For Quick Alerts
ALLOW NOTIFICATIONS  
For Daily Alerts

ಜ. 26ರಿಂದ ಮುಂಬೈನಲ್ಲಿ ಶಾಪಿಂಗ್ ಮಾಲ್, ಹೋಟೆಲ್ ಗಳು 24X7 ಓಪನ್

|

ಮುಂಬೈನ ಮಳಿಗೆಗಳು, ಮಾಲ್ ಗಳು, ಹೋಟೆಲ್- ರೆಸ್ಟೋರೆಂಟ್ ಗಳು ಮತ್ತು ವಸತಿಯೇತರ ಪ್ರದೇಶಗಳಲ್ಲಿ ಜನವರಿ ಇಪ್ಪತ್ತಾರನೇ ತಾರೀಕಿನಿಂದ ಅನ್ವಯ ಆಗುವಂತೆ ವಾರದ ಎಲ್ಲ ದಿನವೂ, ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುವ ಅವಕಾಶ ಇರುತ್ತದೆ ಎಂದು ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ- ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ಶನಿವಾರ ಹೇಳಿದ್ದಾರೆ.

ಲಂಡನ್ ಹಾಗೂ ಮಧ್ಯಪ್ರದೇಶದ ಇಂದೋರ್ ನ ರಾತ್ರಿ ಜೀವನದ (ನೈಟ್ ಲೈಫ್) ಉದಾಹರಣೆ ನೀಡಿದ ಅವರು, ಈ ರೀತಿ ದಿನದ ಇಪ್ಪತ್ನಾಲ್ಕು ಗಂಟೆಯೂ ಸವಲತ್ತು ಒದಗಿಸುವಲ್ಲಿ ಮುಂಬೈ ಹಿಂದುಳಿಯಬಾರದು. ನೈಟ್ ಲೈಫ್ ಅಂದರೆ ಮದ್ಯಪಾನ ಸೇವನೆ ಮಾತ್ರ ಅಂದುಕೊಳ್ಳುವುದು ತಪ್ಪು ಎಂದಿದ್ದಾರೆ.

ಮುಂಬೈ 24X7 ಕಾರ್ಯ ನಿರ್ವಹಿಸಲಿದೆ. ಆನ್ ಲೈನ್ ಶಾಪಿಂಗ್ 24 ಗಂಟೆಯೂ ತೆರೆದಿರುತ್ತದೆ ಅಂದರೆ ಮಳಿಗೆ ಮತ್ತು ಸಂಸ್ಥೆಗಳನ್ನು ಏಕೆ ರಾತ್ರಿ ವೇಳೆ ಮುಚ್ಚಬೇಕು? ಮಳಿಗೆಗಳು ಮತ್ತು ಶಾಪಿಂಗ್ ಮಾಲ್ ಗಳನ್ನು ರಾತ್ರಿ ವೇಳೆ ತೆರೆಯಲೇಬೇಕು ಎಂಬ ಯಾವ ಕಡ್ಡಾಯವೂ ಇಲ್ಲ. ಅವರು ಇಷ್ಟಪಟ್ಟರೆ ತೆರೆಯಬಹುದು. ಯಾವುದೇ ನಿಯಮ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದಾರೆ.

ಜ. 26ರಿಂದ ಮುಂಬೈನಲ್ಲಿ ಶಾಪಿಂಗ್ ಮಾಲ್, ಹೋಟೆಲ್ ಗಳು 24X7 ಓಪನ್

ಯುವ ಸೇನಾದ ಮುಖ್ಯಸ್ಥರೂ ಆಗಿರುವ 29 ವರ್ಷದ ಆದಿತ್ಯ ಠಾಕ್ರೆ, ಮುಂಬೈನಲ್ಲಿ ನೈಟ್ ಲೈಫ್ ಬಗ್ಗೆ 2013ರಿಂದ ಮಾತನಾಡುತ್ತಿದ್ದಾರೆ. ಅಬಕಾರಿ ನಿಯಮಗಳಲ್ಲಿ ಸರ್ಕಾರವು ಏನೂ ಬದಲಾವಣೆ ಮಾಡುವುದಿಲ್ಲ ಎಂದಿರುವ ಅವರು, ಲಂಡನ್ ನ ನೈಟ್ ಲೈಫ್ ಆರ್ಥಿಕ ಚಟುವಟಿಕೆ ಮೌಲ್ಯವೇ ಐದು ಬಿಲಿಯನ್ ಪೌಂಡ್ ಎಂದಿದ್ದಾರೆ.

English summary

Malls, Eateries To Be open 24/7 in Mumbai From Jan 26th

Maharashtra tourism minister Aaditya Thackeray said, malls, eateries to be open 24/7 in Mumbai from January 26th.
Story first published: Sunday, January 19, 2020, 10:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X