For Quick Alerts
ALLOW NOTIFICATIONS  
For Daily Alerts

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬಫೆಟ್ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ

|

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಗೆ 2020ನೇ ಇಸವಿ ಬಹಳ ವಿಚಿತ್ರವಾದ ವರ್ಷ. ಅವರ ಸಂಪತ್ತು ಇಳಿಕೆ ಕಂಡು, ಏಕಾಏಕಿ ಭರ್ಜರಿ ಏರಿಕೆ ಕಾಣುತ್ತಾ ಸಾಗಿದೆ. ಇದೀಗ ಹೊಸ ದಾಖಲೆ ಬರೆದಿದ್ದಾರೆ ಮುಕೇಶ್. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ವಾರೆನ್ ಬಫೆಟ್ ರನ್ನು ಹಿಂದಿಕ್ಕಿ, ಗುರುವಾರ ಮೇಲಕ್ಕೆ ಏರಿದ್ದಾರೆ. ಸದ್ಯಕ್ಕೆ ಮುಕೇಶ್ ಆಸ್ತಿ 6830 ಕೋಟಿ USD ಆಗಿದೆ. ಬಫೆಟ್ ನಿವ್ವಳ ಆಸ್ತಿ 6790 ಕೋಟಿ USD ಇದೆ.

 

ಬ್ಲೂಮ್ ಬರ್ಗ್ ಶತಕೋಟ್ಯಧಿಪತಿ ಸೂಚ್ಯಂಕದಿಂದ ಗೊತ್ತಾಗಿರುವ ಸಂಗತಿ ಇದು. ಕಳೆದ ಮಾರ್ಚ್ ನಲ್ಲಿ ಕನಿಷ್ಠ ಮಟ್ಟ ಮುಟ್ಟಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಮೂರು ತಿಂಗಳಲ್ಲಿ ದುಪ್ಪಟ್ಟು ಆಗಿದೆ. ಫೇಸ್ ಬುಕ್ ಸೇರಿದಂತೆ ಜಾಗತಿಕ ಕಂಪೆನಿಗಳಿಂದ 1500 ಕೋಟಿ ಯುಎಸ್ ಡಿ ರಿಲಯನ್ಸ್ ಜಿಯೋಗಾಗಿ ಹೂಡಿಕೆ ಬಂದಿದೆ. ಈ ವಾರ ಬ್ರಿಟಿಷ್ ಪೆಟ್ರೋಲಿಯಂ 100 ಕೋಟಿ ಡಾಲರ್ ಅನ್ನು ರಿಲಯನ್ಸ್ ತೈಲ- ಚಿಲ್ಲರೆ ವ್ಯವಹಾರದ ಪಾಲಿಗಾಗಿ ನೀಡಿದೆ.

 

2.9 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದೇಣಿಗೆ ನೀಡಿದ ವಾರೆನ್ ಬಫೆಟ್2.9 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದೇಣಿಗೆ ನೀಡಿದ ವಾರೆನ್ ಬಫೆಟ್

ಮುಕೇಶ್ ಅಂಬಾನಿ ಆಸ್ತಿ ಪ್ರಮಾಣ ಅದ್ಯಾವ ಪರಿ ಹೆಚ್ಚಳ ಆಗಿದೆ ಅಂದರೆ, ಕಳೆದ ತಿಂಗಳು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡರು. ಈ ವಾರ 2.9 ಬಿಲಿಯನ್ ಯುಎಸ್ ಡಿ ದೇಣಿಗೆಯಾಗಿ ನೀಡಿದ ಮೇಲೆ ವಾರೆನ್ ಬಫೆಟ್ ಸಂಪತ್ತಿನ ಪ್ರಮಾಣ ಕಡಿಮೆ ಆಗಿದೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬಫೆಟ್ ಹಿಂದಿಕ್ಕಿದ ಮುಕೇಶ್ ಅಂಬಾನಿ

2006ರಿಂದ ಈಚೆಗೆ 3700 ಕೋಟಿ ಡಾಲರ್ ಗೂ ಹೆಚ್ಚಿನ ಮೌಲ್ಯದ ಬರ್ಕ್ ಶೈರ್ ಹಾಥ್ ವೇ ಷೇರುಗಳನ್ನು ದೇಣಿಗೆ ನೀಡಿದ್ದಾರೆ ವಾರೆನ್ ಬಫೆಟ್. 63 ವರ್ಷದ ಮುಕೇಶ್ ಅಂಬಾನಿ ಈಗ ವಿಶ್ವದ ಎಂಟನೇ ಶ್ರೀಮಂತ. ಬಫೆಟ್ ಒಂಬತ್ತನೇ ಸ್ಥಾನದಲ್ಲಿ ಇದ್ದಾರೆ.

English summary

Mukesh Ambani Surpasses Warren Buffet In Top 10 World's Richest List

Reliance Industries chairman Mukesh Ambani surpasses Warren Buffett in Bloomberg billionaire's top 10 list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X