For Quick Alerts
ALLOW NOTIFICATIONS  
For Daily Alerts

ಲಾಕ್ ಡೌನ್ ನಿಂದ ಮಾರುತಿ ಮಾರಾಟಕ್ಕೆ ಪೆಟ್ಟು; ಆದಾಯ 79% ಕುಸಿತ

|

ಭಾರತದ ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ ಐ) ಜುಲೈ 29ನೇ ತಾರೀಕು ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. 2020ರ ಮಾರ್ಚ್ ನಿಂದ ಜೂನ್ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ 249.4 ಕೋಟಿ ನಿವ್ವಳ ನಷ್ಟ ಕಂಡಿದೆ. ಕಾರ್ಯನಿರ್ವಹಣೆ ನಷ್ಟ ಹಾಗೂ ಆದಾಯದಲ್ಲಿನ ಇಳಿಕೆ ಪರಿಣಾಮದಿಂದ ಇಂಥ ಫಲಿತಾಂಶ ಬಂದಿದೆ.

ವಿಶ್ಲೇಷಕರು 445 ಕೋಟಿ ರುಪಾಯಿ ನಷ್ಟ ಎದುರಾಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಅದಕ್ಕಿಂತ ಕಡಿಮೆ ನಷ್ಟವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ 1,435.5 ಕೋಟಿ ಲಾಭ ಬಂದಿತ್ತು. 2020ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ 1,291.7 ಕೋಟಿ ರುಪಾಯಿ ಲಾಭ ಬಂದಿತ್ತು.

ಮಾರುತಿ ಸುಜುಕಿಯಿಂದ ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭಮಾರುತಿ ಸುಜುಕಿಯಿಂದ ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭ

ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ಕಾರ್ಯ ನಿರ್ವಹಣೆಯಿಂದ ಬರುವ ಆದಾಯ 79.2 ಪರ್ಸೆಂಟ್ ಕಡಿಮೆ ಆಗಿದೆ. ಆದಾಯ 4,106.5 ಕೋಟಿ ಬಂದಿದೆ. ಕೊರೊನಾ ಲಾಕ್ ಡೌನ್ ಪ್ರಭಾವದಿಂದ ಇಂಥ ಫಲಿತಾಂಶ ಬಂದಿದೆ. ಈಗಿನ ಸನ್ನಿವೇಶವನ್ನು ಹಿಂದಿನ ಯಾವ ತ್ರೈಮಾಸಿಕಕ್ಕೂ ಹೋಲಿಸಲು ಸಾಧ್ಯವಿಲ್ಲ ಎಂದು ಕಂಪೆನಿಯಿಂದ ತಿಳಿಸಲಾಗಿದೆ.

ಲಾಕ್ ಡೌನ್ ನಿಂದ ಮಾರುತಿ ಮಾರಾಟಕ್ಕೆ ಪೆಟ್ಟು; ಆದಾಯ 79% ಕುಸಿತ

ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ 76,599 ವಾಹನವನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 4,02,000 ವಾಹನ ಮಾರಾಟ ಆಗಿತ್ತು. ಅದಕ್ಕೆ ಹೋಲಿಸಿದಲ್ಲಿ 81 ಪರ್ಸೆಂಟ್ ಇಳಿಕೆ ಆಗಿದೆ. ದೇಶೀಯ ಹಾಗೂ ರಫ್ತು ಪ್ರಮಾಣದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕ್ರಮವಾಗಿ 82 ಮತ್ತು 66 ಪರ್ಸೆಂಟ್ ಕಡಿಮೆ ಆಗಿದೆ.

ಮಾರುತಿ ಸುಜುಕಿ ಇಂಡಿಯಾ ಷೇರಿನ ಬೆಲೆಯು ಬುಧವಾರ 90.80 ರುಪಾಯಿ ಇಳಿಕೆಯಾಗಿ, 6,192 ರುಪಾಯಿಗೆ ದಿನದ ವಹಿವಾಟು ಕೊನೆ ಮಾಡಿದೆ.

English summary

Maruti Suzuki Financial Results: 249 Crore Net Loss For FY21 June Quarter

Due to Corona lock down Maruti Suzuki India (MSI) financial result announced on July 29th for FY21 June quarter. 249.4 crore net loss to company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X