For Quick Alerts
ALLOW NOTIFICATIONS  
For Daily Alerts

ದುಬೈನಲ್ಲಿ ಬೃಹತ್ ಮ್ಯಾನ್ಷನ್ ಖರೀದಿಸಿದ ಮುಕೇಶ್ ಅಂಬಾನಿ; ಅದರ ಬೆಲೆ ಎಷ್ಟು?

|

ಮುಂಬೈ, ಅ. 20: ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಹಾಗೂ ವಿಶ್ವದ ಅತೀ ಶ್ರೀಮಂತರ ಪೈಕಿ ಒಬ್ಬರೆನಿಸಿರುವ ಮುಕೇಶ್ ಅಂಬಾನಿ ಇದೀಗ ದುಬೈನಲ್ಲಿ ಪಾಮ್ ಜುಮೇರಾ ಎಂಬ ದ್ವೀಪದಲ್ಲಿ ಭವ್ಯ ಬಂಗಲೆಯೊಂದನ್ನು ಖರೀದಿಸಿರುವ ಸುದ್ದಿ ಕೇಳಿಬಂದಿದೆ. ಮೂಲಗಳ ಪ್ರಕಾರ ಈ ಮ್ಯಾನ್ಷನ್ 163 ಮಿಲಿಯನ್ ಯುಎಸ್ ಡಾಲರ್ ಹಣಕ್ಕೆ ಮಾರಾಟವಾಗಿದೆ. ಅಂದರೆ ಸುಮಾರು 1439 ಕೋಟಿ ರೂಪಾಯಿಗೆ ಐಷಾರಾಮಿ ಮ್ಯಾನ್ಷನ್ ಅನ್ನು ಅಂಬಾನಿ ಖರೀದಿ ಮಾಡಿದ್ದಾರೆ.

ಕುವೈತ್‌ನ ಉದ್ಯಮಿ ಮೊಹಮ್ಮದ್ ಅಲ್‌ಶಾಯ ಕುಟುಂಬದಿಂದ ಅಂಬಾನಿ ಕಳೆದ ವಾರ ಈ ಐಷಾರಾಮಿ ಬಂಗಲೆಯನ್ನು ಖರೀದಿಸಲು ಕಾರಣ ಇದೆ. ಈ ವರ್ಷ ಇದೇ ಪಾಮ್ ಜುಮೇರಾ ದ್ವೀಪದಲ್ಲಿ ತಮ್ಮ ಕಿರಿಯ ಮಗ ಅನಂತ್ ಅಂಬಾನಿಗೆ 80 ಮಿಲಿಯನ್ ಡಾಲರ್ ಹಣದಿಂದ ಭವ್ಯ ಮನೆಯೊಂದನ್ನು ಖರೀದಿಸಿದ್ದರು. ಆ ಮನೆಗೆ ಅತೀ ಸಮೀಪವೇ ಹೊಸ ಮ್ಯಾನ್ಷನ್ ಇದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, 83ಕ್ಕೆ ಇಳಿಕೆಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, 83ಕ್ಕೆ ಇಳಿಕೆ

ದುಬೈನಲ್ಲಿ ಮುಕೇಶ್ ಅಂಬಾನಿ ಆಸ್ತಿ ಖರೀದಿಗೆ ಹೆಚ್ಚು ಗಮನ ಹರಿಸುತ್ತಿರುವಂತೆ ತೋರುತ್ತಿದೆ. ಕಳೆದ ವರ್ಷ ರಿಲಾಯನ್ಸ್ ಸಂಸ್ಥೆ ದುಬೈನಲ್ಲಿ ಸ್ಟೋಕ್ ಪಾರ್ಕ್ ಎಂಬ ಕಂಟ್ರಿ ಕ್ಲಬ್ ಅನ್ನು 79 ಮಿಲಿಯನ್ ಡಾಲರ್ (656 ಕೋಟಿ ರೂಪಾಯಿ) ಹಣ ತೆತ್ತು ಖರೀದಿ ಮಾಡಿತ್ತು.

