For Quick Alerts
ALLOW NOTIFICATIONS  
For Daily Alerts

ದೇಶದ ರೆಸಿಡೆನ್ಶಿಯಲ್‌ ರಿಯಲ್‌ ಎಸ್ಟೇಟ್‌ ಚೇತರಿಕೆಗೆ ಬೆಂಗಳೂರು, ಮುಂಬೈ, ಹೈದರಾಬಾದ್‌ ಬುನಾದಿ

|

ಸುಮಾರು 15 ವರ್ಷಗಳ ಬಳಿಕ ಹೋಮ್‌ ಲೋನ್ ‌ಬಡ್ಡಿ ದರವನ್ನು ಇಳಿಕೆ ಮಾಡಿದ ಬಳಿಕ ಈಗ ಭಾರತದಲ್ಲಿ ರೆಸಿಡೆನ್ಶಿಯಲ್‌ ರಿಯಲ್‌ ಎಸ್ಟೇಟ್‌ ಕ್ಷೇತ್ರವು ಕೊಂಚ ಸುಧಾರಿಸಿಕೊಳ್ಳುತ್ತಿದೆ. ಮುಂದಿನ ವರ್ಷ 2022 ರಲ್ಲಿ ಬೆಂಗಳೂರು ಹಾಗೂ ಹೈದರಾಬಾದ್‌ ಈ ಸುಧಾರಿಸಿಕೊಳ್ಳುತ್ತಿರುವ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಬುನಾದಿ ಆಗಲಿದೆ. Housing.com. ಪ್ರಕಾರ ರಿಯಲ್‌ ಎಸ್ಟೇಟ್‌ ಕ್ಷೇತ್ರವು 2022 ರಲ್ಲಿ ಹೆಚ್ಚು ಸುಧಾರಿಸಿಕೊಳ್ಳಲಿದೆ.

 

ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ಬಳಿಕ ಮನೆಯನ್ನು ಖರೀದಿ ಮಾಡುವವರ ಸಂಖ್ಯೆಯು ಮುಖ್ಯವಾಗಿ ಸೂರತ್‌, ಜೈಪುರ ಹಾಗೂ ಪಾಟ್ನಾದಲ್ಲಿ ಅಧಿಕವಾಗಿದೆ. 2021 ರಲ್ಲಿ ಈ ನಗರಗಳಲ್ಲಿ ಆನ್‌ಲೈನ್‌ ಮೂಲಕ ಪ್ರಾಪಟಿ ಸರ್ಚ್ ಅಧಿಕವಾಗಿತ್ತು. ಆ ಬಳಿಕ ಈಗ ಈ ಪ್ರದೇಶದಲ್ಲಿ ಮನೆಯನ್ನು ಖರೀದಿ ಮಾಡುವವರ ಸಂಖ್ಯೆಯು ಕೂಡಾ ಅಧಿಕವಾಗಿದೆ. ಇನ್ನು ಸೂರತ್‌, ಜೈಪುರ, ಪಾಟ್ನಾ, ಮೊಹಾಲಿ, ಲಕ್ನೋ ಹಾಗೂ ಕೊಯಮತ್ತೂರಿನಲ್ಲಿ ವಸತಿಗಳ ಬೇಡಿಕೆಯು ಅಧಿಕವಾಗಿದೆ.

 

Housing.com ನ ಪ್ರಕಾರ ಮುಂದಿನ ಹೊಸ ವರ್ಷದಲ್ಲಿ ಸಿಡೆನ್ಶಿಯಲ್‌ ರಿಯಲ್‌ ಎಸ್ಟೇಟ್‌ ಕ್ಷೇತ್ರವು ಸುಧಾರಿಸಿಕೊಳ್ಳಲಿದ್ದು, ಈ ಸುಧಾರಣೆಗೆ ಪ್ರಮುಖವಾಗಿ ಬೆಂಗಳೂರು, ಮುಂಬೈ, ಹೈದರಾಬಾದ್‌ ಹೆಚ್ಚು ಕೊಡುಗೆ ನೀಡಲಿದೆ. ಇನ್ನು Housing.com ನ ಸೂಚ್ಯಂಕದ ಪ್ರಕಾರ ಭಾರತದ ಸುಮಾರು 42 ನಗರಗಳಲ್ಲಿ ವಸತಿಯ ಬೇಡಿಕೆಯು ಅಧಿಕವಾಗಿದೆ.

ದೇಶದ ರಿಯಲ್‌ ಎಸ್ಟೇಟ್‌ ಚೇತರಿಕೆಗೆ ಈ ರಾಜ್ಯಗಳು ಬುನಾದಿ

"2021 ವಸತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಗೆ ಸಾಕ್ಷಿಯಾಗಿದೆ. 2022 ರಲ್ಲಿಯೂ ಈ ಬೆಳವಣಿಗೆಯು ಮುಂದುವರಿಯಲಿದೆ ಎಂದು ನಾವು ನಂಬಿದ್ದೇವೆ. ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್‌ ವಿರುದ್ಧವಾಗಿ ಹೋರಾಟ ನಡೆಸುತ್ತಲೇ ಭಾರತದಲ್ಲಿ ಈ ಬೆಳವಣಿಗೆ ಕಾಣಲಿದೆ," ಎಂದು Housing.com. ನ ಸಿಇಒ ಧ್ರುವ್‌ ಅಗರ್ವಾಲ್‌ ತಿಳಿಸಿದ್ದಾರೆ.

