For Quick Alerts
ALLOW NOTIFICATIONS  
For Daily Alerts

ಮದರ್ ಡೈರಿ ಹಾಲು 1-2 ರೂ ಏರಿಕೆ; ಇಂದು ನ. 21ರಿಂದಲೇ ಜಾರಿಗೆ

|

ನವದೆಹಲಿ, ನ. 21: ಕೆಎಂಎಫ್ ಇತ್ತೀಚೆಗೆ ಹಾಲಿನ ಬೆಲೆ ಏರಿಸಲು ಮುಂದಾದಾಗ ರಾಜ್ಯ ಸರ್ಕಾರ ಆ ನಿರ್ಧಾರ ರದ್ದು ಮಾಡಿತ್ತು. ಆದರೆ, ಬೇರೆಡೆ ಹಾಲಿನ ಬೆಲೆಗಳ ಏರಿಕೆ ಮುಂದುವರಿದಿದೆ. ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ಮಾಲಕತ್ವದ ಮದರ್ ಡೈರಿ ಸಂಸ್ಥೆ ತನ್ನ ಹಾಲಿನ ದರ ಪರಿಷ್ಕರಿಸಿದೆ. ಪೂರ್ಣ ಕೆನೆಭರಿತ (ಫುಲ್ ಕ್ರೀಮ್) ಹಾಲಿನ ಬೆಲೆ ಲೀಟರ್‌ಗೆ 1 ರೂ ಹೆಚ್ಚಳ ಮಾಡಲಾಗಿದೆ. ಟೋಕನ್ ಹಾಲು (ಹೋಮೋಜಿನೈಸ್ಡ್ ಅಥವಾ ಪಾಶ್ಚೀಕರಿಸಿದ ಹಾಲು) ಬೆಲೆ ಲೀಟರ್‌ಗೆ 2 ರೂ ಹೆಚ್ಚಾಗಿದೆ. ಡೆಲ್ಲಿ ಎನ್‌ಸಿಆರ್ ಪ್ರದೇಶದಲ್ಲಿ ಈ ಹೊಸ ಬೆಲೆ ನವೆಂಬರ್ 21, ಸೋಮವಾರದಿಂದಲೇ ಜಾರಿಗೆ ಬಂದಿದೆ.

ಮದರ್ ಡೈರಿಯ ಕೆನೆಹಾಲು ಈಗ ಒಂದು ಲೀಟರ್‌ಗೆ 63 ರೂನಿಂದ 64 ರೂಪಾಯಿಗೆ ಬೆಲೆ ಏರಿಕೆಯಾಗಿದೆ. ಇನ್ನು, ಒಂದು ಲೀಟರ್ ಟೋಕನ್ ಹಾಲಿನ ಬೆಲೆ 48 ರೂಪಾಯಿಯಿಂದ 50 ರೂಪಾಯಿಗೆ ಹೆಚ್ಚಳವಾಗಿದೆ. ಆದರೆ, ಅರ್ಧ ಲೀಟರ್ ಕೆನೆ ಹಾಲಿನ ಪ್ಯಾಕೆಟ್‌ಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಅದರ ಬೆಲೆ 32 ರೂ ಇದೆ.

ಹೈನೋದ್ಯಮ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಮದರ್ ಡೈರಿ ಈ ಬೆಲೆ ಏರಿಕೆ ನಿರ್ಧಾರ ಕೈಗೊಂಡಿರುವುದು ತಿಳಿದುಬಂದಿದೆ. ಈ ವರ್ಷ ಮದರ್ ಡೈರಿ ತನ್ನ ಹಾಲಿನ ಉತ್ಪನ್ನಗಳ ಬೆಲೆ ಏರಿಸಿರುವುದು ಇದು ನಾಲ್ಕನೇ ಬಾರಿ.

