆ.

420 ಕೋಟಿ USD ದೇಣಿಗೆ ನೀಡಿದ ಬೆಜೋಸ್ ಮಾಜಿ ಪತ್ನಿ ಮೆಕ್ ಕೆಂಜಿ

ಫೋರ್ಬ್ಸ್ ಪ್ರಕಾರ, ಸ್ಕಾಟ್ ನಿವ್ವಳ ಆಸ್ತಿ ಮೌಲ್ಯ 5600 ಕೋಟಿ ಅಮೆರಿಕನ್ ಡಾಲರ್ ಸಮೀಪ ಇದೆ. ಬೆಜೋಸ್ ರಿಂದ ಕಳೆದ ವರ್ಷ ಡೈವೋರ್ಸ್ ಪಡೆದಾಗ ಸ್ಕಾಟ್ ಅವರಿಗೆ ಅಮೆಜಾನ್ ನಲ್ಲಿನ 4% ಷೇರಿನ ಪಾಲು ದೊರೆತಿತ್ತು.

English summary

MacKenzie Scott Given Away Nearly 4.2 Billion USD In The Last 4 Months

Amazon CEO former wife MacKenzie Scott revealed she has given away almost $4.2 billion to 384 organizations in America over the last four months.
Story first published: Wednesday, December 16, 2020, 21:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X