ಇನ್ನು 2022 ರಲ್ಲಿ ದೊಡ್ಡ ಮನೆಗಳಿಗೆ ಅಧಿಕ ಬೇಡಿಕೆ ಇರಬಹುದು ಎಂದು ಕೂಡಾ ಈ ಸೂಚ್ಯಂಕವು ಹೇಳುತ್ತದೆ. ಇನ್ನು 2021 ರಲ್ಲಿ ಮೂರು ಕೋಣೆಗಳ ಮನೆಗಾಗಿ ಅಥವಾ ಅಪಾರ್ಟ್‌ಮೆಂಟ್‌ಗಳಿಗಾಗಿ ಜನರು ಅಧಿಕವಾಗಿ ಆನ್‌ಲೈನ್‌ ಮೂಲಕ ಹುಡುಕಿದ್ದಾರೆ ಎಂದು ಕೂಡಾ ಡೇಟಾವು ಉಲ್ಲೇಖ ಮಾಡಿದೆ.

ಈ ಮೂರು ಮೆಟ್ರೋ ನಗರಗಳಲ್ಲಿ ವಸತಿ ಬೇಡಿಕೆ ಹೆಚ್ಚಳ

"ಮೂರು ಮೆಟ್ರೋ ನಗರಗಳಾದ ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ 2022 ರಲ್ಲಿ ವಸತಿ ಬೇಡಿಕೆ ಅಧಿಕವಾಗಲಿದೆ. ಇನ್ನು ಸೂರತ್‌, ಜೈಪುರ, ಪಾಟ್ನಾ, ಮೊಹಾಲಿ, ಲಕ್ನೋ ಹಾಗೂ ಕೊಯಮತ್ತೂರಿನಲ್ಲಿ ವಸತಿಗಳ ಬೇಡಿಕೆಯು ಅಧಿಕವಾಗಿದೆ ಎಂಬುವುದು ಕೂಡಾ ತಿಳಿದು ಬಂದಿದೆ. ಇನ್ನು ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಹೆಚ್ಚಿನ ಜನರು ದೊಡ್ಡದಾದ ಮನೆಯನ್ನು ಖರೀದಿ ಮಾಡಲು ಆಧ್ಯತೆ ನೀಡುತ್ತಿದ್ದಾರೆ. ಹಾಗೆಯೇ ಆರೋಗ್ಯ ವ್ಯವಸ್ಥೆ, ಸುರಕ್ಷತೆ ಹಾಗೂ ವಿಸ್ತಾರವಾದ ಪ್ರದೇಶ ಇದ್ದ ಕಡೆಯಲ್ಲಿ ಮನೆಯನ್ನು ಖರೀದಿ ಮಾಡುವುದಕ್ಕೆ ಈಗ ಅಧಿಕ ಬೇಡಿಕೆ ಇದೆ," ಎಂದು Housing.com. ನ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಅಂಕಿತಾ ಸೂದ್‌ ತಿಳಿಸಿದ್ದಾರೆ.

ಯೋಜನೆ ವಿಳಂಬ ಮೊದಲಾದ ವಿಚಾರದಲ್ಲಿ ಎನ್‌ಸಿಆರ್‌ (ನ್ಯಾಷನಲ್‌ ಕ್ಯಾಪಿಟಲ್‌ ರೀಜಿನಲ್‌) ಬಗ್ಗೆ ನೆಗೆಟಿವ್‌ ಪ್ರಚಾರ ಆಗುತ್ತಿದ್ದರೂ ಕೂಡಾ, ನೋಯ್ಡಾದಲ್ಲಿ ಗೃಹ ಖರೀದಿದಾರರ ಸಂಖ್ಯೆಯು ಅಧಿಕ ಆಗುತ್ತಿದೆ. ಇನ್ನು ಹೊಸ ವರ್ಷ 2022 ರಲ್ಲಿ ಮುಂಬೈ, ಬೆಂಗಳೂರು ಹಾಗೂ ದೆಹಲಿಯು ಒಂದು ಸ್ಥಿರವಾದ ಹಾದಿಯಲ್ಲಿ ಸಾಗಲಿದೆ ಎಂದು ಸೂಚ್ಯಂಕವು ಹೇಳಿದೆ. ಬಾಡಿಗೆ ಮನೆಯ ವಿಚಾರದಲ್ಲಿ ನೋಡುವುದಾದರೆ ಈ ಮೂರು ನಗರಗಳಲ್ಲಿ ಅಧಿಕವಾಗಿ ಬಾಡಿಗೆ ಮನೆಗಾಗಿ ಆನ್‌ಲೈನ್‌ ಮೂಲಕ ಸರ್ಚ್ ಮಾಡಲಾಗಿದೆ.

English summary

Mumbai, Bengaluru and Hyderabad to lead India’s residential real estate recovery in 2022

Mumbai, Bengaluru and Hyderabad to lead India’s residential real estate recovery in 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X