For Quick Alerts
ALLOW NOTIFICATIONS  
For Daily Alerts

ಕೊರೊನಾ ಕಾಟ: ಮುಕೇಶ್ ಅಂಬಾನಿಗೆ 36,092 ಕೋಟಿ ರುಪಾಯಿ ನಷ್ಟ

|

ಕೊರೊನಾವೈರಸ್ ಹರಡುವಿಕೆಯು ವಿಶ್ವದ ಆರ್ಥಿಕತೆಯ ಜೊತೆಗೆ ಷೇರು ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಜೊತೆಗೆ ಭಾರತದ ಶತಕೋಟ್ಯಧಿಪತಿಗಳ ಸಂಪತ್ತು ಕರಗಲು ದಾರಿ ಮಾಡಿಕೊಟ್ಟಿದೆ.

ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯ 5 ಬಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 36,092 ಕೋಟಿ) ಮಾರುಕಟ್ಟೆ ಬಂಡವಾಳ ಮೌಲ್ಯವು ಕಳೆದ ಹದಿನೈದು ದಿನದಲ್ಲಿ ಕುಸಿತಗೊಂಡಿದೆ.

ರಿಲಯನ್ಸ್‌ಗೆ 53,706 ಕೋಟಿ ನಷ್ಟ

ರಿಲಯನ್ಸ್‌ಗೆ 53,706 ಕೋಟಿ ನಷ್ಟ

ಕೊರೊನಾವೈರಸ್‌ ನಿಂದಾಗಿ ಅತಿ ಹೆಚ್ಚು ನಷ್ಟ ಅನುಭವಿಸಿರುವ ಸಂಸ್ಥೆ ರಿಲಯನ್ಸ್ ಆಗಿದೆ. ಷೇರುಗಳ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿರುವ ಸಂಸ್ಥೆ ರಿಲಯನ್ಸ್ ಆಗಿದ್ದು ಭಾರೀ ಹೊಡೆತ ತಿಂದಿದೆ.

ಫೆಬ್ರವರಿ 13 ರಿಂದ ಫೆಬ್ರವರಿ 27 ರ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 53,706 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಶುಕ್ರವಾರ (ಫೆಬ್ರವರಿ 28) ಸೆನ್ಸೆಕ್ಸ್‌ 1,448.37 ಅಂಶಗಳು ಕುಸಿತ ಕಂಡಿದ್ದು, ರಿಲಯನ್‌ ಇಂಡಸ್ಟ್ರೀಸ್ ಷೇರುಗಳು 4.27 ಪರ್ಸೆಂಟ್ ಇಳಿಕೆಗೊಂಡಿದೆ.

 

ಆದಿತ್ಯಾ ಬಿರ್ಲಾ ಗ್ರೂಪ್‌ನ  884 ದಶಲಕ್ಷ ಡಾಲರ್ ಮಟಾಶ್

ಆದಿತ್ಯಾ ಬಿರ್ಲಾ ಗ್ರೂಪ್‌ನ 884 ದಶಲಕ್ಷ ಡಾಲರ್ ಮಟಾಶ್

ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ 884 ದಶಲಕ್ಷದಷ್ಟು ನಷ್ಟ ಅನುಭವಿಸಿದ್ದಾರೆ. ಐಟಿ ಉದ್ಯಮಿ ಅಜಿಮ್ ಪ್ರೇಮ್‌ಜಿಯ ಸಂಪತ್ತು 869 ಮಿಲಿಯನ್ ಡಾಲರ್ ಸಂಪತ್ತು ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿಯವರು ಕೇವಲ ಎರಡು ತಿಂಗಳಲ್ಲಿ 496 ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದ್ದಾರೆ.

ಟಾಟಾ ಕಂಪನಿಗೆ 41,930 ಕೋಟಿ ನಷ್ಟ

ಟಾಟಾ ಕಂಪನಿಗೆ 41,930 ಕೋಟಿ ನಷ್ಟ

ಕೊರೊನಾವೈರಸ್‌ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿರುವುದರಿಂದ ಟಾಟಾ ಸಂಸ್ಥೆಗೂ ಭಾರೀ ನಷ್ಟವುಂಟಾಗಿದೆ. ದೇಶದ ಬಹುದೊಡ್ಡ ಉದ್ಯಮ ಸಂಸ್ಥೆಯಾದ ಟಾಟಾ ಸಂಸ್ಥೆಗೆ 41,930.18 ಕೋಟಿ ಮಾರುಕಟ್ಟೆಯ ಬಂಡವಾಳ ಮೌಲ್ಯವು ಕುಸಿತ ಕಂಡಿದೆ. ಕಂಪನಿಯ 21ಕ್ಕೂ ಹೆಚ್ಚು ಷೇರುಗಳು ಕುಸಿತ ಕಂಡಿವೆ.

ಆಟೋಮೋಟಿವ್ ಸ್ಟ್ಯಾಂಪಿಂಗ್ಸ್ ಮತ್ತು ಅಸೆಂಬ್ಲಿಗಳು ಮತ್ತು ಟಾಟಾ ಟೆಲಿ ಸರ್ವಿಸ್ ತಲಾ 25 ಪರ್ಸೆಂಟ್ ರಷ್ಟು ಕುಸಿದಿದೆ. ಟಾಟಾ ಮೋಟಾರ್ಸ್ ಮತ್ತು ಟಾಟಾ ಎಲ್ಕ್ಸಿ ಕ್ರಮವಾಗಿ 15 ಮತ್ತು 12 ಪರ್ಸೆಂಟ್ ಕುಸಿದಿವೆ.

 

ಅದಾನಿ, ವಾಡಿಯಾಗೂ ತಗ್ಗಲಿಲ್ಲ ನಷ್ಟದ ಪ್ರಮಾಣ

ಅದಾನಿ, ವಾಡಿಯಾಗೂ ತಗ್ಗಲಿಲ್ಲ ನಷ್ಟದ ಪ್ರಮಾಣ

ರಿಲಯನ್ಸ್, ಟಾಟಾ , ಬಿರ್ಲಾ ಸಮೂಹಕ್ಕೆ ಭಾರೀ ನಷ್ಟದ ಜೊತೆಗೆ ಅದಾನಿ, ವಾಡಿಯಾಗೂ ನಷ್ಟ ತಪ್ಪಿಲ್ಲ. ಅದಾನಿ ಗ್ರೂಪ್‌ಗೆ 27,101 ಕೋಟಿ ರುಪಾಯಿ ನಷ್ಟವುಂಟಾಗಿದೆ. ವಾಡಿಯಾಗೆ 3,272.30 ಕೋಟಿ, ಇಂಡಿಯಾ ಬುಲ್ಸ್‌ಗೆ 391.09 ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯ ಕುಸಿತ ಕಂಡಿದೆ.

English summary

Mukesh Ambani Loses 5 Billion Dollar

Reliance Industries’ Chairman Mukesh Ambani, has lost some 5 billion dollar of his wealth. because coronavirus hit
Story first published: Friday, February 28, 2020, 18:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X