For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್ 3 ಹೊಸ ಫೀಚರ್ಸ್‌: ಒಂದೇ ಅಕೌಂಟ್ 4 ಡಿವೈಸ್‌ಗಳಲ್ಲಿ ಬಳಕೆಗೆ ಅವಕಾಶ !

|

ವಾಟ್ಸಾಪ್‌ ಬಳಕೆದಾರರ ಬಹುಬೇಡಿಕೆಯ ಮತ್ತು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದ ಫೀಚರ್‌ ಅನ್ನು ವಾಟ್ಸಾಪ್‌ ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ತಲುಪುವ ಭರವಸೆ ನೀಡಿದೆ. ಬಳಕೆದಾರರು ತಮ್ಮ ಒಂದು ಅಕೌಂಟ್‌ ಅನ್ನು ನಾಲ್ಕು ಲಿಂಕ್ ಮಾಡಿದ ಸಾಧನಗಳಿಂದ ಬಳಕೆ ಮಾಡಲು ಅನುವು ಮಾಡಿಕೊಡಲಿದೆ.

 

ಈ ಫೀಚರ್ ಅಷ್ಟೇ ಅಲ್ಲದೆ 'ವೀವ್ ಒನ್ಸ್' (ನೀವು ಬೇರೆಯವರಿಗೆ ಕಳುಹಿಸಿದ ಸಂದೇಶ ಒಂದು ಬಾರಿ ನೋಡಿದ ಬಳಿಕ ಅದೃಶ್ಯವಾಗುವುದು) ಮತ್ತು ಡಿಸಪಿಯರಿಂಗ್ ಮೋಡ್ ಆಯ್ಕೆಗಳು ಮುಂದಿನ ದಿನಗಳಲ್ಲಿ ನಿಮಗೆ ಲಭ್ಯವಾಗಲಿದೆ.

3 ಹೊಸ ಫೀಚರ್ಸ್ ಕುರಿತು ಅಧಿಕೃತವಾಗಿ ತಿಳಿಸಿದ ಮಾರ್ಕ್ ಜುಕರ್‌ಬರ್ಗ್‌

3 ಹೊಸ ಫೀಚರ್ಸ್ ಕುರಿತು ಅಧಿಕೃತವಾಗಿ ತಿಳಿಸಿದ ಮಾರ್ಕ್ ಜುಕರ್‌ಬರ್ಗ್‌

ಹೆಸರಾಂತ ಟಿಪ್‌ಸ್ಟರ್ WABetalnfo, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಅವರೊಂದಿಗೆ ಚಾಟ್‌ ಮಾಡುವ ಅವಕಾಶವನ್ನು ಪಡೆದರು. ಇವರ ನಡುವಿನ ಸಂಭಾಷಣೆಯ ಸಮಯದಲ್ಲಿ 'ವೀವ್ ಒನ್ಸ್' , ಡಿಸಪಿಯರಿಂಗ್ ಮೋಡ್, ಎಂಬ ಎರಡು ಹೊಸ ಫೀಚರ್‌ಗಳು ಶೀಘ್ರದಲ್ಲೇ ವಾಟ್ಸಾಪ್‌ಗೆ ಬರಲಿದೆ ಎಂದು ಜುಕರ್‌ಬರ್ಗ್ ಬಹಿರಂಗಪಡಿಸಿದರು.

ಇದಲ್ಲದೆ ಮುಂದಿನ ದಿನಗಳಲ್ಲಿ ಒಂದೇ ಅಕೌಂಟ್ ಅನ್ನು ಬಹು ಸಾಧನಗಳಲ್ಲಿ ಬಳಸುವ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

 

'ಡಿಸಪಿಯರಿಂಗ್ ಮೋಡ್'

'ಡಿಸಪಿಯರಿಂಗ್ ಮೋಡ್'

ಈ ಹೊಸ ಫೀಚರ್‌ ಅನ್ನು ವಾಟ್ಸಾಪ್ ಬಳಕೆದಾರರು ತಮ್ಮ ಎಲ್ಲಾ ಹೊಸ ಚಾಟ್‌ಗಳಿಗೆ ಸೆಟ್‌ ಮಾಡಬಹುದಾಗಿದೆ. ಈ ಡಿಸಪಿಯರಿಂಗ್ ಮೋಡ್ ವೈಶಿಷ್ಟ್ಯವನ್ನು ಸೆಟ್‌ ಮಾಡಿದರೆ 7 ದಿನಗಳ ನಂತರ ಚಾಟ್‌ನಲ್ಲಿ ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ. ಈ ಮೂಲಕ ನಿಮ್ಮ ವಾಟ್ಸಾಪ್‌ನ ಮೆಸೆಜ್‌ಗಳು ಇಂತಿಷ್ಟು ನಿಗದಿತ ದಿನಗಳ ಬಳಿಕ ಡಿಲೀಟ್ ಆಗಲಿದೆ.

