For Quick Alerts
ALLOW NOTIFICATIONS  
For Daily Alerts

ಭಾರತದ ಜಿಡಿಪಿ ಸೂಚ್ಯಂಕವನ್ನು ಶೇಕಡಾ 5.6ಕ್ಕೆ ಇಳಿಸಿದ ಮೂಡಿಸ್

|

ಇತ್ತೀಚೆಗಷ್ಟೇ ಭಾರತದ ಆರ್ಥಿಕತೆ ಕುಸಿದಿದೆ ಎಂದಿದ್ದ ಮೂಡಿಸ್ ಸಂಸ್ಥೆಯು, 2019-20ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ದರವನ್ನು ಶೇಕಡಾ 5.6ಕ್ಕೆ ಇಳಿಸಿದೆ

 

ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್, ಗುರುವಾರ(ನವೆಂಬರ್ 14) ಈ ಹೇಳಿಕೆ ನೀಡಿದೆ. ದೇಶದ ಆರ್ಥಿಕ ಬೆಳವಣಿಗೆಯ ಕುಸಿತವು ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ಹೇಳಿದೆ.

 
ಭಾರತದ ಜಿಡಿಪಿ ಸೂಚ್ಯಂಕವನ್ನು ಶೇಕಡಾ 5.6ಕ್ಕೆ ಇಳಿಸಿದ ಮೂಡಿಸ್

ಇತ್ತೀಚೆಗಷ್ಟೇ ದೇಶದ ಆರ್ಥಿಕ ವೃದ್ದಿ ದರವಷ್ಟೇ ಅಲ್ಲದೆ ಆರು ಭಾರತೀಯ ಹಣಕಾಸು ಸಂಸ್ಥೆಗಳ ದೃಷ್ಟಿಕೋನವನ್ನು 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಪರಿಷ್ಕರಿಸಿತ್ತು. 2019-20ರಲ್ಲಿ ಭಾರತದ ಅಭಿವೃದ್ಧಿ ದರವು ಶೇಕಡಾ 5.8ರಷ್ಟು ಇರಲಿದೆ ಎಂದು ಅಕ್ಟೋಬರ್‌ನಲ್ಲಿ ಮೂಡಿಸ್ ಅಂದಾಜಿಸಿತ್ತು. ಆದರೆ ಇದೀಗ ಜಿಡಿಪಿ ದರವನ್ನು ಶೇಕಡಾ 5.6ಕ್ಕೆ ಇಳಿಸಿದೆ.

ಭಾರತದ ಆರ್ಥಿಕತೆ ಕುಸಿದಿದೆ ಎಂದ ಮೂಡಿಸ್ ಸಂಸ್ಥೆಭಾರತದ ಆರ್ಥಿಕತೆ ಕುಸಿದಿದೆ ಎಂದ ಮೂಡಿಸ್ ಸಂಸ್ಥೆ

ಭಾರತದ ಆರ್ಥಿಕ ಬೆಳವಣಿಗೆಯು ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 5ರಷ್ಟು ವಿಸ್ತಾರಗೊಂಡಿದೆ. ಇದು ಕಳೆದ 6 ವರ್ಷಗಳಲ್ಲೇ ಅತಿ ಕಡಿಮೆ ಮಟ್ಟದ ಬೆಳವಣಿಗೆಯಾಗಿದೆ ಎಂದು ಹೇಳಿದೆ.

ಇದರ ಜೊತೆಗೆ ಮೂಡಿಸ್ ದೇಶದ ಆರ್ಥಿಕ ಚಟುವಟಿಕೆಗಳು 2020ರಲ್ಲಿ ಶೇಕಡಾ 6.6 ಮತ್ತು 2021ರಲ್ಲಿ ಶೇಕಡಾ 6.7 ರಷ್ಟಾಗುತ್ತದೆ ಎಂದು ನಿರೀಕ್ಷಿಸಿದೆ.

English summary

Moody's Cuts India's GDP Growth Forecast To 5.6 Percent

Moody's Investors Service on Thursday lowered its economic growth forecast for India to 5.6 per cent in the current financial year
Story first published: Thursday, November 14, 2019, 16:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X