For Quick Alerts
ALLOW NOTIFICATIONS  
For Daily Alerts

ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಈ ತಿಂಗಳಿಂದ ಏರಿಕೆ ನಿರೀಕ್ಷೆ

|

ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಈ ತಿಂಗಳು 3% ಏರಿಕೆ ಆಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದಿಂದ ಡಿಸ್ ಪ್ಲೇ ಆಮದಿನ ಮೇಲೆ 10% ಸುಂಕ ವಿಧಿಸಲಾಗಿದೆ ಎಂದು ಸೆಲ್ಯುಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಶುಕ್ರವಾರ ಹೇಳಿದೆ. ಡಿಸ್ ಪ್ಲೇ ಜೋಡಣೆ ಮತ್ತು ಟಚ್ ಪ್ಯಾನೆಲ್ ಮೇಲೆ ಅಕ್ಟೋಬರ್ 1ರಿಂದ ಸುಂಕ ವಿಧಿಸುವುದಕ್ಕೆ ಪ್ರಸ್ತಾವ ಮಾಡಲಾಗಿತ್ತು.

 

Apple iPhone 12: ನಾಲ್ಕಲ್ಲ ಐದು ಮಾಡೆಲ್ ಬಿಡುಗಡೆ ನಿರೀಕ್ಷೆApple iPhone 12: ನಾಲ್ಕಲ್ಲ ಐದು ಮಾಡೆಲ್ ಬಿಡುಗಡೆ ನಿರೀಕ್ಷೆ

ಕೈಗಾರಿಕೆ ಜತೆಗೆ ಒಪ್ಪಿಗೆ ಬಳಿಕ 2016ರಲ್ಲಿ ಘೋಷಣೆಯಾದ ಫೇಸ್ಡ್ ಮ್ಯಾನುಫ್ಯಾಕ್ಚರಿಂಗ್ ಪ್ರೋಗ್ರಾಂ (PMP) ಅಡಿಯಲ್ಲಿ ಈ ಸುಂಕ ವಿಧಿಸಲಾಗುತ್ತಿದೆ. "ಮೊಬೈಲ್ ಫೋನ್ ದರದ ಮೇಲೆ 1.5%ನಿಂದ 3% ತನಕ ಪರಿಣಾಮ ಆಗಲಿದೆ," ಎಂದು ICEA ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಈ ತಿಂಗಳಿಂದ ಏರಿಕೆ ನಿರೀಕ್ಷೆ

ಆಪಲ್, ಹುವೈ, ಶಿಯೋಮಿ, ವಿವೋ ಹಾಗೂ ವಿನ್ ಸ್ಟ್ರನ್ ಸಹ ಐಸಿಇಎ ಸದಸ್ಯ ಆಗಿವೆ. ಸ್ಥಳೀಯವಾಗಿಯೇ ಬಿಡಿ ಭಾಗಗಳು ಉತ್ಪಾದನೆ ಆಗುವುದನ್ನು ಪ್ರೋತ್ಸಾಹಿಸಬೇಕು ಎಂದು ಹಾಗೂ ಆಮದಿಗೆ ಉತ್ತೇಜನ ನೀಡಬಾರದು ಎಂದು ಪಿಎಂಪಿ ತರಲಾಗಿದೆ. ಈ ಹಿಂದೆ ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ ವಾಲ್ ಎಲ್ ಸಿಡಿ ಉತ್ಪಾದನೆ ಬಗ್ಗೆ ಪ್ರಸ್ತಾವ ಇಟ್ಟಿದ್ದರು ಆದರೆ ಅದಕ್ಕೆ ಸರ್ಕಾರದ ಅನುಮತಿ ಸಿಗಲಿಲ್ಲ.

English summary

Mobile Phone Prices Likely To Increase Up To 3 Percent This Month

Mobile phone prices likely to increase between 1.5 to 3% this month. Know the reason why?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X