For Quick Alerts
ALLOW NOTIFICATIONS  
For Daily Alerts

ಭಾರತದ ಮೇಲೆ ಪ್ರತೀಕಾರದ ಕ್ರಮ ತೆಗೆದುಕೊಳ್ಳಲು ನಾವು ತುಂಬಾ ಚಿಕ್ಕವರು: ಮಲೇಷಿಯಾ ಪ್ರಧಾನಿ

|

ಪಾಮ್ ಆಯಿಲ್ ಬಹಿಷ್ಕಾರದ ನಂತರ ಭಾರತದ ಮೇಲೆ ಯಾವುದೇ ವ್ಯಾಪಾರ ಕ್ರಮ ಕೈಗೊಂಡಿಲ್ಲ ಎಂದು ಮಲೇಷಿಯಾದ ಪ್ರಧಾನಿ ಮಹತೀರ್ ಮೊಹಮ್ಮದ್ ಹೇಳಿದ್ದಾರೆ.

ಭಾರತವು ತಾಳೆ ಎಣ್ಣೆಯನ್ನು (ಪಾಮ್ ಆಯಿಲ್) ಬಹಿಷ್ಕರಿಸಿದ ಕುರಿತು ಪ್ರತಿಕ್ರಿಯಿಸಿರುವ ಮಲೇಷಿಯಾ ಪ್ರಧಾನಿ ಮಹತೀರ್ ಮೊಹಮ್ಮದ್, ಭಾರತದ ವ್ಯಾಪಾರ ಬಹಿಷ್ಕಾರಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಮಲೇಷಿಯಾ ಚಿಕ್ಕ ರಾಷ್ಟ್ರವಾಗಿದೆ ಎಂದು ಸೋಮವಾರ ಹೇಳಿದ್ದಾರೆ.

ಭಾರತದ ಮೇಲೆ ಪ್ರತೀಕಾರದ ಕ್ರಮ ತೆಗೆದುಕೊಳ್ಳಲು ನಾವು ತುಂಬಾ ಚಿಕ್ಕವರು!

'' ಪ್ರತೀಕಾರದ ಕ್ರಮ ತೆಗೆದುಕೊಳ್ಳಲು ನಾವು ತುಂಬಾ ಚಿಕ್ಕವರು. ಅದನ್ನು ನಿವಾರಿಸಲು ಹಾಗೂ ಅದರಿಂದ ಹೊರಬರಲು ಮಾರ್ಗಗಳನ್ನು ಕಂಡುಹಿಡಿಯಬೇಕಾಗಿದೆ ಎಂದು ಮಲೇಷಿಯಾದ ಪಶ್ಚಿಮ ಕರಾವಳಿಯ ರೆಸಾರ್ಟ್ ದ್ವೀಪವಾದ ಲಂಗ್ಕಾವಿಯಲ್ಲಿ ಪ್ರಧಾನಿ ಮಹತೀರ್ ಮೊಹಮ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಶ್ಮೀರ ಮೇಲಿನ ನೀತಿ ಕುರಿತು ಮಹತೀರ್ ಅವರು ದೆಹಲಿಯಲ್ಲಿ ಟೀಕಿಸಿದ ಬಳಿಕ, ವಿಶ್ವದ ಅತಿದೊಡ್ಡ ಅಡುಗೆ ಎಣ್ಣೆ ಖರೀದಿದಾರ ಭಾರತವು ಮಲೇಷಿಯಾದಿಂದ ತಾಳೆ ಎಣ್ಣೆ ಆಮದನ್ನು ಈ ತಿಂಗಳು ನಿಲ್ಲಿಸಿದೆ.

English summary

Malaysia Says No Trade Action On India

Makaysia's Prime minister said malasia is too small of a nation to respond to India's boycott of palm oil with trade retaliation.
Story first published: Monday, January 20, 2020, 12:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X