ವಿದೇಶಿಗರೇ ಹೆಚ್ಚಿರುವ ಯುಎಇ

ವಿದೇಶಿಗರೇ ಹೆಚ್ಚಿರುವ ಯುಎಇ

ಕೇವಲ ಮುಕೇಶ್ ಅಂಬಾನಿ ಮಾತ್ರವಲ್ಲ ವಿಶ್ವದ ಅತ್ಯಂತ ಪ್ರಭಾವಿ ಉದ್ಯಮಿಗಳು ಯುಎಇಯ ನಗರಗಳಲ್ಲಿ ಆಸ್ತಿ ಖರೀದಿಸಲು ಮುಂದಾಗಿದ್ದಾರೆ. ಕುತೂಹಲವೆಂದರೆ ಇಸ್ಲಾಮಿಕ್ ದೇಶವಾಗಿರುವ ಯುಎಇಯಲ್ಲಿ ಶೇ. 80ರಷ್ಟು ಜನಸಂಖ್ಯೆ ವಿದೇಶಿಗರದ್ದೇ ಇದೆ. ಅಲ್ಲಿನ ಆರ್ಥಿಕತೆ ನಿಂತಿರುವುದೇ ವಿದೇಶಿಗರ ಕೈಯಲ್ಲಿ ಎಂಬಂತಿದೆ. ಭಾರತ, ಪಾಕಿಸ್ತಾನ ಮೂಲದವರು ಬಹಳ ಸಂಖ್ಯೆಯಲ್ಲಿದ್ದಾರೆ.

ದುಬೈನಲ್ಲಿ ಅತಿ ಹೆಚ್ಚು ಆಸ್ತಿ ಖರೀದಿಸುವ ಸಮುದಾಯಗಳಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಯುಎಇಯಲ್ಲೀಗ ಭೂಮಿ ಬೆಲೆ ಬಂಗಾರದಂತಾಗಿದೆ. ಕಳೆದ ವರ್ಷದಿಂದೀಚೆ ಅಲ್ಲಿ ಭೂಮಿ ಬೆಲೆ ಶೇ. 70ಕ್ಕಿಂತ ಹೆಚ್ಚಾಗಿದೆ. ಯುಎಇಯಲ್ಲಿ ದುಬೈ, ಶಾರ್ಜಾ ಮತ್ತು ಅಬುಧಾಬಿ ನಗರಗಳಿವೆ. ಎಲ್ಲವೂ ಕೂಡ ವಿಶ್ವದ ಪ್ರತಿಷ್ಠಿತ ಉದ್ಯಮಿ ಮತ್ತು ಗಣ್ಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

 

18 ಬಾತ್‌ರೂಮುಗಳಿರುವ ಭವ್ಯ ಮನೆ

18 ಬಾತ್‌ರೂಮುಗಳಿರುವ ಭವ್ಯ ಮನೆ

ಅನಂತ್ ಅಂಬಾನಿ ಅವರಿಗೆ ಖರೀದಿಸಲಾದ ಮನೆ ಹೊಸ ದಾಖಲೆ ಬರೆದಿದೆ. 80 ಮಿಲಿಯನ್ ಡಾಲರ್, ಅಂದರೆ 665 ಕೋಟಿ ರೂಪಾಯಿ ಮೌಲ್ಯದ ಈ ಕೆಸಾ ಡೆಲ್ ಸೋಲ್ ಬಂಗಲೆಯಲ್ಲಿ 8 ಬೆಡ್‌ರೂಮು, 18 ಬಾತ್‌ರೂಮು, ಜಿಮ್, ಮೂವಿ ಥಿಯೇಟರ್, ಬೌಲಿಂಗ್ ಆಲೀ, ಜಾಕುಜ್ಜಿ ಇವೆ. ಜಾಕುಜಿಯನ್ನು ಮಿನಿ ಸ್ವಿಮಿಂಗ್ ಪೂಲ್ ಎನ್ನಬಹುದು ಅಥವಾ ಬೃಹತ್ ಬಾತ್ ಟಬ್ ಎನ್ನಬಹುದು. ಈ ಐಷಾರಾಮಿ ಮನೆಯ ಬೇಸ್ಮೆಂಟ್‌ನಲ್ಲಿ 15 ಕಾರುಗಳನ್ನು ಪಾರ್ಕ್ ಮಾಡುವಷ್ಟು ಸ್ಥಳಾವಕಾಶ ಇದೆ.

