ಲಾಕ್ ಡೌನ್ ಅವಧಿಯಲ್ಲಿ ಮ್ಯೂಚುವಲ್ ಫಂಡ್ ಗಳು 1,230 ಕೋಟಿ ರುಪಾಯಿಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿವೆ. ತಜ್ಞರು ಹೇಳುವ ಪ್ರಕಾರ, ಮ್ಯೂಚುವಲ್ ಫಂಡ್ ಗಳು ಅತ್ಯುತ್ತಮ 'ಎಂಟ್ರಿ ಪಾಯಿಂಟ್'ಗಳನ್ನು ಎದುರು ನೋಡುತ್ತಿವೆ. ನಗದು ಮೊತ್ತವನ್ನು ಇಟ್ಟುಕೊಂಡು, ಅವಕಾಶಕ್ಕಾಗಿ ಕಾಯುತ್ತಿವೆ.
ಮುಂದಿನ ದಿನಗಳಲ್ಲಿ ಹೂಡಿಕೆದಾರರು ಮ್ಯೂಚುವಲ್ ಫಂಡ್ ಗಳ ಮೇಲೆ ಯಾವ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಾರೆ ಎಂಬ ಅಂಶವು ಅವುಗಳ ಹೂಡಿಕೆಯನ್ನು ನಿರ್ಧರಿಸುವ ಪ್ರಾಥಮಿಕ ಅಂಶವಾಗಿರುತ್ತದೆ. ಏಕೆಂದರೆ, ರೀಟೇಲ್ ಹೂಡಿಕೆದಾರರು ವೇತನ ಕಡಿತ, ಉದ್ಯೋಗ ನಷ್ಟದಂಥ ಸಮಸ್ಯೆಗಳಿಗೆ ಮುಂದಿನ ತ್ರೈಮಾಸಿಕಗಳಲ್ಲಿ ಗುರಿ ಆಗಲಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಒಟ್ಟಾರೆಯಾಗಿ, ಮಾರ್ಚ್ 24ನೇ ತಾರೀಕಿನಿಂದ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾದ ಮೇಲೆ ಮ್ಯೂಚುವಲ್ ಫಂಡ್ ಗಳು ನಿವ್ವಳವಾಗಿ 1230 ಕೋಟಿ ರುಪಾಯಿ ಹೂಡಿಕೆ ಮಾಡಿವೆ. ಸೆಬಿಯ ಬಳಿ ಲಭ್ಯ ಇರುವ ಡೇಟಾದ ಮೂಲಕ ಈ ಅಂಶ ಗೊತ್ತಾಗುತ್ತದೆ. ಮಾರ್ಚ್ ಕೊನೆ ವಾರದಲ್ಲಿ 6,363 ಕೋಟಿ ರುಪಾಯಿ ಹೂಡಿಕೆ ಮಾಡಿದ್ದ ಮ್ಯೂಚುವಲ್ ಫಂಡ್ ಗಳು ಏಪ್ರಿಲ್ ನಲ್ಲಿ 7,965 ಕೋಟಿ ರುಪಾಯಿ ಹಿಂಪಡೆದಿದ್ದವು.

ಮೇ ತಿಂಗಳಲ್ಲಿ 2,832 ಕೋಟಿ ರುಪಾಯಿ ಹೂಡಿಕೆ ಮಾಡಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ ನಗದು ಇಟ್ಟುಕೊಂಡು, ಹೂಡಿಕೆ ಅವಕಾಶಕ್ಕಾಗಿ ಮ್ಯೂಚುವಲ್ ಫಂಡ್ ಗಳು ಕಾಯುತ್ತಿವೆ. ಮಾರ್ಚ್ ತಿಂಗಳಲ್ಲಿ ಹಲವು ಷೇರುಗಳು 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದ್ದವು. ಆ ಇಡೀ ತಿಂಗಳಲ್ಲಿ ಒಟ್ಟಾರೆಯಾಗಿ 30 ಸಾವಿರ ಕೋಟಿ ಹೂಡಿಕೆ ಮಾಡಿದ್ದವು.


Click it and Unblock the Notifications