For Quick Alerts
ALLOW NOTIFICATIONS  
For Daily Alerts

ಮುತ್ತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ ಜಾರ್ಜ್‌ ಮುತ್ತೂಟ್ ವಿಧಿವಶ

|

ಮುತ್ತೂಟ್‌ ಗ್ರೂಪ್ ಅಧ್ಯಕ್ಷರಾಗಿದ್ದ ಎಂ.ಜಿ ಜಾರ್ಜ್ ಮುತ್ತೂಟ್‌ ಶುಕ್ರವಾರ ದೆಹಲಿಯಲ್ಲಿ ಇಹಲೋಹ ತ್ಯಜಿಸಿದ್ದಾರೆ. 72 ವಯಸ್ಸಿನ ಎಂ.ಜಿ ಜಾರ್ಜ್ ಮುತ್ತೂಟ್‌ ವಿಧಿವಶರಾಗಿದ್ದಾರೆ ಎಂದು ಕಂಪನಿಯು ರೆಗ್ಯೂಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.

ಮುತ್ತೂಟ್ ಫೈನಾನ್ಸ್ ಭಾರತದ ಅತಿದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕೇತರ ಹಣಕಾಸು(ಎನ್‌ಬಿಎಫ್‌ಸಿ) ಕಂಪನಿ ಆಗಿದೆ. ಇದರ ಪ್ರಧಾನ ಕಚೇರಿ ಕೊಚ್ಚಿಯಲ್ಲಿದ್ದು, ಎಂ.ಜಿ ಜಾರ್ಜ್ ಅವರು ತಮ್ಮ ಕುಟುಂಬದಿಂದ ಮುತ್ತೂಟ್ ಗ್ರೂಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೂರನೇ ತಲೆಮಾರಿನವರಾಗಿದ್ದಾರೆ.

ಮುತ್ತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ ಜಾರ್ಜ್‌ ಮುತ್ತೂಟ್ ವಿಧಿವಶ

 

ಇವರು ದೀರ್ಘಕಾಲದಿಂದ ದೆಹಲಿಯಲ್ಲಿ ನೆಲೆಸಿದ್ದು, ಚಿನ್ನದ ಸಾಲ, ರಿಯಾಲ್ಟಿ ಎಸ್ಟೇಟ್ ನಿಂದ ಮೂಲಸೌಕರ್ಯ, ಆಸ್ಪತ್ರೆಯಿಂದ ಆತಿಥ್ಯ ಮತ್ತು ಶಿಕ್ಷಣದವರೆಗೆ 20 ಕ್ಕೂ ಹೆಚ್ಚು ವ್ಯವಹಾರಗಳನ್ನು ನಡೆಸುತ್ತಿದ್ದರು.

ಎಂ.ಜಿ ಜಾರ್ಜ್ ಮುತ್ತೂಟ್‌ ಗ್ರೂಪ್ ಅಷ್ಟೇ ಅಲ್ಲದೆ ,ಭಾರತೀಯ ಆರ್ಥೊಡಾಕ್ಸ್ ಚರ್ಚ್‌ನ ಟ್ರಸ್ಟಿಯಾಗಿದ್ದರು ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (ಎಫ್‌ಐಸಿಸಿಐ) ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಜೊತೆಗೆ ಎಫ್‌ಐಸಿಸಿಐ ಕೇರಳ ರಾಜ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು.

Read more about: finance news nbfc
English summary

Muthoot Finance Chairman MG George Passes Away At 71

Muthoot Group Chairman MG George Muthoot passed away in New Delhi on Friday evening, the company said in a regulatory filing. He was 72.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X