For Quick Alerts
ALLOW NOTIFICATIONS  
For Daily Alerts

ಭಾರತದ ಸವರನ್ ರೇಟಿಂಗ್ Baa- 3 ಗ್ರೇಡ್ ಗೆ ಇಳಿಸಿದ ಮೂಡೀಸ್

|

ಭಾರತದ ಸವರನ್ ರೇಟಿಂಗ್ ಅನ್ನು Baa- 3 ಗ್ರೇಡ್ ಗೆ ಇಳಿಸಿದೆ ಮೂಡೀಸ್ ಇನ್ವೆಸ್ಟರ್ ಸರ್ವೀಸ್. ಇದು ಅತ್ಯಂತ ಕನಿಷ್ಠ ಹೂಡಿಕೆ ಗ್ರೇಡ್. ಇದರ ಜತೆಗೆ 'ನೆಗೆಟಿವ್' ಬಾಹ್ಯ ಸ್ಥಿತಿ ಎಂಬುದನ್ನು ಸಹ ಮುಂದುವರಿಸಿದೆ. ಕೊರೊನಾ ಕಾರಣಕ್ಕೆ ದೇಶದ ಆರ್ಥಿಕ ಮಾನದಂಡಗಳು 'ವಾಸ್ತವ ನೆಲೆಗಟ್ಟಿನಲ್ಲಿ ದುರ್ಬಲ' ಆಗಿರುವುದರಿಂದ ಇಂಥದ್ದೊಂದು ಪರಿಣಾಮದ ಎಚ್ಚರಿಕೆ ನೀಡಿತ್ತು ಮೂಡೀಸ್.

ಮೇ 8ನೇ ತಾರೀಕಿನಂದೇ ಭಾರತದ ರೇಟಿಂಗ್ ಇಳಿಸುವ ಎಚ್ಚರಿಕೆ ನೀಡಲಾಗಿತ್ತು. ಕೇಂದ್ರ ಸರ್ಕಾರ ಇಪ್ಪತ್ತೊಂದು ಲಕ್ಷ ಕೋಟಿ ರುಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿತು (ಅದರಲ್ಲಿ ಹತ್ತು ಪರ್ಸೆಂಟ್ ಮಾತ್ರ ಬಜೆಟ್ ಗೆ ಹೆಚ್ಚುವರಿಯಾಗಿತ್ತು). ಆದರೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಘೋಷಣೆ ಮಾಡಿದಂತೆ, ಈ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಹನ್ನೊಂದು ವರ್ಷದಲ್ಲೇ ಕನಿಷ್ಠ ಮಟ್ಟವಾದ 4.2%ಗೆ ಬರಲಿದೆ.

ಇನ್ನು ಕೇಂದ್ರದ ಬಜೆಟ್ ವಿತ್ತೀಯ ಕೊರತೆ ಜಿಡಿಪಿಯ 4.6 ಪರ್ಸೆಂಟ್ ಬರುತ್ತದೆ. ಆರ್ಥಿಕ ವರ್ಷ 2013ರ ನಂತರದಲ್ಲಿ ಇದು ಗರಿಷ್ಠ ಪ್ರಮಾಣ. ಈ ಆರ್ಥಿಕ ವರ್ಷದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿತ್ತೀಯ ಕೊರತೆಯಲ್ಲಿ ಭಾರೀ ಏರಿಕೆಯೇ ಆಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಬೇಡಿಕೆ ಮತ್ತೆ ಹೆಚ್ಚಾಗಬೇಕು ಎಂಬ ಉದ್ದೇಶಕ್ಕೆ ಸರ್ಕಾರ ಇಷ್ಟು ದೊಡ್ಡ ಮೊತ್ತದ ವೆಚ್ಚ ಮಾಡುತ್ತಿದೆ.

ಭಾರತದ ಸವರನ್ ರೇಟಿಂಗ್  Baa- 3 ಗ್ರೇಡ್ ಗೆ ಇಳಿಸಿದ ಮೂಡೀಸ್

S&P, ಫಿಚ್ ಏಜೆನ್ಸಿಗಳು ಈ ವರೆಗೆ ಭಾರತದ ಸವರನ್ ಅನ್ನು ಮೇಲ್ದರ್ಜೆಗೆ ಏರಿಸಿಲ್ಲ. ಆದರೆ ಮೂಡೀಸ್ ಮಾತ್ರ 2017ರಲ್ಲಿ ಒಮ್ಮೆ ಮಾತ್ರ ಏರಿಕೆ ಮಾಡಿತ್ತು. ಆದರೆ ಕಳೆದ ವರ್ಷ ನವೆಂಬರ್ ನಲ್ಲಿ ಮತ್ತೆ ದೇಶದ ಬಾಹ್ಯ ಸ್ಥಿತಿಯನ್ನು 'ನೆಗೆಟಿವ್' ಎಂದು ಪರಿಷ್ಕರಿಸಿತು. ಆದರೆ ಸೋಮವಾರದಂದು ಮೂಡೀಸ್ ನೀಡಿರುವ ರೇಟಿಂಗ್ ಉಳಿದ ಏಜೆನ್ಸಿಗಳಿಗಿಂಗ ಕಳಪೆ ಆಗಿದೆ. ಆದರೆ S&P, ಫಿಚ್ ಏಜೆನ್ಸಿ ಈ ತನಕ ರೇಟಿಂಗ್ ಘೋಷಿಸಿಲ್ಲ.

ಭಾರತಕ್ಕೆ ಬಿಎಎ2 (Baa2) ರೇಟಿಂಗ್: ಮೂಡೀಸ್ಭಾರತಕ್ಕೆ ಬಿಎಎ2 (Baa2) ರೇಟಿಂಗ್: ಮೂಡೀಸ್

ಇದೇ ವೇಳೆ ಭಾರತದ ಕರೆನ್ಸಿಯನ್ನೂ ನೆಗೆಟಿವ್ ಎಂದು ರೇಟಿಂಗ್ ನೀಡಲಾಗಿದೆ. ಆದರೆ ಈ ರೀತಿಯ ರೇಟಿಂಗ್ ನಿರೀಕ್ಷಿತವೇ ಆಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಿಸುವ ವೇಳೆ ಈ ರೀತಿಯ ಬೆಳವಣಿಗೆ ಸಹಜ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಭಾರತದ ಜಿಡಿಪಿ ಹಾಗೂ ಸಾಲದ ಹೋಲಿಕೆ ಪ್ರಮಾಣವು ಆರ್ಥಿಕ ವರ್ಷ 2020ಕ್ಕೆ 72.3 ಪರ್ಸೆಂಟ್ ಆಗಿದೆ. ವರ್ಷದ ಹಿಂದೆ ಈ ಪ್ರಮಾಣ 69.9 ಪರ್ಸೆಂಟ್ ಇತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಆರ್ಥಿಕ ವರ್ಷ 2021ಕ್ಕೆ ನೆಗೆಟಿವ್ ಬೆಳವಣಿಗೆ ಅಂದಾಜನ್ನೇ ನೀಡಿದ್ದು, ಆದರೆ ನಿರ್ದಿಷ್ಟವಾಗಿ ತಿಳಿಸಿಲ್ಲ.

English summary

Moody's Downgraded India Sovereign Rating To Baa-3

Moody's rating agency downgraded India sovereign rating to lowest Baa- 3 rating.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X