For Quick Alerts
ALLOW NOTIFICATIONS  
For Daily Alerts

ಬ್ರಿಟನ್‌ನ ಐಕಾನಿಕ್ ಕಂಟ್ರಿ ಕ್ಲಬ್‌ ಸ್ಟೋಕ್‌ ಪಾರ್ಕ್ ಖರೀದಿಸಿದ ಮುಕೇಶ್ ಅಂಬಾನಿ

|

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಬ್ರಿಟನ್‌ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಸ್ಟೋಕ್ ಪಾರ್ಕ್ ಅನ್ನು 57 ಮಿಲಿಯನ್ ಪೌಂಡ್‌ಗಳಿಗೆ(ಸುಮಾರು 592 ಕೋಟಿ ರೂ.) ಖರೀದಿಸಿದ್ದಾರೆ.

 

ಹೋಟೆಲ್ ಮತ್ತು ಗಾಲ್ಫ್ ಕೋರ್ಸ್ ಹೊಂದಿರುವ ಬ್ರಿಟನ್ ಮೂಲದ ಸಂಸ್ಥೆಯು ರಿಲಯನ್ಸ್ ನ ಗ್ರಾಹಕ ಮತ್ತು ಆತಿಥ್ಯ ಸ್ವತ್ತುಗಳನ್ನು ಹೆಚ್ಚಿಸುತ್ತದೆ ಎಂದು ರಿಲಯನ್ಸ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

 
ಬ್ರಿಟನ್‌ನ ಕಂಟ್ರಿ ಕ್ಲಬ್‌ ಸ್ಟೋಕ್‌ ಪಾರ್ಕ್ ಖರೀದಿಸಿದ RIL

ಸ್ಟೋಕ್ ಪಾರ್ಕ್ ಐಷಾರಾಮಿ ಸ್ಪಾ, ಹೋಟೆಲ್, ಗಾಲ್ಫ್ ಕೋರ್ಸ್ ಮತ್ತು ಕಂಟ್ರಿ ಕ್ಲಬ್ ಅನ್ನು ಹೊಂದಿದೆ. ಸ್ಟೋಕ್ ಪಾರ್ಕ್ ಯುಕೆ ಬರ್ಕಿಂಗ್‌ಹ್ಯಾಮ್‌ನಲ್ಲಿ 300 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದಕ್ಕೂ ಮೊದಲು ಮುಖೇಶ್ ಅಂಬಾನಿ ಅವರು 260 ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ಆಟಿಕೆ ಅಂಗಡಿ ಸರಪಳಿಯನ್ನು 2019 ರಲ್ಲಿ ಖರೀದಿಸಿದ್ದರು.

ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ಇತ್ತೀಚಿಗೆ ಬ್ರಿಟನ್ ನ ಸಾಂಪ್ರದಾಯಿಕ ಆಟಿಕೆ ಮಳಿಗೆ ಹ್ಯಾಮ್ಲಿಸ್ ಅನ್ನು ಖರೀದಿಸಿದ್ದರು. ಈಗ ಮತ್ತೊಂದು ಐಷಾರಾಮಿ ಆಸ್ತಿ ಖರೀದಿಸಿದ್ದಾರೆ.

ಸ್ಟೋಕ್ ಪಾರ್ಕ್ ಲಿಮಿಟೆಡ್ 27 ಚಾಂಪಿಯನ್ ಶಿಪ್ ಗಾಲ್ಫ್ ಕೋರ್ಸ್ ಹಾಗೂ 49 ಐಷಾರಾಮಿ ಬೆಡ್ ರೂಮ್ ಹೊಂದಿರುವ ಹೋಟೆಲ್ ಆಗಿದ್ದು, 13 ಟೆನ್ನಿಸ್ ಕೋರ್ಟ್ ಹಾಗೂ 14 ಎಕರೆ ಖಾಸಗಿ ಪಾರ್ಕ್ ಅನ್ನು ಹೊಂದಿದೆ.

English summary

Mukesh Ambani Buys Britain's Iconic Country Club Stoke Park For Rs 592 Crore

RIL has acquired Britain’s first County Club, from the International Group (IG), owned by the King family, a second-generation UK family business, for 57 million pounds.
Story first published: Friday, April 23, 2021, 23:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X