For Quick Alerts
ALLOW NOTIFICATIONS  
For Daily Alerts

ಎಂ.ಜಿ. ಮೋಟಾರ್ ನಿಂದ ಎಲೆಕ್ಟ್ರಿಕಲ್ ವಾಹನ ಬಿಡುಗಡೆ, ಬೆಲೆ ಎಷ್ಟು?

|

ಎಂ.ಜಿ. ಮೋಟಾರ್ ಇಂಡಿಯಾವು ತನ್ನ ಎರಡನೇ ಉತ್ಪನ್ನವನ್ನು ಬಹಿರಂಗ ಮಾಡಿದೆ. ZS EV ಇದು ಭಾರತದಲ್ಲಿ ಎಂ.ಜಿ. ಕಂಪೆನಿಯ ಎರಡನೇ ಕಾರು. ಈ ವರ್ಷದ ಜುಲೈನಲ್ಲಿ ಹೆಕ್ಟರ್ ಬಿಡುಗಡೆ ಮಾಡಿತ್ತು. ಇದೀಗ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ ಯುವಿ) ಬಹಿರಂಗಗೊಳಿಸಿದ್ದು, ಜಾಗತಿಕ ಮಟ್ಟದಲ್ಲಿ ಮಾರಾಟದಲ್ಲಿ ಮಾರಾಟ ಮಾಡುವ MG GS ಮಾಡೆಲ್ ನಲ್ಲಿ ಏನೆಲ್ಲ ಸ್ಪೆಸಿಫಿಕೇಷನ್ ಇದೆಯೋ ಅವೆಲ್ಲವೂ ಇದರಲ್ಲಿ ಇದೆ.

ಹೆಸರಾಂತ ಬ್ರಿಟಿಷ್ ಬ್ರ್ಯಾಂಡ್ ಈಗ ಚೈನೀಸ್ SAIC ಮೋಟಾರ್ ಕಾರ್ಪೊರೇಷನ್ ಒಡೆತನದಲ್ಲಿ ಇದೆ. ಗುರುವಾರದಂದು ನವದೆಹಲಿಯಲ್ಲಿ ತನ್ನ ZS ಮಾಡೆಲ್ ಪ್ರದರ್ಶನ ಮಾಡಿತು. ಈ ಎಲೆಕ್ಟ್ರಿಕಲ್ ವಾಹನವನ್ನು ಒಮ್ಮೆ ರೀಚಾರ್ಜ್ ಮಾಡಿದರೆ 340 ಕಿ. ಮೀ. ಮೈಲೇಜ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಹುಂಡೈನ ಕೋನಾ ಎಲೆಕ್ಟ್ರಿಕ್ ಕಾರು ಸದ್ಯಕ್ಕೆ ಭಾರತದಲ್ಲಿ ಎಂ.ಜಿ. ಮೋಟಾರ್ಸ್ ನ ಹೊಸ ಎಲೆಕ್ಟ್ರಿಕ್ ಕಾರಿಗೆ ಇರುವ ಏಕೈಕ ಪ್ರತಿಸ್ಪರ್ಧಿಯಾಗಿದೆ. ZS ಮಾಡೆಲ್ ನಲ್ಲಿ ಸ್ಕೈ ರೂಫ್ ಬರಲಿದೆ. ಜತೆಗೆ ಇನ್ ಬಿಲ್ಟ್ ಏರ್ ಪ್ಯೂರಿಫೈಯರ್ ಇರಲಿದೆ. ಅಂದಹಾಗೆ ಎಂ.ಜಿ.ಯಿಂದ ZS ಮಾಡೆಲ್ ಕಾರುಗಳನ್ನು ದೆಹಲಿ/ಎನ್ ಸಿಆರ್, ಮುಂಬೈ, ಹೈದರಾಬಾದ್, ಅಹ್ಮದಾಬಾದ್ ಮತ್ತು ಬೆಂಗಳೂರು ಈ ಐದು ನಗರಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಎಂ.ಜಿ. ಮೋಟಾರ್ ನಿಂದ ಎಲೆಕ್ಟ್ರಿಕಲ್ ವಾಹನ ಬಿಡುಗಡೆ, ಬೆಲೆ ಎಷ್ಟು?

ಗುಜರಾತ್ ನ ಹಲೋಲ್ ನಲ್ಲಿ ZS ಮಾಡೆಲ್ ನ ಕಾರುಗಳನ್ನು MG ಉತ್ಪಾದಿಸಲಿದೆ. MG ZS ಮಾಡೆಲ್ ನ ಕಾರಿಗೆ 25 ಲಕ್ಷ ರುಪಾಯಿ ಬೆಲೆ ನಿಗದಿ ಮಾಡಬಹುದು ಎನ್ನಲಾಗಿದೆ. ಮಾರ್ಚ್ ನಿಂದ ಈಚೆಗೆ ಭಾರತದಲ್ಲಿ ಮೂವತ್ನಾಲ್ಕು ಲಕ್ಷ ಕಾರುಗಳು ಮಾರಾಟವಾಗಿದೆ. ಆದರೆ ಕಳೆದ ಆರು ವರ್ಷಗಳಲ್ಲಿ ಮಾರಾಟ ಆಗಿರುವ ಎಲೆಕ್ಟ್ರಿಕಲ್ ವಾಹನಗಳ ಸಂಖ್ಯೆ ಎಂಟು ಸಾವಿರ ಮಾತ್ರ ಎಂದು ಬ್ಲೂಮ್ ಬರ್ಗ್ ಅಂಕಿ- ಅಂಶಗಳು ತಿಳಿಸಿವೆ.

English summary

MG Motor Revealed Electric Vehicle In India

M.G. Motor revealed second product ZS EV electrical vehicle in India on Thursday. Here is the complete details.
Story first published: Thursday, December 5, 2019, 17:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X