For Quick Alerts
ALLOW NOTIFICATIONS  
For Daily Alerts

ಮೊಬೈಲ್ ಬಳಕೆದಾರರೇ, 2021ಕ್ಕೆ ನಿಮ್ಮ ಮೊಬೈಲ್ ಬಿಲ್ ಹೆಚ್ಚಾಗಬಹುದು!

|

2020ರ ವರ್ಷ ಮುಗೀತಲ್ಲ ಎಂಬುವವರಿಗೆ ಇಲ್ಲಿದೆ ಬ್ಯಾಡ್ ನ್ಯೂಸ್. 2021ರಲ್ಲಿ ನಿಮ್ಮ ಮೊಬೈಲ್ ಬಿಲ್ ಹೆಚ್ಚಾಗಬಹುದು. ಬೆಲೆ ಯಾವಾಗ ಹೆಚ್ಚಾಗಬಹುದು ಎಂದು ಸ್ಪಷ್ಟವಾಗಿಲ್ಲವಾದರೂ, ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಮೂಲ ಬೆಲೆಗಳನ್ನು ಘೋಷಿಸುವಂತೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅನ್ನು ಕೇಳಿಕೊಂಡಿವೆ.

ಪ್ರಮುಖ ಟೆಲಿಕಾಂ ಕಂಪನಿಗಳ ನಡುವೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಿರುವುದರ ಜೊತೆಗೆ ಮೂಲ ಬೆಲೆಗಳನ್ನು ಹೆಚ್ಚಿಸಲು ಟೆಲ್ಕೋ ಆದ್ಯತೆ ನೀಡಿವೆ. ವೊಡಾಫೋನ್ ಐಡಿಯಾ, ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಬೆಲೆ ಏರಿಕೆ ಮಾಡಬಹುದೆಂಬ ಸುದ್ದಿ ಕೇಳಿಬಂದಿದೆ.

ನಾವು ದರ ಹೆಚ್ಚಿಸುತ್ತೇವೆ, ಉಳಿದವರು ಅನುಸರಿಸುತ್ತಾರೆ: ವೊಡಾಫೋನ್ ಐಡಿಯಾನಾವು ದರ ಹೆಚ್ಚಿಸುತ್ತೇವೆ, ಉಳಿದವರು ಅನುಸರಿಸುತ್ತಾರೆ: ವೊಡಾಫೋನ್ ಐಡಿಯಾ

ಇನ್ನು ಮೊಬೈಲ್ ಬಿಲ್ ಹೆಚ್ಚಳವು ಮಾರ್ಚ್‌ 2021ರ ಬಳಿಕವಷ್ಟೇ ಜಾರಿಗೆ ಬರಲಿದೆ ಎನ್ನಲಾಗಿದೆ. ಪ್ರಿಪೇಯ್ಡ್‌ ವಿಭಾಗದಲ್ಲಿ ಈ ಹಿಂದೆ ಡಿಸೆಂಬರ್ 2019ರಲ್ಲಿ ಬೆಲೆ ಹೆಚ್ಚಳವಾಗಿತ್ತು. ಈ ನಡುವೆ ಶೇಕಡಾ 25ರಿಂದ 40ರವರೆಗೆ ಇತ್ತು. ಆದರೆ 2020ರ ಹಣಕಾಸು ವರ್ಷದಲ್ಲಿ ಮತ್ತೊಂದು ಸುತ್ತಿನ ಏರಿಕೆಯನ್ನು ನಿರೀಕ್ಷಿಸಲಾಗಿತ್ತಾದರೂ, ಕೋವಿಡ್ ಆಘಾತದಿಂದಾಗಿ 2021ಕ್ಕೆ ತಳ್ಳಲ್ಪಟ್ಟಿತು.

2021ಕ್ಕೆ ನಿಮ್ಮ ಮೊಬೈಲ್ ಬಿಲ್ ಹೆಚ್ಚಾಗಬಹುದು!

ವಾಯ್ಸ್ ಕಾಲ್ ಮತ್ತು ಡೇಟಾಗೆ ಕನಿಷ್ಠ ಬೇಸ್ ಪ್ರೈಸ್ ನಿಗದಿಪಡಿಸಲು 2019 ರಲ್ಲಿ ಟೆಲಿಕಾಂ ನಿಯಂತ್ರಕ ಟ್ರಾಯ್ ಪಟ್ಟಿಯನ್ನು ಬಿಡುಗಡೆ ಮಾಡಿತು. ಪ್ರಸ್ತುತ, ಟೆಲಿಕಾಂ ಕರೆ ಮತ್ತು ಡೇಟಾ ದರಗಳನ್ನು ನಿಯಂತ್ರಿಸಲಾಗುವುದಿಲ್ಲ. ಆದಾಗ್ಯೂ, ಕ್ಷೇತ್ರದ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಕನಿಷ್ಠ ದರಗಳನ್ನು ನಿಗದಿಪಡಿಸಲು ಟೆಲಿಕಾಂ ಕಂಪನಿಗಳು ಸರ್ವಾನುಮತದಿಂದ ಟ್ರಾಯ್ ಅನ್ನು ಸಂಪರ್ಕಿಸಿದೆ.

ವಾಯ್ಸ್‌ ಕಾಲ್ ಮತ್ತು ಮೊಬೈಲ್ ಡೇಟಾಗೆ ಬೇಸ್‌ ಪ್ರೈಸ್ ನಿಗದಿಪಡಿಸುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಉದ್ಯಮವು ARPU ತಿಂಗಳಿಗೆ 300 ರೂಗಳನ್ನು ತಲುಪಬೇಕೆಂದು ಬಯಸಿದೆ. ಜೊತೆಗೆ ಡೇಟಾ ಬೆಲೆಗಳಲ್ಲಿ 5-9x ಹೆಚ್ಚಳವನ್ನು ಟೆಲಿಕಾಂ ನಿರ್ವಾಹಕರು ನಿರೀಕ್ಷಿಸಿದ್ದಾರೆ.

English summary

Mobile users, your mobile bill may go up in 2021: What you need to know in kannada

Mobile users may see their bill going up in 2021. While it's not clear when the price cuts may happen, all three telecom companies have been requesting the TRAI to announce floor prices.
Story first published: Saturday, December 12, 2020, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X