'ವೀವ್ ಒನ್ಸ್'
 

'ವೀವ್ ಒನ್ಸ್'

ವಾಟ್ಸಾಪ್‌ನಲ್ಲಿ ಚಾಟ್‌ಗಳಿಗಾಗಿ 'ವೀವ್ ಒನ್ಸ್' ಫೀಚರ್‌ ಅನ್ನು ಸಕ್ರಿಯಗೊಳಿಸಿದಾಗ, ನಿಮ್ಮಿಂದ ಫೋಟೋ ಅಥವಾ ವೀಡಿಯೊವನ್ನು ಸ್ವೀಕರಿಸುವವರು ಒಮ್ಮೆ ಮಾತ್ರ ನೀವು ಕಳುಹಿಸುವ ಸಂದೇಶವನ್ನು ನೋಡಲು ಸಾಧ್ಯವಾಗುತ್ತದೆ. ಒಮ್ಮೆ ನೋಡಿದ ಬಳಿಕ ಸಂದೇಶವು ಚಾಟ್‌ನಿಂದ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ.

ಈ ಫೀಚರ್‌ ಖಾಸಗಿ ಮತ್ತು ಸುರಕ್ಷಿತ ಸಂದೇಶ ರವಾನೆ ವೇದಿಕೆಯಾಗುವ ವಾಟ್ಸಾಪ್‌ನ ಪ್ರಾಥಮಿಕ ಗುರಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

"ನಾವು 'ವೀವ್ ಒನ್ಸ್' ಪ್ರಾರಂಭಿಸುತ್ತೇವೆ, ಈ ಮೂಲಕ ನೀವು ವಿಷಯವನ್ನು ಕಳುಹಿಸಬಹುದು ಮತ್ತು ವ್ಯಕ್ತಿಯು ಅದನ್ನು ನೋಡಿದ ನಂತರ ಅದು ಕಣ್ಮರೆಯಾಗಬಹುದು" ಎಂದು ಜುಕರ್‌ಬರ್ಗ್ ಹೇಳಿದರು.

 

ಬಹು ಡಿವೈಸ್‌ಗಳಲ್ಲಿ ಕನೆಕ್ಟ್‌ ಮಾಡಲು ಅವಕಾಶ

ಬಹು ಡಿವೈಸ್‌ಗಳಲ್ಲಿ ಕನೆಕ್ಟ್‌ ಮಾಡಲು ಅವಕಾಶ

ವಾಟ್ಸಾಪ್‌ ಬಳಕೆದಾರರ ಬಹುಬೇಡಿಕೆಯ ಬಹು ಡಿವೈಸ್‌ಗಳ ಕನೆಕ್ಟ್ ಮಾಡುವ ಅವಕಾಶವನ್ನು ವಾಟ್ಸಾಪ್‌ ಸೃಷ್ಟಿಸುತ್ತಿದೆ. ಈ ಕುರಿತು WABetaInfo ಕಾರ್ಯನಿರ್ವಾಹಕರನ್ನು ಕೇಳಿದ ಬಳಿಕ ಇದಕ್ಕೆ ಉತ್ತರಿಸಿದ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ''ನಿಮ್ಮ ಪ್ರಾಥಮಿಕ ಸಾಧನವು ಇಂಟರ್‌ನೆಟ್‌ಗೆ ಸರಿಯಾದ ಸಂಪರ್ಕ ಹೊಂದಿಲ್ಲದಿದ್ದಾಗ ಎಲ್ಲಾ ಸಂದೇಶಗಳನ್ನು ಸಾಧನಗಳಾದ್ಯಂತ ಸರಿಯಾಗಿ ಸಿಂಕ್ ಮಾಡಲು ದೊಡ್ಡ ತಾಂತ್ರಿಕ ಸವಾಲು" ಎಂದು ಹೇಳಿದರು.

ಆದಾಗ್ಯೂ, ಕಂಪನಿಯು ಈ ಸಮಸ್ಯೆಯನ್ನು ಪರಿಹರಿಸಿದೆ ಮತ್ತು ಮುಂದಿನ ಎರಡು ತಿಂಗಳಲ್ಲಿ ವಾಟ್ಸಾಪ್ ಬಳಕೆದಾರರಿಗೆ ಬಹು ಸಾಧನ ಬೆಂಬಲವನ್ನು ನೀಡಲಿದೆ ಎಂದು ಕ್ಯಾಥ್‌ಕಾರ್ಟ್ ದೃಢಪಡಿಸಿದರು.

 

English summary

Mark Zuckerberg Confirms 3 New Features Coming To WhatsApp Very Soon

Facebook CEO Mark Zuckerberg has confirmed three new features coming to WhatsApp in the next few days.
Story first published: Thursday, June 3, 2021, 20:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X