For Quick Alerts
ALLOW NOTIFICATIONS  
For Daily Alerts

ಎಂ.ಜಿ. ಮೋಟಾರ್ಸ್ ಎಲೆಕ್ಟ್ರಿಕಲ್ ವಾಹನದ ಬೆಲೆ 20.88 ಲಕ್ಷದಿಂದ ಆರಂಭ

|

ಎಂ.ಜಿ. ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಮೊದಲ ಎಲೆಕ್ಟ್ರಿಕ್ ವಾಹನ, ZS ಅನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಬೆಲೆಯು 20.88 ಲಕ್ಷದಿಂದ 23.58 ಲಕ್ಷದ ತನಕ ಇರಲಿದೆ. ಎಂ.ಜಿ. ಹೆಕ್ಟರ್ ನಂತರ ಭಾರತದಲ್ಲಿ ಈ ಕಂಪೆನಿ ಬಿಡುಗಡೆ ಮಾಡುತ್ತಿರುವ ಎರಡನೇ ಕಾರು ಇದು.

ಚೀನಾದ SAIC ಮಾಲೀಕತ್ವದ ಕಂಪೆನಿಯಾದ ಎಂ.ಜಿ. ಮೋಟಾರ್ಸ್ ಭಾರತದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸದಾಗಿ ಪ್ರವೇಶ ಮಾಡಿದೆ. ಹುಂಡೈ ಮೋಟಾರ್ ಇಂಡಿಯಾ ನಂತರ ಬಹಳ ದೂರದ ತನಕ ಚಲಿಸಬಲ್ಲ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡುತ್ತಿರುವ ಎರಡನೇ ಕಂಪೆನಿ ಎಂ.ಜಿ. ಮೋಟಾರ್ಸ್.

ಎಂ.ಜಿ. ಮೋಟಾರ್ ನಿಂದ ಎಲೆಕ್ಟ್ರಿಕಲ್ ವಾಹನ ಬಿಡುಗಡೆ, ಬೆಲೆ ಎಷ್ಟು?ಎಂ.ಜಿ. ಮೋಟಾರ್ ನಿಂದ ಎಲೆಕ್ಟ್ರಿಕಲ್ ವಾಹನ ಬಿಡುಗಡೆ, ಬೆಲೆ ಎಷ್ಟು?

ತೈಲ ಆಮದು ಹಾಗೂ ವಾಯು ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ, ಅಭಿವೃದ್ಧಿ ಮತ್ತು ಹೂಡಿಕೆ ಹೆಚ್ಚಿಸುವಂತೆ ವಾಹನ ತಯಾರಿಕೆ ಕಂಪೆನಿಗಳಿಗೆ ಕರೆ ನೀಡುತ್ತಿದೆ.

ಎಂ.ಜಿ. ಮೋಟಾರ್ಸ್ ಎಲೆಕ್ಟ್ರಿಕಲ್ ವಾಹನದ ಬೆಲೆ 20.88 ಲಕ್ಷದಿಂದ ಆರಂಭ

ಈ ತನಕ 2000 ಯೂನಿಟ್ ಗೂ ಹೆಚ್ಚು ZS ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಬಂದಿದೆ. ಜನವರಿ 17ನೆ ತಾರೀಕಿಗೂ ಮುನ್ನ ಬುಕ್ಕಿಂಗ್ ಮಾಡಿದವರಿಗೆ 1 ಲಕ್ಷ ರುಪಾಯಿ ರಿಯಾಯಿತಿ ದೊರೆಯುತ್ತದೆ. ಇದರ ಜತೆಗೆ ZS ಎಲೆಕ್ಟ್ರಿಕ್ ವಾಹನಗಳಿಗೆ 8 ವರ್ಷ ಅಥವಾ 1,50,000 ಲಕ್ಷ ಕಿ.ಮೀ.ನಷ್ಟು ವಾರಂಟಿಯನ್ನು ಲಿಥಿಯಂ ಬ್ಯಾಟರಿಗಳಿಗೆ ನೀಡಲಾಗುತ್ತದೆ.

English summary

MG Motors Electrical Vehicle Price Start From 21 Lakh

MG Motors electrical car releasing in India with starting price of 20.88 lakh. Here is the complete details.
Story first published: Thursday, January 23, 2020, 18:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X