For Quick Alerts
For Daily Alerts
145 ದಿನಗಳ ನಂತರ ಕಾರ್ಗಿಲ್ ನಲ್ಲಿ ಮತ್ತೆ ಮೊಬೈಲ್ ಇಂಟರ್ ನೆಟ್ ಸೇವೆ ಆರಂಭ
|
ಲಡಾಖ್ ಜಿಲ್ಲೆಯ ಕಾರ್ಗಿಲ್ ನಲ್ಲಿ ಶುಕ್ರವಾರದಿಂದ (ಡಿಸೆಂಬರ್ 27) ಮತ್ತೆ ಮೊಬೈಲ್ ಇಂಟರ್ ನೆಟ್ ಸೇವೆ ಆರಂಭವಾಗಿದೆ. ಕಳೆದ 145 ದಿನಗಳಿಂದ ಇಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆ ಇರಲಿಲ್ಲ. ಕೇಂದ್ರ ಸರ್ಕಾರವು ಪರಿಚ್ಛೇದ 370 ಅನ್ನು ರದ್ದುಗೊಳಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಇಲ್ಲಿನ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಇದೀಗ ಮೊದಲಿನ ಸ್ಥಿತಿಗೆ ಮರಳಿರುವುದರಿಂದ ಸೇವೆ ಪುನರಾರಂಭ ಆಗಿದೆ ಎಂದು ಮಾಹಿತಿ ನೀಡಲಾಗಿದೆ. ಈ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳದಂತೆ ಸ್ಥಳೀಯ ಧಾರ್ಮಿಕ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಕಾರ್ಗಿಲ್ ನಲ್ಲಿ ಬ್ರ್ಯಾಡ್ ಬ್ಯಾಂಡ್ ಕಾರ್ಯ ನಿರ್ವಹಿಸುತ್ತಿದೆ. ಆಗಸ್ಟ್ 5ನೇ ತಾರೀಕಿನಂದು ಕೇಂದ್ರ ಸರ್ಕಾರವು ಪರಿಚ್ಛೇದ 370 ರದ್ದುಗೊಳಿಸಿ, ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದಂದಿನಿಂದ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
English summary
Mobile Internet Service Started In Kargil After 145 Days
Story first published: Friday, December 27, 2019, 18:49 [IST]