ನಂದಿನ ಹಾಲಿನ ಬೆಲೆ ಏರಿಕೆ ಸದ್ಯಕ್ಕೆ ಇಲ್ಲ; ನ. 20ರ ಬಳಿಕ ಅಂತಿಮ ನಿರ್ಧಾರನಂದಿನ ಹಾಲಿನ ಬೆಲೆ ಏರಿಕೆ ಸದ್ಯಕ್ಕೆ ಇಲ್ಲ; ನ. 20ರ ಬಳಿಕ ಅಂತಿಮ ನಿರ್ಧಾರ

ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮದರ್ ಡೈರಿ ತನ್ನ ಹಾಲಿನ ಬೆಲೆಗಳ ಏರಿಕೆ ಮಾಡಿತ್ತು. ಮಾರ್ಚ್ ಮತ್ತು ಆಗಸ್ಟ್ ತಿಂಗಳಲ್ಲಿ ಎಲ್ಲಾ ಹಾಲು ಪ್ಯಾಕೆಟ್‌ಗಳ ಬೆಲೆ ಲೀಟರ್‌ಗೆ 2 ರೂನಷ್ಟು ಏರಿಕೆಯಾಗಿತ್ತು. ಅಕ್ಟೋಬರ್ 16ರಂದು ಕೆನೆ ಹಾಲು ಮತ್ತು ಹಸು ಹಾಲಿನ ಬೆಲೆ ಲೀಟರ್‌ಗೆ 2 ರೂ ಹೆಚ್ಚಳ ಮಾಡಲಾಗಿತ್ತು. ಹಸು ಹಾಲು ಒಂದು ಲೀಟರ್‌ಗೆ 55 ರೂಪಾಯಿಗೆ ಬೆಲೆ ಏರಿಕೆ ಕಂಡಿತ್ತು.

ಅಮೂಲ್ ಹಾಲಿನ ದರ ಹೆಚ್ಚಳ

ಅಮೂಲ್ ಹಾಲಿನ ದರ ಹೆಚ್ಚಳ

ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಪ್ರತೀದಿನ 90 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತದೆ. ಇದರಲ್ಲಿ ಮದರ್ ಡೈರಿ ಹಾಲಿನ ಪಾಲು ಶೇ. 40ರಷ್ಟು ಇದೆ. ಗುಜರಾತ್‌ನ ಅಮೂಲ್ ಹಾಲೂ ಕೂಡ ಈ ಪ್ರದೇಶದಲ್ಲಿ ಶೇ. 40ರಷ್ಟು ಮಾರುಕಟ್ಟೆ ಸ್ವಾಮ್ಯ ಹೊಂದಿದೆ. ಮದರ್ ಡೈರಿಯ ಜೊತೆ ಜೊತೆಗೆಯೇ ಅಮೂಲ್ ಕೂಡ ಈ ವರ್ಷ ಮೂರು ಬಾರಿ ಹಾಲಿನ ದರಗಳನ್ನು ಪರಿಷ್ಕರಿಸಿದೆ. ಮಾರ್ಚ್ ಮತ್ತು ಆಗಸ್ಟ್‌ನಲ್ಲಿ ಅಮೂಲ್ ತನ್ನೆಲ್ಲಾ ಹಾಲಿನ ಪ್ಯಾಕೆಟ್‌ಗಳ ಬೆಲೆಯನ್ನು 2 ರೂನಷ್ಟು ಹೆಚ್ಚಿಸಿತ್ತು. ಅಕ್ಟೋಬರ್ ತಿಂಗಳಲ್ಲಿ ಕೆನೆ ಹಾಲು ಮತ್ತು ಎಮ್ಮೆ ಹಾಲಿನ ಬೆಲೆ 2 ರೂ ಹೆಚ್ಚಿಸಿತ್ತು.

ಬೆಲೆ ಹೆಚ್ಚಳಕ್ಕೆ ಏನು ಕಾರಣ?

ಬೆಲೆ ಹೆಚ್ಚಳಕ್ಕೆ ಏನು ಕಾರಣ?

