For Quick Alerts
ALLOW NOTIFICATIONS  
For Daily Alerts

ಭಾರತದ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಬಗ್ಗೆ ಮೂಡೀಸ್ ಕಳವಳ

|

ನವದೆಹಲಿ, ಜೂನ್ 4: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಕುಸಿಯುತ್ತಿರುವ ಭಾರತದ ಆರ್ಥಿಕ ವ್ಯವಸ್ಥೆ ಬಗ್ಗೆ ಹಣಕಾಸಿನ ಜಾಗತಿಕ ರೇಟಿಂಗ್ ಸಂಸ್ಥೆಯಾದ ಮೂಡೀಸ್ ಇನ್ವೇಸ್ಟರ್ಸ್ ಕಳವಳ ವ್ಯಕ್ತಪಡಿಸಿದೆ.

ಬುಧವಾರ ಚಿಲ್ಲರೆ ಮತ್ತು ಸಣ್ಣ ವ್ಯಾಪಾರದ ಸಾಲಗಳ ಗುಣಮಟ್ಟ ಭಾರತದಲ್ಲಿ ತೀವ್ರ ಪ್ರಮಾಣದಲ್ಲಿ ಹದಗೆಡುತ್ತಿದೆ. ಇದು ಶೀಘ್ರವೇ ಚೇತರಿಕೆ ಕಾಣದಿದ್ದರೇ ಭಾರತದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಲಿದೆ. ಹಣಕಾಸು ವ್ಯವಸ್ಥೆಗೆ ಅಪಾಯಗಳು ಹೆಚ್ಚುತ್ತಿವೆ ಎಂದು ಅದು ಬುಧವಾರ ತನ್ನ ವರದಿಯಲ್ಲಿ ಹೇಳಿದೆ.

ಭಾರತದಲ್ಲಿ ಕೊರೊನಾವೈರಸ್ ಲಾಕ್‌ಡೌನ್ ಸಂಭವಿಸುವ ಮೊದಲು ಕೆಲವು ವಲಯಗಳು ಅದಾಗಲೇ ಸಂಕಷ್ಟದಲ್ಲಿದ್ದವು. ಈಗ ಚಿಲ್ಲರೆ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಸ್‌ಎಂಇ) ಸಾಲಗಳ ಗುಣಮಟ್ಟವೂ ಹದಗೆಡಲಿದೆ. ಭಾರತದ ಒಟ್ಟು ಸಾಲಗಳಲ್ಲಿ ಇದು ಶೇಕಡಾ 44 ರಷ್ಟಿದೆ ಎಂದು ಮೂಡಿಸ್ ಹೇಳುತ್ತದೆ. ದೇಶದ ನೀತಿ ನಿರೂಪಿಸುವ ಸಂಸ್ಥೆಗಳು ಕಡಿಮೆ ಬೆಳವಣಿಗೆ, ದುರ್ಬಲ ಹಣಕಾಸಿನ ಪರಿಸ್ಥಿತಿಗಳು ಮತ್ತು ಹೆಚ್ಚುತ್ತಿರುವ ಆರ್ಥಿಕ ವಲಯದ ಒತ್ತಡದಿಂದ ಹೆಚ್ಚು ಸವಾಲುಗಳನ್ನು ಎದುರಿಸಲಿವೆ ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಹೇಳಿದೆ.

ಭಾರತದ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಬಗ್ಗೆ ಮೂಡೀಸ್ ಕಳವಳ

ರೇಟ್ ಮಾಡಲಾದ ಹಣಕಾಸೇತರ ಕಂಪೆನಿಗಳಲ್ಲಿ ಶೇ 80 ಕ್ಕಿಂತಲೂ ಹೆಚ್ಚು ಋಣಾತ್ಮಕ ದೃಷ್ಟಿಕೋನಗಳು ಕಂಡು ಬಂದಿವೆ. 2019 ರ ನವೆಂಬರ್‌ನಿಂದ ಭಾರತದಲ್ಲಿ ಆರ್ಥಿಕ ಅಪಾಯಗಳು ಹೆಚ್ಚುತ್ತಿವೆ. ನಿಧಾನಗತಿಯ ಬೆಳವಣಿಗೆಯ ದೀರ್ಘಕಾಲದ ಅವಧಿ ಇದೆ ಎಂದು ಮೂಡಿಸ್ ಕಳವಳ ವ್ಯಕ್ತಪಡಿಸಿದೆ. (ಆಧಾರ; ಎಎನ್‌ಐ)

English summary

Moodys Investors Concerned About Indian Economy

Moodys Investors Concerned About Indian Economy. MSMEs and financial institutions are in dangerous condition,
Story first published: Thursday, June 4, 2020, 18:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X