80 ಮಿಲಿಯನ್ ಡಾಲರ್‌ಗೆ ಈ ಮನೆ ಮಾರಾಟವಾಗಿದ್ದು ದಾಖಲೆಯೇ ಆಗಿತ್ತು. ಆದರೆ, ಅದೇ ಪಾಮ್ ಜುಮೇರಾ ಐಲ್ಯಾಂಡ್‌ನಲ್ಲಿ ಇನ್ನೊಂದು ಮನೆ 82 ಮಿಲಿಯನ್ ಡಾಲರ್‌ಗೆ ಮಾರಾಟವಾಗುವವರೆಗೂ ಅನಂತ್ ಅಂಬಾನಿ ಮನೆ ದಾಖಲೆ ಬರೆದಿತ್ತು.

 

ದುಬೈ ಆಡಳಿತದ ಸ್ಪಷ್ಟನೆ

ದುಬೈ ಆಡಳಿತದ ಸ್ಪಷ್ಟನೆ

ಇದಾದ ಬಳಿಕ ಮುಕೇಶ್ ಅಂಬಾನಿ ಐಷಾರಾಮಿ ಮ್ಯಾನ್ಷನ್ ಅನ್ನು 163 ಮಿಲಿಯನ್ ಡಾಲರ್‌ಗೆ (1439 ಕೋಟಿ ರೂಪಾಯಿ) ಖರೀದಿಸಿರುವ ಸುದ್ದಿ ಬಂದಿದೆ. ಆದರೆ, ದುಬೈನ ಆಡಳಿತದಿಂದ ಇನ್ನೂ ದೃಢಪಟ್ಟಿಲ್ಲ. ಈ ಮ್ಯಾನ್ಷನ್ ಮಾರಾಟವಾಗಿರುವುದು ನಿಜವೆಂದು ದುಬೈ ಆಡಳಿತ ಹೇಳಿದೆಯಾದರೂ, ಯಾರು ಖರೀದಿ ಮಾಡಿದ್ದಾರೆಂದು ಸ್ಪಷ್ಟಪಡಿಸಿಲ್ಲ.

ಇನ್ನು, ಈ ಮ್ಯಾನ್ಷನ್ ಅನ್ನು ಮಾರಿದ ಕುವೈತ್ ಉದ್ಯಮಿ ಮೊಹಮ್ಮದ್ ಅಲ್‌ಶಾಯ ದುಬೈನಲ್ಲಿ ಹಲವು ವ್ಯವಹಾರಗಳನ್ನು ಹೊಂದಿದ್ದಾರೆ. ಸ್ಟಾರ್‌ಬಕ್ಸ್, ಹೆಚ್ ಅಂಡ್ ಎಂ ಮತ್ತು ವಿಕ್ಟೋರಿಯಾಸ್ ಸೀಕ್ರೆಟ್ ಇತ್ಯಾದಿ ರೀಟೇಲ್ ಬ್ರ್ಯಾಂಡ್ ಕಂಪನಿಗಳ ಹಲವು ಫ್ರಾಂಚೈಸಿಗಳನ್ನು ಈ ಕುಟುಂಬದವರು ದುಬೈನಲ್ಲಿ ಹೊಂದಿದ್ದಾರೆ.

 

English summary

Mukesh Ambani Buys Mansion at Palm Jumeirah Island in Dubai, His Third Purchase Recently

Reliance Industries chairman Mukesh Ambani has bought a lavish mansion for a whopping price at Dubai's Palm Jumeirah island.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X