For Quick Alerts
ALLOW NOTIFICATIONS  
For Daily Alerts

ಮಹೀಂದ್ರಾ ಅಂಡ್ ಮಹೀಂದ್ರಾ ವಾಹನಗಳ ಬೆಲೆ ಏರಿಕೆ; ಷೇರಿನ ದರ ಹೆಚ್ಚಳ

|

ಮಹೀಂದ್ರಾ ಸಮೂಹದ ಒಟ್ಟು ಮೌಲ್ಯ 1940 ಕೋಟಿ ಅಮೆರಿಕನ್ ಡಾಲರ್. ಅದರ ಒಂದು ಭಾಗ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ (ಎಂ ಅಂಡ್ ಎಂ). ಜನವರಿ 1, 2021ರಿಂದ ಅನ್ವಯ ಆಗುವಂತೆ ಮಹೀಂದ್ರಾ ಅಂಡ್ ಮಹೀಂದ್ರಾದ ಪ್ರಯಾಣಿಕರ ಮತ್ತು ವಾಣಿಜ್ಯ ವಾಹನಗಳ ಎಲ್ಲ ಮಾಡೆಲ್ ಗಳ ಬೆಲೆಯಲ್ಲಿ ಏರಿಕೆ ಮಾಡಲಿದೆ.

ವಸ್ತುಗಳ ಬೆಲೆ ಏರಿಕೆ ಮತ್ತು ವಿವಿಧ ಇನ್ ಪುಟ್ ವೆಚ್ಚದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ. ವಿವಿಧ ಮಾಡೆಲ್ ಗಳ ಬೆಲೆ ಏರಿಕೆ ಮಾಹಿತಿಯನ್ನು ಇನ್ನೇನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಕಂಪೆನಿಯು ಎಕ್ಸ್ ಚೇಂಜ್ ಗಳಿಗೆ ಒದಗಿಸಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

ಕೊರೊನಾ ಲಾಕ್ ಡೌನ್ ನಿಂದ ವಾಹನೋದ್ಯಮಕ್ಕೆ ದಿನಕ್ಕೆ 2300 ಕೋಟಿ ನಷ್ಟಕೊರೊನಾ ಲಾಕ್ ಡೌನ್ ನಿಂದ ವಾಹನೋದ್ಯಮಕ್ಕೆ ದಿನಕ್ಕೆ 2300 ಕೋಟಿ ನಷ್ಟ

ಬೆಲೆ ಏರಿಕೆ ಸುದ್ದಿ ಬೆನ್ನಿಗೇ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ಷೇರಿನ ದರ ಬುಧವಾರ ಬೆಳಗ್ಗೆ ಆರಂಭದ ವಹಿವಾಟಿನಲ್ಲಿ 3 ಪರ್ಸೆಂಟ್ ಏರಿಕೆ ಕಂಡಿತು. 2020ರ ನವೆಂಬರ್ ನಲ್ಲಿ ಯುಟಿಲಿಟಿ ವೆಹಿಕಲ್ ಸೆಗ್ಮೆಂಟ್ ನಲ್ಲಿ 17,971 ವಾಹನವನ್ನು ಮಹೀಂದ್ರಾ ಮಾರಾಟ ಮಾಡಿದೆ. ಕಳೆದ ವರ್ಷದ ನವೆಂಬರ್ ನಲ್ಲಿ 14,161 ಮಾರಾಟ ಆಗಿತ್ತು.

ಮಹೀಂದ್ರಾ ಅಂಡ್ ಮಹೀಂದ್ರಾ ವಾಹನಗಳ ಬೆಲೆ ಏರಿಕೆ; ಷೇರಿನ ದರ ಹೆಚ್ಚಳ

ಪ್ರಯಾಣಿಕರ ಸೆಗ್ಮೆಂಟ್ (ಯುಟಿಲಿಟಿ ವೆಹಿಕಲ್ಸ್, ಕಾರು ಮತ್ತು ವಾಹನಗಳು)ನಲ್ಲಿ ನವೆಂಬರ್ 2020ರಲ್ಲಿ ಕಳೆದ ವರ್ಷಕ್ಕಿಂತ 24% ಬೆಳವಣಿಗೆ ದಾಖಲಿಸಿದೆ. ಈ ವರದಿ ಸಿದ್ಧವಾಗುವ ಹೊತ್ತಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿ ಷೇರು 738.25 ರುಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.

English summary

Mahindra To Increase Vehicle Price From January 1, 2021, Share Price Jumps

Mahindra and Mahindra announced on Tuesday about increase vehicle price from January 1, 2021. On the backdrop of that, share price of company jump in opening trading.
Story first published: Wednesday, December 16, 2020, 10:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X