ಹಾಲು ಉತ್ಪಾದಕರಿಗೆ ವೆಚ್ಚ ಹೆಚ್ಚುತ್ತಿದೆ. ಹೈನುಗಾರಿಕೆ ತುಸು ದುಬಾರಿ ಆಗುತ್ತಿದೆ. ಹಸು, ಎಮ್ಮೆಗಳಿಗೆ ನೀಡಲಾಗುವ ಆಹಾರದ ಬೆಲೆ ಹೆಚ್ಚಾಗಿದೆ. ಜೊತೆಗೆ ಪ್ರತಿಕೂಲ ಹವಾಮಾನವು ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಹಾಲಿನ ಉತ್ಪಾದನೆ ಆಗಿಲ್ಲ. ಬೇಡಿಕೆ ಮತ್ತು ಸರಬರಾಜು ಮಧ್ಯೆ ದೊಡ್ಡ ಅಂತರ ಇದೆ ಎಂದು ಮದರ್ ಡೈರಿಯ ವಕ್ತಾರರು ನಿನ್ನೆ ಭಾನುವಾರ ಹಾಲಿನ ಬೆಲೆ ಏರಿಕೆ ನಿರ್ಧಾರಕ್ಕೆ ಕಾರಣಗಳನ್ನು ನೀಡಿದ್ದಾರೆ.

ಅಕ್ಟೋಬರ್‌ನಲ್ಲಿ ಹಾಲಿನ ಹಣದುಬ್ಬರ ಶೇ. 7.69ರಷ್ಟು ಇದೆ ಎಂಬ ಮಾಹಿತಿ ಇದೆ. ಅಂದರೆ, ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ದೇಶದಲ್ಲಿ ಹಾಲಿನ ಬೆಲೆ ಸರಾಸರಿಯಾಗಿ ಶೇ. 7.69ರಷ್ಟು ಹೆಚ್ಚಾಗಿದೆ.

ಇತರ ಕಡೆ ಹಾಲಿನ ಬೆಲೆ ಎಷ್ಟು?
 

ಇತರ ಕಡೆ ಹಾಲಿನ ಬೆಲೆ ಎಷ್ಟು?

ದೆಹಲಿ ಸೇರಿದಂತೆ ದೇಶದ ವಿವಿಧ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಬಹಳ ಕಡಿಮೆ ಇದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಕಳೆದ ಕೆಲ ವರ್ಷಗಳಿಂದ ಹಾಲಿನ ಬೆಲೆ ಹೆಚ್ಚಿಸಲು ಪ್ರಯತ್ನಿಸುತ್ತಿದೆಯಾದರೂ ಸರ್ಕಾರ ಬೆಲೆ ಏರಿಕೆ ನಿರ್ಧಾರಕ್ಕೆ ತಡೆ ಕೊಡುತ್ತಾ ಬಂದಿದೆ. ಕಳೆದ ವಾರ (ನ. 15) ನಂದಿನ ಹಾಲಿನ ಬೆಲೆ 3 ರೂನಷ್ಟು ಏರಿಕೆ ಆಗಬೇಕಿತ್ತು. ಸರ್ಕಾರ ಸದ್ಯಕ್ಕೆ ಬೆಲೆ ಏರಿಕೆ ಬೇಡವೆಂದು ಹೇಳಿ ಬೆಲೆ ಏರಿಕೆ ನಿರ್ಧಾರಕ್ಕೆ ಅಸಮ್ಮತಿ ಕೊಟ್ಟಿತ್ತು. ಬೇರೆ ಬೇರೆ ರಾಜ್ಯಗಳಲ್ಲಿರುವ ಸಾಮಾನ್ಯ ಹಾಲಿನ ಬೆಲೆ ಈ ಕೆಳಕಂಡಂತೆ ಇದೆ. ಇಲ್ಲಿ ಕೊಡಲಾಗಿರುವ ದರ ಟೋನ್ಡ್ ಹಾಲಿನದ್ದು:

ಕರ್ನಾಟಕ: 37 ರೂ
ತಮಿಳುನಾಡು: 40 ರೂ
ಕೇರಳ: 46 ರೂ
ಗುಜರಾತ್: 50 ರೂ
ಮಹಾರಾಷ್ಟ್ರ: 51 ರೂ
ದೆಹಲಿ: 51 ರೂ
ಆಂಧ್ರಪ್ರದೇಶ 55 ರೂ.

English summary

Mother Dairy Raises Milk Prices From November 21st Due To Increased Feed Cost

National dairy development's wholly subsidiary company Mother Dairy has increased its full cream milk and token milk prices from November 21st, Monday. This is for Delhi-NCR region.
Story first published: Monday, November 21, 2022, 9:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X