For Quick Alerts
ALLOW NOTIFICATIONS  
For Daily Alerts

ಮಾರುತಿಯಿಂದ 1,34,885 ವ್ಯಾಗನ್ R ಹಾಗೂ ಬಲೆನೋ ಕಾರು ವಾಪಸ್

|

ಭಾರತದಲ್ಲಿ ಪ್ರಯಾಣಿಕರ ಕಾರಿನ ಅತಿ ದೊಡ್ಡ ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ ಐ) 1,34,885 ಯೂನಿಟ್ ವ್ಯಾಗನ್ R ಹಾಗೂ ಬಲೆನೋ ಪೆಟ್ರೋಲ್ ಕಾರನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಈ ಬಗ್ಗೆ ಬುಧವಾರ ಘೋಷಣೆ ಮಾಡಿರುವ ಕಂಪೆನಿ, ಇಂಧನ ಪಂಪ್ ನಲ್ಲಿನ ಸಂಭವನೀಯ ದೋಷದ ಕಾರಣಕ್ಕೆ ವಾಪಸ್ ಕರೆಸಿಕೊಳ್ಳುತ್ತಿರುವುದಾಗಿ ತಿಳಿಸಿದೆ.

 

ನವೆಂಬರ್ 15, 2018ರಿಂದ ಅಕ್ಟೋಬರ್ 15, 2019ರ ಮಧ್ಯೆ ಕಂಪೆನಿಯಿಂದ ಉತ್ಪಾದನೆಯಾದ ವ್ಯಾಗನ್ R ಕಾರಿನ 56,663 ಯೂನಿಟ್ ಮತ್ತು ಜನವರಿ 8ರಿಂದ ನವೆಂಬರ್ 8, 2019ರ ಮಧ್ಯೆ ಉತ್ಪಾದನೆಯಾದ 78,222 ಯೂನಿಟ್ ಬಲೆನೋ ಕಾರನ್ನು ವಾಪಸ್ ಕರೆಸಿಕೊಂಡು, ಮುಂದಿನ ವಾರಗಳಲ್ಲಿ ಪರೀಕ್ಷಿಸುವುದಾಗಿ ತಿಳಿಸಿದೆ.

 

ಮಾರುತಿ ಸುಜುಕಿಯಿಂದ ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭಮಾರುತಿ ಸುಜುಕಿಯಿಂದ ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭ

ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೆ ದೋಷಪೂರಿತ ಭಾಗವನ್ನು ಬದಲಿಸಿಕೊಡಲಾಗುವುದು. ಕಂಪೆನಿಯ ಹೇಳಿಕೆ ಪ್ರಕಾರ, ಈ ಅಭಿಯಾನದ ಅಡಿಯಲ್ಲಿ ಶಂಕಿತ ವಾಹನಗಳ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಡೀಲರ್ ಗಳನ್ನು ಸಂಪರ್ಕಿಸಬೇಕು.

ಮಾರುತಿಯಿಂದ 1,34,885 ವ್ಯಾಗನ್ R ಹಾಗೂ ಬಲೆನೋ ಕಾರು ವಾಪಸ್

ಗ್ರಾಹಕರಿಗೆ ಮುಖ್ಯ ಮಾಹಿತಿ ಒಳಗೊಂಡ www.marutisuzuki.com (ವ್ಯಾಗನ್R) ಮತ್ತು www.nexaexperience.com (ಬಲೆನೋ) ಭೇಟಿ ನೀಡಿ, ವಾಹನದ ಚಾಸಿಸ್ ಸಂಖ್ಯೆ ಭರ್ತಿ ಮಾಡಬೇಕು (MA3 or MBH, ಆ ನಂತರ 14 ಸಂಖ್ಯೆ ಅಲ್ಫಾ-ನ್ಯೂಮರಿಕ್ ಸಂಖ್ಯೆ). ಆ ಮೂಲಕ ವಾಹನದ ಭಾಗವನ್ನು ಬದಲಿಸಬೇಕಾ ಎಂಬ ಮಾಹಿತಿ ಸಿಗುತ್ತದೆ.

ಕಳೆದ ಡಿಸೆಂಬರ್ ನಲ್ಲಿ ಮಾರುತಿಯಿಂದ ಸಿಯಾಜ್, ಎರ್ಟಿಗಾ ಮತ್ತು XL6 63,493 ಯೂನಿಟ್ ಗಳನ್ನು ವಾಪಸ್ ಕರೆಸಿಕೊಂಡಿತ್ತು. ಅದಕ್ಕೂ ಮುನ್ನ ಆಗಸ್ಟ್ ನಲ್ಲಿ ವ್ಯಾಗನ್R 40,618 ಕಾರನ್ನು ವಾಪಸ್ ಕರೆಸಿಕೊಂಡಿತ್ತು.

English summary

Maruti Suzuki India Recalls 134885 Units Of WagonR, Baleno

Maruti Suzuki India Ltd (MSI) on Wednesday announced voluntary recall of 1,34,885 units of Wagon R and Baleno's petrol variant because of a possible defect in the fuel pump.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X