For Quick Alerts
ALLOW NOTIFICATIONS  
For Daily Alerts

ವಿಶ್ವದ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್: ಆಸ್ತಿ 4,90,960 ಕೋಟಿ ರು.‬

|

ರಿಲಯನ್ಸ್ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಅಧ್ಯಕ್ಷ ಮುಕೇಶ್ ಅಂಬಾನಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಬಂದಿದ್ದಾರೆ. ಇದು ಫೋರ್ಬ್ಸ್ ನವರ ರಿಯಲ್ ಟೈಮ್ (ತಕ್ಷಣದ ಬದಲಾವಣೆಗಳ ಅನುಸಾರ) ಬಿಲಿಯನೇರ್ ಗಳ ಪಟ್ಟಿಯಲ್ಲಿ ಅವರ ಸ್ಥಾನ. ಮುಕೇಶ್ ನಿವ್ವಳ ಆಸ್ತಿ ಮೌಲ್ಯ 6,460 ಕೋಟಿ ಅಮೆರಿಕನ್ ಡಾಲರ್ ಆಗಿದೆ.

ಅದು ಹೇಗೆಂದರೆ, ಶುಕ್ರವಾರದಂದು (ಜೂನ್ 19, 2020) ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ನಿಂತಿದೆ. ದಿನದ ಕೊನೆಗೆ 1759.40 ರುಪಾಯಿಗೆ ವಹಿವಾಟು ಮುಗಿಸಿದೆ. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಸಾಲಮುಕ್ತ ಕಂಪೆನಿ ಹಾಗೂ ಭಾರತದಲ್ಲಿ 11.52 ಲಕ್ಷ ಕೋಟಿ ಮೌಲ್ಯದ ಮೊದಲ ಕಂಪೆನಿ ಎಂಬ ಶ್ರೇಯಕ್ಕೂ ಪಾತ್ರವಾಗಿದೆ.

ಮಾರ್ಕೆಟ್ ಮೌಲ್ಯ 11 ಲಕ್ಷ ಕೋಟಿ ರು. ತಲುಪಿದ ರಿಲಯನ್ಸ್ ನಿಂದ ದಾಖಲೆಮಾರ್ಕೆಟ್ ಮೌಲ್ಯ 11 ಲಕ್ಷ ಕೋಟಿ ರು. ತಲುಪಿದ ರಿಲಯನ್ಸ್ ನಿಂದ ದಾಖಲೆ

ಅಷ್ಟೇ ಅಲ್ಲ, ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಇಂಧನ ಕಂಪೆನಿ ಎಂದೆನಿಸಿಕೊಂಡು, ಅದರ ಸ್ಟ್ರಾಟೆಜಿಕ್ ಪಾರ್ಟನರ್ ಬ್ರಿಟಿಷ್ ಪೆಟ್ರೋಲಿಯಂ ಮಾರುಕಟ್ಟೆ ಬಂಡವಾಳ ಮೌಲ್ಯವನ್ನೂ ದಾಟಿದೆ. ಫೋರ್ಬ್ಸ್ ನ ರಿಯಲ್ ಟೈಮ್ ಬಿಲಿಯನೇರ್ ಪ್ರತಿ ದಿನವೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿನ ಏರಿಳಿತ ದಾಖಲಿಸುತ್ತದೆ.

ವಿಶ್ವ ಟಾಪ್ 10 ಶ್ರೀಮಂತ ಪಟ್ಟಿಯಲ್ಲಿ ಮುಕೇಶ್: ಆಸ್ತಿ 4,90,960 ಕೋಟಿ

ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ 16,040 ಕೋಟಿ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಬಿಲ್ ಗೇಟ್ಸ್ 10,990 ಕೋಟಿ USDಯೊಂದಿಗೆ ಆ ನಂತರದ ಸ್ಥಾನದಲ್ಲಿ ಇದ್ದಾರೆ. ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ 6480 ಕೋಟಿ USD ನಿವ್ವಳ ಆಸ್ತಿಯೊಂದಿಗೆ ಮುಕೇಶ್ ಅಂಬಾನಿಗಿಂತ ಒಂದು ಸ್ಥಾನ ಮೇಲಕ್ಕೆ ಇದ್ದಾರೆ.

English summary

Mukesh Ambani In World's Top 10 Rich List Of Forbes Real Time Billionaires

Reliance Industries chairman and MD Mukesh Ambani in world's top 10 rich list of Forbes real time billionaires.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X